ರೈಲು ಹತ್ತಬೇಕಿದ್ದ ವೃದ್ಧ ಕಾರ್ಮಿಕ ಬಸ್​ನಿಂದ ಇಳಿಯುವಾಗ.. ಕುಸಿದು ಬಿದ್ದು ಸಾವು

ನೆಲಮಂಗಲ: ಮಧ್ಯಾಹ್ನ ರೈಲಿನಲ್ಲಿ ಪ್ರಯಾಣಿಸಬೇಕಿದ್ದ ವೃದ್ಧ ಬಸ್​ನಿಂದ ಇಳಿಯುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಧ್ಯಪ್ರದೇಶದ ಶಾಜಾಪುರದ ನಿವಾಸಿ ಪ್ರಭುಲಾಲ್(68) ಮೃತ ವೃದ್ಧ. ಚಿಕ್ಕಮಗಳೂರಿನಿಂದ ಬೆಂಗಳೂರಿಗೆ KSRTC ಬಸ್​ನಲ್ಲಿ ವಲಸೆ ಕಾರ್ಮಿಕರನ್ನ ಕರೆತಂದಿದ್ರು. ಮಧ್ಯಾಹ್ನ 2ಗಂಟೆಗೆ ಚಿಕ್ಕಬಾಣಾವರದಿಂದ ಮಧ್ಯಪ್ರದೇಶದ ಗ್ವಾಲಿಯರ್​ಗೆ ತೆರಳುವ ರೈಲಿನಲ್ಲಿ ವೃದ್ಧ ಪ್ರಯಾಣಿಸಬೇಕಿತ್ತು. ಆದ್ರೆ ಏಕಾಏಕಿ ವೃದ್ಧ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅಟೋದಲ್ಲಿ ವೃದ್ಧನ ಸಂಬಂಧಿಕರು ಕರೆದೊಯ್ದಿದ್ದಾರೆ. ವೃದ್ಧ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಕೊರೊನಾ ಆತಂಕ […]

ರೈಲು ಹತ್ತಬೇಕಿದ್ದ ವೃದ್ಧ ಕಾರ್ಮಿಕ ಬಸ್​ನಿಂದ ಇಳಿಯುವಾಗ.. ಕುಸಿದು ಬಿದ್ದು ಸಾವು

Updated on: May 20, 2020 | 7:28 PM

ನೆಲಮಂಗಲ: ಮಧ್ಯಾಹ್ನ ರೈಲಿನಲ್ಲಿ ಪ್ರಯಾಣಿಸಬೇಕಿದ್ದ ವೃದ್ಧ ಬಸ್​ನಿಂದ ಇಳಿಯುವಾಗ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಧ್ಯಪ್ರದೇಶದ ಶಾಜಾಪುರದ ನಿವಾಸಿ ಪ್ರಭುಲಾಲ್(68) ಮೃತ ವೃದ್ಧ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ KSRTC ಬಸ್​ನಲ್ಲಿ ವಲಸೆ ಕಾರ್ಮಿಕರನ್ನ ಕರೆತಂದಿದ್ರು. ಮಧ್ಯಾಹ್ನ 2ಗಂಟೆಗೆ ಚಿಕ್ಕಬಾಣಾವರದಿಂದ ಮಧ್ಯಪ್ರದೇಶದ ಗ್ವಾಲಿಯರ್​ಗೆ ತೆರಳುವ ರೈಲಿನಲ್ಲಿ ವೃದ್ಧ ಪ್ರಯಾಣಿಸಬೇಕಿತ್ತು. ಆದ್ರೆ ಏಕಾಏಕಿ ವೃದ್ಧ ಕುಸಿದು ಬಿದ್ದಿದ್ದಾನೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಅಟೋದಲ್ಲಿ ವೃದ್ಧನ ಸಂಬಂಧಿಕರು ಕರೆದೊಯ್ದಿದ್ದಾರೆ. ವೃದ್ಧ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಕೊರೊನಾ ಆತಂಕ ಹಿನ್ನೆಲೆಯಲ್ಲಿ ವೃದ್ಧನ ಗಂಟಲು ದ್ರವ ಪರೀಕ್ಷೆಗೆ ಸಪ್ತಗಿರಿ ಆಸ್ಪತ್ರೆ ವೈದ್ಯರು ಮುಂದಾಗಿದ್ದಾರೆ. ಸ್ಥಳದಲ್ಲಿ ಸೋಲದೇವನಹಳ್ಳಿ ಪೊಲೀಸರು ಹಾಗೂ ಬಿಬಿಎಂಪಿ ಅರೋಗ್ಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೃದ್ಧ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಕಾಫಿ ಎಸ್ಟೇಟ್​ನಲ್ಲಿ ಕೆಲಸ ಮಾಡುತ್ತಿದ್ದ.

Published On - 7:04 pm, Wed, 20 May 20