BJP ಸೇರಿದ ನಾವ್ 17 ಮಂದಿ ಮುತ್ತುಗಳು ಇದ್ದಂತೆ: ‘ವಿಜಯನಗರ ಸಾಮ್ರಾಟ್’ ಆನಂದ್ ಸಿಂಗ್
ಬಳ್ಳಾರಿ: ನಾವು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೆವು. ಬಿಜೆಪಿ ಸೇರಿದ ನಾವು 17 ಜನರೂ ಮುತ್ತುಗಳು ಇದ್ದಂತೆ. ಎಲ್ಲಾ ಸಚಿವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಆ ರೀತಿಯಾಗಿ ನೋಡುವುದಾದ್ರೆ ನಾನು ಹಿಂದೆ ಇದ್ದೇನೆ ಎಂದು ಹೊಸಪೇಟೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ನಾನು ಕೂಡ ರಾಜ್ಯಾದ್ಯಂತ ಸುತ್ತಿ ಕೆಲಸ ಮಾಡುತ್ತೇನೆ. ವಿಜಯನಗರ ಜಿಲ್ಲೆ ಮಾಡುವುದಾಗಿ ಶಪಥ ಮಾಡಿದ್ದೆ. ಇದು ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಜನರ ಬೇಡಿಕೆಯಾಗಿತ್ತು. ಯಾರೂ ವೈಯಕ್ತಿಕ ತೆಗೆದುಕೊಳ್ಳಬಾರದು. […]

ಬಳ್ಳಾರಿ: ನಾವು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೆವು. ಬಿಜೆಪಿ ಸೇರಿದ ನಾವು 17 ಜನರೂ ಮುತ್ತುಗಳು ಇದ್ದಂತೆ. ಎಲ್ಲಾ ಸಚಿವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಆ ರೀತಿಯಾಗಿ ನೋಡುವುದಾದ್ರೆ ನಾನು ಹಿಂದೆ ಇದ್ದೇನೆ ಎಂದು ಹೊಸಪೇಟೆಯಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಾನು ಕೂಡ ರಾಜ್ಯಾದ್ಯಂತ ಸುತ್ತಿ ಕೆಲಸ ಮಾಡುತ್ತೇನೆ. ವಿಜಯನಗರ ಜಿಲ್ಲೆ ಮಾಡುವುದಾಗಿ ಶಪಥ ಮಾಡಿದ್ದೆ. ಇದು ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಜನರ ಬೇಡಿಕೆಯಾಗಿತ್ತು. ಯಾರೂ ವೈಯಕ್ತಿಕ ತೆಗೆದುಕೊಳ್ಳಬಾರದು. ನಾನೊಬ್ಬನೇ ಜಿಲ್ಲೆ ಮಾಡುವಷ್ಟೂ ದೊಡ್ಡವನಲ್ಲ. ಜನರ ಹೋರಾಟ ಮತ್ತು ಪಂಪಾ ವಿರೂಪಾಕ್ಷನ ಆಶೀರ್ವಾದದಿಂದಲೇ ಜಿಲ್ಲೆ ಆಗಿದೆ. ಇದು ನಿಜಕ್ಕೂ ಚಮತ್ಕಾರವೇ ಸರಿ. ಯಡಿಯೂರಪ್ಪ ಸಂಪುಟದ ಎಲ್ಲ ಸಚಿವರೂ ಒಕ್ಕೊರಲಿನಿಂದ ಒಪ್ಪಿಗೆ ನೀಡಿದರು. ಇದೀಗ, ಜನರ ಹೋರಾಟ, ದೇವರ ಆಶೀರ್ವಾದದಿಂದ ಜಿಲ್ಲೆ ಆಗಿದೆ ಎಂದು ಆನಂದ್ ಸಿಂಗ್ ಹೇಳಿದರು.
‘ಎಲ್ಲರೂ ರಾಹುಕಾಲ, ಗುಳಿಕಕಾಲ ಅಂತಾ ಟೈಂ ನೋಡ್ತಿದ್ರು’
ಈ ನಡುವೆ, ನಾವೆಲ್ಲರೂ ರಾಜೀನಾಮೆ ನೀಡಿ ಬಾಂಬೆಗೆ ಹೋಗಿದ್ದೆವು. ಆನಂದ್ ಸಿಂಗ್ ರಾಜೀನಾಮೆ ನೀಡಿ ಹೊಸಪೇಟೆಯಲ್ಲಿದ್ದರು. ವಿಜಯನಗರ ಜಿಲ್ಲೆಗಾಗಿ ಅವರು ರಾಜೀನಾಮೆ ನೀಡಿದ್ದರು ಎಂದು ಹೊಸಪೇಟೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಎಲ್ಲರೂ ರಾಹುಕಾಲ, ಗುಳಿಕಕಾಲ ಅಂತಾ ಟೈಂ ನೋಡ್ತಿದ್ರು. ಆದರೆ, ನಮ್ಮ ವಿಜಯನಗರ ಸಾಮ್ರಾಟ್ ಆನಂದ್ ಸಿಂಗ್ ಏನೂ ನೋಡಿಲ್ಲ. ನೇರವಾಗಿ ಹೋಗಿ ರಾಜೀನಾಮೆ ನೀಡಿ, ಹೊರಗೆ ಬಂದಿದ್ದರು ಎಂದು ಹೇಳಿದರು.
Published On - 5:04 pm, Thu, 19 November 20