AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Shetty: ಟ್ರೋಲ್​ಗೆ ಹೆದರದೆ ಹೊಸ ಸಿನಿಮಾದ ಪೊಸ್ಟರ್ ಬಿಡುಗಡೆ ಮಾಡಿದ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ ತಮ್ಮ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ತಮ್ಮದೇ ಹೆಸರು ಹೊಂದಿರುವ ಸಿನಿಮಾದಲ್ಲಿ ಅನುಷ್ಕಾ ನಟಿಸಿದ್ದಾರೆ.

Anushka Shetty: ಟ್ರೋಲ್​ಗೆ ಹೆದರದೆ ಹೊಸ ಸಿನಿಮಾದ ಪೊಸ್ಟರ್ ಬಿಡುಗಡೆ ಮಾಡಿದ ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ ಹೊಸ ಸಿನಿಮಾ
ಮಂಜುನಾಥ ಸಿ.
|

Updated on:Mar 01, 2023 | 7:02 PM

Share

ಸುಮಾರು ಒಂದುವರೆ ದಶಕಕ್ಕೂ ಹೆಚ್ಚು ಕಾಲ ತೆಲುಗು ಚಿತ್ರರಂಗವನ್ನು ಆಳಿದ ನಟಿ ಅನುಷ್ಕಾ ಶೆಟ್ಟಿ (Anushka Shetty) ‘ಬಾಹುಬಲಿ 2’ (Bahubali 2) ಸಿನಿಮಾ ಬಿಡುಗಡೆ ಬಳಿಕ ಮಂಕಾಗಿದ್ದರು. ವಯೋಸಹಜವಾಗಿ ಏರಿದ ದೇಹದ ತೂಕ ನಟಿಯನ್ನು ಅವಕಾಶಗಳಿಂದ ವಂಚಿತಗೊಳಿಸಿತ್ತು. ಇತ್ತೀಚೆಗಂತೂ ತಮ್ಮ ದೇಹ ತೂಕದಿಂದಾಗಿ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಟ್ರೋಲ್​ಗೆ ಗುರಿಯಾಗಿದ್ದರು ನಟಿ ಅನುಷ್ಕಾ. ಈ ಬಾಡಿ ಶೇಮಿಂಗ್ ನಡುವೆಯೇ ಅನುಷ್ಕಾ, ತಮ್ಮ ಹೊಸ ಸಿನಿಮಾದ ಪೋಸ್ಟರ್ ಅನ್ನು ಇಂದು (ಮಾರ್ಚ್ 1) ಬಿಡುಗಡೆ ಮಾಡಿದ್ದಾರೆ.

ಅನುಷ್ಕಾ ಶೆಟ್ಟಿ ನಟನೆಯಿಂದ ನಿವೃತ್ತಿ ಪಡೆದರಾ? ಇನ್ನು ಮುಂದೆ ಸಿನಿಮಾಗಳು ಮಾಡುವುದಿಲ್ಲ. ಮಾಡುತ್ತಾರೆ ಎಂದಾದರೆ ಯಾವ ಸಿನಿಮಾ ಎಂಬಿತ್ಯಾದಿ ಪ್ರಶ್ನೆಗಳು ಅವರ ಅಭಿಮಾನಿಗಳನ್ನು ಕಾಡುತ್ತಲೇ ಇತ್ತು. ಆಗಾಗೊಮ್ಮೆ ಈಗೊಮ್ಮೆ ಅನುಷ್ಕಾರ ಹೊಸ ಸಿನಿಮಾದ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿದ್ದವು ಆದರೆ ಅವ್ಯಾವುವು ಖಾತ್ರಿಯಾಗಿರಲಿಲ್ಲ. ಈಗ ನಟಿ ಅನುಷ್ಕಾ ಆ ಎಲ್ಲ ಪ್ರಶ್ನೆಗಳಿಗೆ ಪೂರ್ಣವಿರಾಮವಿಟ್ಟಿದ್ದು, ತಮ್ಮ ಮುಂದಿನ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ ಪೋಸ್ಟರ್​ನಲ್ಲಿ ಅನುಷ್ಕಾ ಶೆಟ್ಟಿ, ಹಳೆಯ ಅನುಷ್ಕಾ ರೀತಿಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಹೆಸರಿನ ಸಿನಿಮಾದ ಪೋಸ್ಟರ್ ಅನ್ನು ಅನುಷ್ಕಾ ಹಂಚಿಕೊಂಡಿದ್ದು, ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಾಯಕಿ, ನಾಯಕ ನವೀನ್ ಪೋಲಿಶೆಟ್ಟಿ. ನಾಯಕ-ನಾಯಕಿಯ ನಿಜ ಹೆಸರ ಸೆಕೆಂಡ್ ನೇಮ್ ಅನ್ನು   ಸಿನಿಮಾಕ್ಕೆ ಇರಿಸಲಾಗಿದ್ದು, ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿರಲಿದೆಯೆಂಬುದು ಪೋಸ್ಟರ್​ನಿಂದ ತಿಳಿದು ಬರುತ್ತಿದೆ.

ಈಗ ಬಿಡುಗಡೆ ಮಾಡಿರುವ ಪೋಸ್ಟರ್​ನಲ್ಲಿ ನಟಿ ಅನುಷ್ಕಾ ಶೆಟ್ಟಿ ಬಹು ಮುದ್ದಾಗಿ ಕಾಣುತ್ತಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ಅವರ ಚಿತ್ರಕ್ಕೂ ಪೋಸ್ಟರ್​ನಲ್ಲಿನ ಅವರ ಚಿತ್ರಕ್ಕೂ ಹೋಲಿಕೆ ಅಜಗಜಾಂತರ.  ಪೋಸ್ಟರ್​ನಲ್ಲಿ ಅನುಷ್ಕಾ ಶೆಟ್ಟಿ ‘ಹ್ಯಾಪಿ ಸಿಂಗಲ್’ ಹೆಸರಿನ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದರೆ, ನಾಯಕ ಪೋಲಿಶೆಟ್ಟಿ ‘ರೆಡಿ ಟು ಮಿಂಗಲ್’ ಎಂದು ಬರೆದಿರುವ ಟಿ-ಶರ್ಟ್ ಧರಿಸಿದ್ದಾರೆ.

‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾವನ್ನು ಮಹೇಶ್​ಬಾಬು ಪಚ್ಚಿಗೊಲ್ಲ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು ಕೆಲವೇ ದಿನಗಳಲ್ಲಿ ಸಿನಿಮಾದ ಟ್ರೈಲರ್ ಸಹ ಹೊರಬರಲಿದೆ. ಸಿನಿಮಾದ ನಾಯಕ ಪೋಲಿಶೆಟ್ಟಿಗೆ ಇದು ನಾಯಕನಾಗಿ ತೆಲುಗಿನಲ್ಲಿ ಮೂರನೇ ಸಿನಿಮಾ. ಹಿಂದಿಯಲ್ಲಿ ಯೂಟ್ಯೂಬ್​ಗಾಗಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ ನವೀನ್ ಪೋಲಿಶೆಟ್ಟಿ ಪ್ರತಿಭಾವಂತ. ಈಗಾಗಲೇ ಹಿಂದಿಯಲ್ಲಿ ಸುಶಾಂತ್ ಸಿಂಗ್ ಜೊತೆಗೆ ‘ಚಿಚೋರೆ’ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ‘ಏಜೆಂಟ್ ಸಾಯಿ ಶ್ರೀನಿವಾಸ್ ಆತ್ರೆಯ’ ಹಾಗೂ ‘ಜಾತಿರತ್ನಾಲು’ ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಈ ಎರಡೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ.

ಇನ್ನು ಅನುಷ್ಕಾ ಶೆಟ್ಟಿ 2020 ರಲ್ಲಿ ಒಟಿಟಿಗೆ ಬಂದ ‘ನಿಶ್ಯಬ್ಧಂ’ ಸಿನಿಮಾ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಮೂಲಕ ಅನುಷ್ಕಾ ಕಮ್ ಬ್ಯಾಕ್ ಮಾಡುತ್ತಾರಾ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Wed, 1 March 23

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್