GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಆರ್​ಎಸ್​-ಎಐಎಂ​ಐಎಂ ನ ಹೈದರಾಬಾದ್ ನಡುವೆ ಯುದ್ಧ

ಹೈದರಾಬಾದ್ ಬಿಟ್ಟು ಹೊರಗಡೆ ಇರುವ ಬೇರೆ ಯಾರಿಗೆ ಆ ಚುನಾವಣೆಯಲ್ಲಿ ಕುತೂಹಲ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮಾತ್ರ ಈ ಚುನಾವಣೆ ಬಹಳ ಮುಖ್ಯ. ಅದಕ್ಕೆ ಅಲ್ಲವೇ, ಅನೇಕ ರಾಷ್ಟ್ರೀಯ ನಾಯಕರ ಜೊತೆ ಗೃಹ ಸಚಿವ ಅಮಿತ್ ಶಾ ಕೂಡ ಇಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದು.

GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಆರ್​ಎಸ್​-ಎಐಎಂ​ಐಎಂ ನ ಹೈದರಾಬಾದ್ ನಡುವೆ ಯುದ್ಧ
GHMC ಚುನಾವಣೆ: ಬಿಜೆಪಿಯ ಭಾಗ್ಯ ನಗರ vs ಟಿಎರ್​ಎಸ್​-ಎಐಎಂ​ಐಎಂ ನ ಹೈದರಾಬಾದ್ ನಡುವೆ ಯುದ್ಧ
Follow us
ಡಾ. ಭಾಸ್ಕರ ಹೆಗಡೆ
| Updated By: ಸಾಧು ಶ್ರೀನಾಥ್​

Updated on:Dec 03, 2020 | 4:36 PM

ಇಷ್ಟಕ್ಕೂ, ಅದನ್ನೊಂದು ಯಕಃಶ್ಚಿತ್ ನಗರಸಭೆ ಚುನಾವಣೆ ಎಂದು ಅಂದುಕೊಂಡರೆ ತಪ್ಪಾದೀತು. ನಾಳೆ (ಡಿಸೆಂಬರ್ 1, 2020) ರಂದು ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್ (GHMC) ಗಾಗಿ ಮತದಾನ ನಡೆಯುತ್ತಿದೆ. ಹೈದರಾಬಾದ್ ಬಿಟ್ಟು ಹೊರಗಡೆ ಇರುವ ಬೇರೆ ಯಾರಿಗೆ ಆ ಚುನಾವಣೆಯಲ್ಲಿ ಕುತೂಹಲ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಮಾತ್ರ ಈ ಚುನಾವಣೆ ಬಹಳ ಮುಖ್ಯ. ಅದಕ್ಕೆ ಅಲ್ಲವೇ, ಅನೇಕ ರಾಷ್ಟ್ರೀಯ ನಾಯಕರ ಜೊತೆ ಗೃಹ ಸಚಿವ ಅಮಿತ್ ಶಾ ಕೂಡ ಇಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದು.

ಮೊದಲು ಈ ಚುನಾವಣೆಯ ಕುರಿತು ಮಾಹಿತಿ

ಡಿಸೆಂಬರ್ 1 ರಂದು ನಡೆಯುವ ಮತದಾನದಲ್ಲಿ Electronic Voting Machine (EVM) ಬಳಸಲಾಗುವುದಿಲ್ಲ. ಹಳೇ ಕಾಲದ ಮತಪತ್ರದ ಮತದಾನ ಇದಾಗಿರುತ್ತದೆ. ಡಿಸೆಂಬರ್ 4 ಕ್ಕೆ ಮತ ಎಣಿಕೆ ಮಾಡಲಾಗುತ್ತದೆ. ಇಲ್ಲಿ 150 ವಾರ್ಡ್ ಇವೆ. 2016 ರ ಚುನಾವಣೆಯಲ್ಲಿ ಅಸಾದುದ್ದೀನ್ ಒವೈಸಿ ಅವರ AIMIM ಪಕ್ಷ 44 ವಾರ್ಡ ಗೆದ್ದಿತು ಮತ್ತು ತೆಲಂಗಾಣ ರಾಷ್ಟ್ರ ಪರಿಷತ್ 99 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಬಿಜೆಪಿ ಟಿಡಿಪಿ, ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳು ಉಳಿದ ಏಳು ಸ್ಥಾನಗಳನ್ನು ಹಂಚಿಕೊಂಡಿದ್ದವು. GHMC ಗೆ ಬರುವ ಭೌಗೋಲಿಕ ಪ್ರದೇಶವನ್ನು ಗಮನಿಸಿದರೆ, ಇಲ್ಲಿನ ಮತದಾರರಲ್ಲಿ ಸುಮಾರು 42-44 ಪ್ರತಿಶತ ಮುಸ್ಲಿಮರು ಇದ್ದಾರೆ.

ಬಿಜೆಪಿ ತಂತ್ರಗಾರಿಕೆಯ ಇತಿಹಾಸ

ಭಾರತೀಯ ಜನತಾ ಪಕ್ಷದ ಚುನಾವಣಾ ತಂತ್ರಗಾರಿಕೆಯ ಇತಿಹಾಸವನ್ನು ನೋಡಿದರೆ, ಬಿಜೆಪಿ ಯಾವ ಚುನಾವಣೆಯನ್ನೂ  ಸಣ್ಣದು ದೊಡ್ಡದು ಎಂದು ನೋಡುವುದಿಲ್ಲ. ಪ್ರತಿ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳುವ ಪಕ್ಷ ಬಿಜೆಪಿ. 2017 ರಲ್ಲಿ, ಬಿಜೆಪಿಯ ಅಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

2017 ರಲ್ಲಿ ನಡೆದ ಓಡಿಶಾದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿತು. ಮೊದಲ ಬಾರಿಗೆ, 853 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ, 297ನ್ನು ಗೆದ್ದಿತ್ತು. 2012 ರಲ್ಲಿ ನಡೆದಿದ್ದ ಓಡಿಶಾದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 36 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ 2016 ರಲ್ಲಿ 297 ಕ್ಕೆ ಏರಿಸಿಕೊಂಡು ತನ್ನ ಬಲವನ್ನು ತೋರಿಸಿತ್ತು. ಇದು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಬಲ ಹೆಚ್ಚಿಸಿಕೊಳ್ಳಲು ಅನುಕೂಲವಾಗಿತ್ತು.

2014 ರಲ್ಲಿ ಬರೀ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದ್ದ ಬಿಜೆಪಿ 2019 ರಲ್ಲಿ ಓಡಿಶಾದಿಂದ ಎಂಟು ಲೋಕಸಭಾ ಸ್ಥಾನ ಗೆದ್ದಿತ್ತು. ಇದು ಬಿಜೆಪಿಗೆ ಹೊಸ ಭರವಸೆ ನೀಡಿತ್ತು ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಇದೇ ರೀತಿ ತಂತ್ರಗಾರಿಕೆ ಅಳವಡಿಸಿಕೊಳ್ಳಲು ಅನುಕೂಲವಾಯಿತು. ಇದೇ ತಂತ್ರಗಾರಿಕೆಯನ್ನು ಮಾಡಿದ ಬಿಜೆಪಿ ಇಂದು ಬೃಹನ್ಮುಂಬಯಿ ನಗರ ಪಾಲಿಕೆಯಲ್ಲೂ ಯಶಸ್ಸನ್ನು ಕಂಡಿತು. ಬೃಹನ್ಮುಂಬಯಿ ನಗರ ಪಾಲಿಕೆಯ 227 ಸ್ಥಾನಗಳಲ್ಲಿ, ಶಿವ ಸೇನಾ 97, ಬಿಜೆಪಿ 82 ಸ್ಥಾನವನ್ನು ಪಡೆದಿವೆ. ಒಂದು ಕಾಲದಲ್ಲಿ ಬಿಜೆಪಿ ಇಲ್ಲಿ ಎಡ್ರೆಸ್ಸಿಗೆ ಇರಲಿಲ್ಲ. ಮುಂಬಯಿಯಲ್ಲಿ ಶಿವ ಸೇನಾದ ಆಟಾಟೋಪದ ಮುಂದೆ ಬಿಜೆಪಿಯ ಗೈರತ್ತು ಇರಲಿಲ್ಲ. ಈಗ ಬಿಜೆಪಿ ಶಿವಸೇನಾವನ್ನು ಹಿಂದಿಕ್ಕುವ ಹವಣಿಕೆಯಲ್ಲಿದೆ.

ಹೈದರಾಬಾದ್​ನಲ್ಲೂ ಇತಿಹಾಸದ ಜೊತೆ ಬಿಜೆಪಿ ಯುದ್ಧ

ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ತೆಲಂಗಾಣ ರಾಷ್ಟ್ರ ಪಕ್ಷ (TRS)ಕ್ಕೆ ಓವೈಸಿಯ AIMIM ಪಕ್ಷದ ಜೊತೆ ಮಿತ್ರತ್ವ ಇದೆ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು. ಓವೈಸಿಯ AIMIM ಪಕ್ಷವನ್ನು ಎತ್ತಿಕಟ್ಟುತ್ತಿರುವವರೇ ಬಿಜೆಪಿ ಎಂಬ ಆಪಾದನೆಯನ್ನು ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಮಾಡುತ್ತಿವೆ. ಹಾಗಿದ್ದಲ್ಲಿ, ಬಿಜೆಪಿ ಯಾಕೆ AIMIM ನ ಮನೆಗೇ ಕನ್ನ ಹಾಕಲು ಮುಂದಾಯ್ತು? ಬಿಜೆಪಿ ಏನೇ ಮಾಡಿದರೂ AIMIMನ ಮತ ಸೆಳೆಯಲು ಸಾಧ್ಯವಿಲ್ಲ. ಅಸಲಿಗೆ, ಬಿಜೆಪಿ ಮಾಡುತ್ತಿರುವ ತಂತ್ರಗಾರಿಕೆಯಿಂದ TRSಗೆ ಹೊಡೆತ ಆಗಬಹುದೇ ಹೊರತು AIMIMನ ಮುಸ್ಲಿಮ್ ಮತಗಳಲ್ಲ.

ಅದಕ್ಕೇ ಅಲ್ಲವೇ ಬಿಜೆಪಿ ಈ ಬಾರಿ ಹೈದರಾಬಾದ್​ನಲ್ಲೂ ಇತಿಹಾಸದ ವಿಚಾರ ಎತ್ತಿದ್ದು. ಬಿಜೆಪಿಯ ಉದ್ದೇಶ- ಹೈದರಾಬಾದ್ ಮತ್ತು ತೆಲಂಗಾಣಕ್ಕೆ ಇರುವ ನಿಜಾಮ್ ಆಡಳಿತವನ್ನು ನೆನಪಿಸುತ್ತ ಬಿಜೆಪಿ ಈ ಬಾರಿ ಪ್ರಚಾರ ಮಾಡಿದೆ. ಹಿಂದೂ-ಮುಸ್ಲಿಮ್ ಎಂಬ ವಿಚಾರನ್ನು ಮುನ್ನೆಲೆಯಲ್ಲಿ ಚರ್ಚಿಸದೇ ಅಥವಾ ಚುನಾವಣಾ ಸಭೆಗಳಲ್ಲಿ ಹೇಳದಿದ್ದರೂ, ಬಿಜೆಪಿಯ ತಂತ್ರಗಾರಿಕೆಯ ಮುಖ್ಯ ಭಾಗವೇ ಹೈದರಾಬಾದ್ ಮತ್ತು ತೆಲಂಗಾಣಕ್ಕೆ ಇರುವ ಈ ನಿಜಾಮ್​ರ ಆಡಳಿತದಿಂದ ಆದ ಹಾನಿಯನ್ನು ತಡೆಯುವುದು, ಹೊಸ ಇತಿಹಾಸ ಬರೆಯುವುದು.

ಇದೇ ಕಾರಣಕ್ಕೆ, ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಹೈದರಾಬಾದ್​ನ ಹೆಸರು ಬದಲಾಯಿಸಿ ಭಾಗ್ಯನಗರ ಎಂದು ಹೆಸರಿಡುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಬಿಜೆಪಿಯ ಇತಿಹಾಸದ ಜೊತೆ ಯುದ್ಧ ಸಾರಿರುವುದಕ್ಕೆ ಸಾಕ್ಷ್ಯ ನೀಡುತ್ತದೆ. ಅದೇ TRS ಮತ್ತು AIMIM ಈ ವಿಚಾರದಲ್ಲಿ ಮುಸ್ಲಿಮ್ ಮತದಾರರನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲ. ಅವರು ಬಿಜೆಪಿಯ ಪ್ರಚಾರಕ್ಕೆ ವಿರುದ್ಧವಾಗಿ ಮುಸ್ಲಿಮ್ ಮತದಾರರನ್ನು ಓಲೈಸಲು ಒಂದು ಹೆಜ್ಜೆ ಮುಂದೆ ಹೋದಂತೆ ಕಾಣುತ್ತಿತ್ತು.

AIMIM ನ ಓವೈಸಿಯ ಹೇಳಿಕೆ-ಯೋಗಿ ಬದುಕಿರುವವರೆಗೆ ಹೆಸರು ಬದಲಾವಣೆ ಸಾಧ್ಯವಿಲ್ಲ-ಮತ ಧ್ರುವೀಕರಣಕ್ಕೆ ಅನುವು ಮಾಡಿಕೊಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಒಂದೊಮ್ಮೆ ಈ ಬಾರಿ ಬಿಜೆಪಿ GHMC ಯಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡರೆ, ಬಿಜೆಪಿಗೆ ಮುಂದಿನ ಗುರಿ ಮುಂದಿನ ಬಾರಿಯ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆ. ಅದು ನಾಲ್ಕು ವರ್ಷ ದೂರ ಇರಬಹುದು, ಆದರೆ ಬಿಜೆಪಿಯ ಇತಿಹಾಸ ನೋಡಿದರೆ ಆ ಪಕ್ಷದ ನಾಯಕರು ನಾಲ್ಕು ವರ್ಷ ಕಾಯಲು ಹಿಂದೇಟು ಹಾಕುವವರಲ್ಲ.

Published On - 5:19 pm, Mon, 30 November 20

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?