ತಿಂಗಳು ಹಿಂದೆಯೇ ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿ ನಿಧನ ಹೊಂದಿರುವನೆ? | Al-Qaeda chief Al-Jawahiri is dead: Report

ತಿಂಗಳು ಹಿಂದೆಯೇ ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿ ನಿಧನ ಹೊಂದಿರುವನೆ? | Al-Qaeda chief Al-Jawahiri is dead: Report

ಅತ್ಯಂತ ಕ್ರೂರ ಉಗ್ರ ಸಂಘಟನೆ ಅಲ್-ಖೈದಾದ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ (69) ಅಫ್ಘಾನಿಸ್ತಾನದಲ್ಲಿ ತಿಂಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿ ದೊರೆತಿದೆ. ಆದರೆ, ಅಲ್-ಖೈದಾ ಸಂಘಟನೆ ಆತನ ಸಾವನ್ನು ಇನ್ನೂ ದೃಢಪಡಿಸಿಲ್ಲ. ಅಸ್ತಮಾ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ ಅಲ್–ಜವಾಹಿರಿ ಅಫ್ಘಾನಿಸ್ತಾನದ ಘಜನಿಯಲ್ಲಿ ಮೃತಪಟ್ಟಿದ್ದಾನೆ ಎಂದು ಅರಬ್ ನ್ಯೂಸ್ ಕೂಡ ವರದಿ ಮಾಡಿದೆ. ಅಲ್-ಜವಾಹಿರಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದು ಎರಡು ತಿಂಗಳ ಹಿಂದೆ. ಸೆಪ್ಟೆಂಬರ 11ರಂದು ಬಿಡುಗಡೆಯಾಗಿದ್ದ ವಿಡಿಯೊನಲ್ಲಿ ಅವನು ಕಾಣಿಸಿಕೊಂಡಿದ್ದ. ಆ ವಿಡಿಯೊನಲ್ಲಿ ಅಲ್-ಜವಾಹಿರಿ, ಸೆಪ್ಟೆಂಬರ್11, […]

Arun Belly

|

Nov 20, 2020 | 9:04 PM

ಅತ್ಯಂತ ಕ್ರೂರ ಉಗ್ರ ಸಂಘಟನೆ ಅಲ್-ಖೈದಾದ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ (69) ಅಫ್ಘಾನಿಸ್ತಾನದಲ್ಲಿ ತಿಂಗಳ ಹಿಂದೆಯೇ ಮೃತಪಟ್ಟಿದ್ದಾನೆ ಎಂದು ನಂಬಲರ್ಹ ಮೂಲಗಳಿಂದ ಮಾಹಿತಿ ದೊರೆತಿದೆ. ಆದರೆ, ಅಲ್-ಖೈದಾ ಸಂಘಟನೆ ಆತನ ಸಾವನ್ನು ಇನ್ನೂ ದೃಢಪಡಿಸಿಲ್ಲ.

ಅಸ್ತಮಾ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದ ಅಲ್ಜವಾಹಿರಿ ಅಫ್ಘಾನಿಸ್ತಾನದ ಘಜನಿಯಲ್ಲಿ ಮೃತಪಟ್ಟಿದ್ದಾನೆ ಎಂದು ಅರಬ್ ನ್ಯೂಸ್ ಕೂಡ ವರದಿ ಮಾಡಿದೆ.

ಅಲ್-ಜವಾಹಿರಿ ಕೊನೆಯಬಾರಿಗೆ ಕಾಣಿಸಿಕೊಂಡಿದ್ದು ಎರಡು ತಿಂಗಳ ಹಿಂದೆ. ಸೆಪ್ಟೆಂಬರ 11ರಂದು ಬಿಡುಗಡೆಯಾಗಿದ್ದ ವಿಡಿಯೊನಲ್ಲಿ ಅವನು ಕಾಣಿಸಿಕೊಂಡಿದ್ದ. ಆ ವಿಡಿಯೊನಲ್ಲಿ ಅಲ್-ಜವಾಹಿರಿ, ಸೆಪ್ಟೆಂಬರ್11, 2001 ರಂದು ಅಮೆರಿಕದ ಮೇಲೆ ಅಲ್-ಖೈದಾ ನಡೆಸಿದ ಭೀಕರ ದಾಳಿ ಬಗ್ಗೆ ಮಾತನಾಡಿದ್ದ. ಅದಾದ ನಂತರ ಮತ್ತೆಲ್ಲೂ ಅವನು ಕಾಣಿಸಿಕೊಂಡಿರಲಿಲ್ಲ.

ಅಲ್ ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್​ನನ್ನು 2011ರ ಮೇ ತಿಂಗಳಲ್ಲಿ ಅಮೆರಿಕ ಹತ್ಯೆ ಮಾಡಿದ ನಂತರ ಅಲ್-ಜವಾಹಿರಿ ಸಂಘಟನೆಯ ನೇತೃತ್ವವಹಿಸಿಕೊಂಡಿದ್ದ. ಮೂಲಗಳ ಪ್ರಕಾರ ಅವನು ವೈದ್ಯನೂ ಆಗಿದ್ದ.

ಈಜಿಪ್ಟ್ ಮೂಲದವನಾಗಿದ್ದ ಅಲ್-ಜವಾಹಿರಿ, ಈಜಿಪ್ಷಿಯನ್ ಇಸ್ಲಾಮಿಕ್ ಜಿಹಾದ್ (ಇಐಜೆ) ಎಂಬ ಸಂಘಟನೆಯನ್ನೂ ಹುಟ್ಟುಹಾಕಿದ್ದ.

Follow us on

Related Stories

Most Read Stories

Click on your DTH Provider to Add TV9 Kannada