ಗೆಳೆಯ ಗೆಳೆಯಾ.. ನಿನಗೆ Happy Birthday ಹಳೆಯ ಗೆಳೆಯನಿಗೆ ಪವರ್​ಸ್ಟಾರ್ ವಿಶ್!

ಸಾಧು ಶ್ರೀನಾಥ್​

|

Updated on: May 20, 2020 | 5:57 PM

ಗೆಳೆಯ ಗೆಳೆಯ.. ಗೆಲುವೇ ನಿನದಯ್ಯ! ಅಂತಾ ಅಪ್ಪುಗಾಗಿ ಹಾಡಿದ್ದ ಯಂಗ್ ಟೈಗರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸುಸಂದರ್ಭದಲ್ಲಿ ನೆಚ್ಚಿನ ಗೆಳೆಯನಿಗೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಮನಸಾರೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವಿಡಿಯೋವನ್ನೀಗ ಎನ್​ಟಿಆರ್ ಫ್ಯಾನ್ಸ್ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಪ್ಪು ಹಾಗೂ ಜೂ. ಎನ್​ಟಿಆರ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಎಲ್ಲಿಲ್ಲದ ಗೌರವ. ಹಾಗಂತ ಜೂ. ಎನ್​ಟಿಆರ್ ಅಷ್ಟೇ ಅಲ್ಲ. ಡಾ.ರಾಜ್​ಕುಮಾರ್ ಹಾಗೂ ಎನ್​ಟಿಆರ್ ಕೂಡ ಉತ್ತಮ ಸ್ನೇಹಿತರಾಗಿದ್ದರು. ಹೀಗಾಗಿ ಅಪ್ಪು […]

ಗೆಳೆಯ ಗೆಳೆಯಾ.. ನಿನಗೆ Happy Birthday ಹಳೆಯ ಗೆಳೆಯನಿಗೆ ಪವರ್​ಸ್ಟಾರ್ ವಿಶ್!

ಗೆಳೆಯ ಗೆಳೆಯ.. ಗೆಲುವೇ ನಿನದಯ್ಯ! ಅಂತಾ ಅಪ್ಪುಗಾಗಿ ಹಾಡಿದ್ದ ಯಂಗ್ ಟೈಗರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸುಸಂದರ್ಭದಲ್ಲಿ ನೆಚ್ಚಿನ ಗೆಳೆಯನಿಗೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಮನಸಾರೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದೇ ವಿಡಿಯೋವನ್ನೀಗ ಎನ್​ಟಿಆರ್ ಫ್ಯಾನ್ಸ್ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಪ್ಪು ಹಾಗೂ ಜೂ. ಎನ್​ಟಿಆರ್ ಇಬ್ಬರೂ ಉತ್ತಮ ಸ್ನೇಹಿತರು. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಎಲ್ಲಿಲ್ಲದ ಗೌರವ. ಹಾಗಂತ ಜೂ. ಎನ್​ಟಿಆರ್ ಅಷ್ಟೇ ಅಲ್ಲ. ಡಾ.ರಾಜ್​ಕುಮಾರ್ ಹಾಗೂ ಎನ್​ಟಿಆರ್ ಕೂಡ ಉತ್ತಮ ಸ್ನೇಹಿತರಾಗಿದ್ದರು. ಹೀಗಾಗಿ ಅಪ್ಪು ಹಾಗೂ ಜೂ. ಎನ್​ಟಿಆರ್ ಸ್ನೇಹ ಇಂದು ಹುಟ್ಟಿದ್ದಲ್ಲ. ಈ ಇಬ್ಬರು ಸೂಪರ್ ಸ್ಟಾರ್​ಗಳ ಸ್ನೇಹಕ್ಕೆ ಬಹಳ ಹಳೆಯ ಇತಿಹಾಸವಿದೆ. ಇದೇ ಸ್ನೇಹಕ್ಕೆ ಬೆಲೆ ಕೊಟ್ಟು ಅಪ್ಪು ನಟಿಸಿದ ಚಕ್ರವ್ಯೂಹ ಚಿತ್ರಕ್ಕೆ ಜೂ. ಎನ್​ಟಿಆರ್ ಗೆಳೆಯ.. ಗೆಳೆಯ ಅಂತ ಹಾಡಿದ್ದರು. ಈ ಹಾಡು ಇಬ್ಬರ ಸ್ನೇಹದ ಸಂಕೇತವಾಗಿ ಚಕ್ರವ್ಯೂಹದಲ್ಲಿ ಮೂಡಿ ಬಂದಿತ್ತು.

ರಾಜಮೌಳಿಯ RRR ಸಿನಿಮಾದಲ್ಲಿ ನಟಿಸುತ್ತಿರೋ ಜೂ.ಎನ್​ಟಿಆರ್ ಮೇ 20 ರಂದು 37ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹೀಗಾಗಿ ಅಪ್ಪು ಗೆಳೆಯನಿಗೆ ‘ಹ್ಯಾಪಿ ಬರ್ತ್​ಡೇ ಬ್ರದರ್’ ಅಂತ ಶುಭಾಶಯ ತಿಳಿಸಿದ್ದಾರೆ. ಹಾಗೇ ಟಾಲಿವುಡ್​ನ ಸ್ನೇಹಿತರು ಹಾಗೂ ಆಸ್ಟ್ರೇಲಿಯಾದ ಓಪನಿಂಗ್ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ ಕೂಡ ಯಂಗ್ ಟೈಗರ್​ಗೆ ವಿಭಿನ್ನವಾಗಿ ಬರ್ತ್​ಡೇ ವಿಶ್ ಮಾಡಿದ್ದಾರೆ.

https://twitter.com/i/status/1263042736976015360

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada