ಕಾರಟಗಿಯ ಅಮರಯ್ಯ ಸ್ವಾಮೀಜಿ ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು ದೀರ್ಘದಂಡ ನಮಸ್ಕಾರ ಹಾಕುತ್ತಾ ಹತ್ತಿದರು!

ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನ ತಲುಪಬೇಕಾದರೆ 575 ಮೆಟ್ಟಿಲು ಹತ್ತಬೇಕು. ಈ ಸ್ವಾಮೀಜಿ ಅಷ್ಟು ಮೆಟ್ಟಿಲುಗಳನ್ನು ದೀರ್ಘ ದಂಡ ನಮಸ್ಕಾರ ಹಾಕುತ್ತಾ ಹತ್ತಿದ್ದಾರೆ!

TV9kannada Web Team

| Edited By: Rashmi Kallakatta

Jun 25, 2022 | 9:12 PM

ಕೊಪ್ಪಳ ಜಿಲ್ಲೆ ಕಾರಟಗಿ ತಾಲ್ಲೂಕಿನ ಮೈಲಾಪುರ ಗ್ರಾಮದ ಅಮರಯ್ಯ ಸ್ವಾಮೀಜಿಯವರ ಸಾಹಸ, ಹನಮ ನಿಷ್ಠೆ, ರಾಮಭಕ್ತಿ ಮೆಚ್ಚುವಂಥದ್ದು ಮತ್ತು ಅಸಾಮಾನ್ಯವಾದದ್ದು. ನಾವೆಲ್ಲ ನಮ್ಮ ಆಫೀಸುಗಳ ಮೊದಲ ಮಹಡಿಗೆ ಹೋಗಬೇಕಾದರೆ ಲಿಫ್ಟ್ ಬಳಸುತ್ತೇವೆ. ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮನ ದೇವಸ್ಥಾನ ತಲುಪಬೇಕಾದರೆ 575 ಮೆಟ್ಟಿಲು ಹತ್ತಬೇಕು. ಈ ಸ್ವಾಮೀಜಿ ಅಷ್ಟು ಮೆಟ್ಟಿಲುಗಳನ್ನು ದೀರ್ಘ ದಂಡ ನಮಸ್ಕಾರ ಹಾಕುತ್ತಾ ಹತ್ತಿದ್ದಾರೆ! ಅದಕ್ಕೇ ನಾವು ಹೇಳಿದ್ದು, ಅವರ ಸಾಹಸ ದೊಡ್ಡದು ಅಂತ!

ಇದನ್ನೂ ಓದಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 1 ರಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಸ್ಟ್ರೈಕ್!

Follow us on

Click on your DTH Provider to Add TV9 Kannada