ಬ್ರಿಟೀಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ ಅಂಬಾಸಿಡರ್ (BAFTA) ‘ಬ್ರೇಕ್ಥ್ರೂ ಇನಿಶಿಯೇಟಿವ್’ ರಾಯಭಾರಿಯಾಗಿ ಸೋಮವಾರ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ರನ್ನು ಆಯ್ಕೆ ಮಾಡಲಾಯಿತು.
ಬಾಫ್ಟಾ ಬ್ರೇಕ್ಥ್ರೂ, ಭಾರತದಲ್ಲಿ ಚಲನಚಿತ್ರ, ಕ್ರೀಡೆ ಹಾಗೂ ದೂರದರ್ಶನದಲ್ಲಿ ಕೆಲಸ ಮಾಡುವ 5 ಪ್ರತಿಭೆಗಳನ್ನು ಗುರುತಿಸುತ್ತದೆ. ಪ್ರತಿಭೆಗಳನ್ನು ಗುರುತಿಸುವಂತಹ ಬಾಫ್ಟಾ ಜೊತೆ ಕೆಲಸ ಮಾಡಲು ನನಗೆ ಖುಷಿ ಇದೆ. ಪ್ರತಿಭಾವಂತ ಕಲಾವಿದರ ಜೊತೆ ಸಂಪರ್ಕ ಬೆಳೆಸಲು ಹಾಗೂ ನಾಮಿನಿಗಳಿಗೆ ಮಾರ್ಗದರ್ಶನ ನೀಡಲು ಇದೊಂದು ಅನನ್ಯ ಅವಕಾಶ ಎಂದು ರೆಹಮಾನ್ ಅಭಿಪ್ರಾಯಪಟ್ಟರು.
ಇನ್ನು ಮುಂದೆ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಎ.ಆರ್. ರೆಹಮಾನ್ ತೊಡಗಿಕೊಳ್ಳುತ್ತಾರೆ. ನಮ್ಮ ತಂಡದಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ಇದಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ಬಾಫ್ಟಾ ಮುಖ್ಯ ಕಾರ್ಯನಿರ್ವಾಹಕ ಅಮಂಡಾ ಬೆರ್ರಿ ಒಬಿಇ ಹೇಳಿದರು.
ಏನಿದು ಬಾಫ್ಟಾ ಬ್ರೇಕ್ಥ್ರೂ ?
ಬಾಫ್ಟಾ ಬ್ರೇಕ್ಥ್ರೂ ಇಂಡಿಯಾ ಉಪಕ್ರಮದಲ್ಲಿ 5 ಪ್ರತಿಭೆಗಳನ್ನು ಆಯ್ಕೆ ಮಾಡುತ್ತದೆ. ಭಾಗವಹಿಸುವವರು ಒಬ್ಬರಿಂದ ಒಬ್ಬರಿಗೆ ಮಾರ್ಗದರ್ಶನ, ಜಾಗತಿಕ ನೆಟ್ವರ್ಕ್ ಅವಕಾಶ, 12 ತಿಂಗಳ ಕಾಲ ಬಾಫ್ಟಾ ಕಾರ್ಯಕ್ರಮ ಮತ್ತು ಪ್ರದರ್ಶನಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ ಮತ್ತು ಬಾಫ್ಟಾದ ಸದಸ್ಯತ್ವವನ್ನು ಪಡೆದುಕೊಳ್ಳುತ್ತಾರೆ.