ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನ: ಸಹಕರಿಸದ ಮಹಿಳೆಯನ್ನ ಕೊಂದ ಪಾಪಿ ಮಾಡಿದ್ದೇನು ಗೊತ್ತಾ?

ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನ: ಸಹಕರಿಸದ ಮಹಿಳೆಯನ್ನ ಕೊಂದ ಪಾಪಿ ಮಾಡಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಮೇಲೆ ಕಣ್ಣು ಹಾಕಿದ್ದ ವಿಕೃತ ಕಾಮಿಯೋರ್ವ, ಅತ್ಯಾಚಾರಕ್ಕೆ ಸಹಕರಿಸಲಿಲ್ಲ ಅಂತಾ ಕತ್ತು ಹಿಸುಕಿ ಮಹಿಳೆಯನ್ನ ಕೊಂದು ನಂತರ ಶವದ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಆದ್ರೆ ಪೊಲೀಸರು ವಿಕೃತ ಕಾಮಿಯನ್ನ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೋನಾಪುರ ಗ್ರಾಮದ 27 ವರ್ಷದ ಗೃಹಿಣಿ ಶೋಭಾ ತನ್ನ ಸ್ವಂತ ಜಮೀನಿನಲ್ಲಿ ಕಡಲೇಕಾಯಿ ಬಿಡಿಸುತ್ತಿದ್ದಳು. ಇದೇ ಸಂದರ್ಭಕ್ಕೆ ಹೊಂಚು ಹಾಕಿ ಕಾಯುತ್ತಿದ್ದ ಅದೊಬ್ಬ ವ್ಯಕ್ತಿ, ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು, […]

pruthvi Shankar

|

Nov 21, 2020 | 7:07 AM

ಚಿಕ್ಕಬಳ್ಳಾಪುರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯ ಮೇಲೆ ಕಣ್ಣು ಹಾಕಿದ್ದ ವಿಕೃತ ಕಾಮಿಯೋರ್ವ, ಅತ್ಯಾಚಾರಕ್ಕೆ ಸಹಕರಿಸಲಿಲ್ಲ ಅಂತಾ ಕತ್ತು ಹಿಸುಕಿ ಮಹಿಳೆಯನ್ನ ಕೊಂದು ನಂತರ ಶವದ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಆದ್ರೆ ಪೊಲೀಸರು ವಿಕೃತ ಕಾಮಿಯನ್ನ ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೋನಾಪುರ ಗ್ರಾಮದ 27 ವರ್ಷದ ಗೃಹಿಣಿ ಶೋಭಾ ತನ್ನ ಸ್ವಂತ ಜಮೀನಿನಲ್ಲಿ ಕಡಲೇಕಾಯಿ ಬಿಡಿಸುತ್ತಿದ್ದಳು. ಇದೇ ಸಂದರ್ಭಕ್ಕೆ ಹೊಂಚು ಹಾಕಿ ಕಾಯುತ್ತಿದ್ದ ಅದೊಬ್ಬ ವ್ಯಕ್ತಿ, ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು, ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಕತ್ತು ಹಿಸುಕಿ ಕೊಂದು ಶವದ ಮೇಲೆ ಅತ್ಯಾಚಾರವೆಸಗಿದ್ದ.. ಆಗ ಶೋಭಾ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆಕೆಯ ಕತ್ತು ಹಿಸುಕಿ ಕೊಂದು ಶವದ ಮೇಲೆ ಅತ್ಯಾಚಾರವೆಸಗಿ ವಿಕೃತ ಕಾಮ ಮೆರೆದಿದ್ದ. ಕೊಲೆ ನಡೆದು ಬರೋಬ್ಬರಿ 1 ತಿಂಗಳಲ್ಲಿ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ಬೆಂಡೆತ್ತಿದ್ದಾರೆ.

ಅಸಲಿಗೆ ಬಂಧಿತ ಆರೋಪಿ ಕೆ.ಎನ್. ಶಂಕರಪ್ಪ ಆಗಿದ್ದು, ಆಂಧ್ರದ ಎದ್ದುಲೋಳ್ಳಪಲ್ಲಿ ನಿವಾಸಿ. ಸ್ನೇಹಿತನ ಮನೆಗೆ ಅಂತ ಕರ್ನಾಟಕ ಕೋನಾಪುರ ಗ್ರಾಮಕ್ಕೆ ಬಂದಿದ್ದ, ಕೂಲಿ ಮಾಡಿಕೊಂಡು ಇಲ್ಲೆ ಇರ್ತೀನಿ ಅಂತ ಹೇಳಿದ್ದ. ಆದ್ರೆ ಕೂಲಿ ಕೆಲ್ಸಕ್ಕೆ ಹೋಗೋದ್ರ ಬದಲು ಕೆಲಸದಲ್ಲಿ ನಿರತವಾಗಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಹೋಗಿ ಕೊನೆಗೆ ಆಕೆಯನ್ನು ಕೊಂದು ಆಕೆಯ ಶವದ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.

ಒಟ್ನಲ್ಲಿ ಆಂಧ್ರ ಮೂಲದ ಆರೋಪಿ ಶಂಕರಪ್ಪ, ಮೊದ್ಲೇ ಕಳೆದ 2 ವರ್ಷಗಳ ಹಿಂದೆ ಹೆಂಡತಿಯನ್ನ ತೊರೆದು ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಪಾಪಿಯ ವಿಕೃತಿಯನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಈ ರೀತಿ ಎಲ್ಲಾದ್ರೂ ಮಾಡಿದ್ದಾನಾ ಅನ್ನೋದ್ರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada