C+ ಸರಗಳ್ಳರ ಬಂಧಿಸಿದ ಪೊಲೀಸರಿಗೆ ಈಗ ಕೊರೊನಾ ಭೀತಿ

ಮೈಸೂರು:ಸರಗಳ್ಳತನ‌ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಸರಗಳ್ಳರಲ್ಲಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸರಗಳ್ಳರನ್ನ ಬಂದಿಸಿದ ಮೈಸೂರಿನ ಕುವೆಂಪು ನಗರದ ಪೊಲೀಸರಿಗೆ ಕೊರೊನಾ ಭೀತಿ ಶುರುವಾಗಿದೆ. ಕುವೆಂಪು ನಗರ, ವಿಜಯನಗರ ಸೇರಿ ನಾಲ್ಕು ಕಡೆ ಸರಗಳ್ಳತನ‌ ಮಾಡಿದ್ದ ಶ್ರೀರಂಗಪಟ್ಟಣದ 24 ವರ್ಷದ ಆರೋಪಿಯನ್ನ ನಿನ್ನೆ ಕುವೆಂಪುನಗರದ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ಆತನನ್ನ ಬಂಧಿಸಿದ ಪೊಲೀಸರಿಗೆ ಕೊರೊನಾ ಹಬ್ಬುವ ಭೀತಿ ಎದುರಾಗಿದೆ. ಸಧ್ಯಕ್ಕೆ ಆರೋಪಿಗಳಿಂದ 8 ಲಕ್ಷ 35 ಸಾವಿರ ಮೌಲ್ಯದ […]

C+ ಸರಗಳ್ಳರ ಬಂಧಿಸಿದ ಪೊಲೀಸರಿಗೆ ಈಗ ಕೊರೊನಾ ಭೀತಿ
ಸಾಧು ಶ್ರೀನಾಥ್​

Updated on: Jul 15, 2020 | 11:24 AM

ಮೈಸೂರು:ಸರಗಳ್ಳತನ‌ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಸರಗಳ್ಳರಲ್ಲಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸರಗಳ್ಳರನ್ನ ಬಂದಿಸಿದ ಮೈಸೂರಿನ ಕುವೆಂಪು ನಗರದ ಪೊಲೀಸರಿಗೆ ಕೊರೊನಾ ಭೀತಿ ಶುರುವಾಗಿದೆ.

ಕುವೆಂಪು ನಗರ, ವಿಜಯನಗರ ಸೇರಿ ನಾಲ್ಕು ಕಡೆ ಸರಗಳ್ಳತನ‌ ಮಾಡಿದ್ದ ಶ್ರೀರಂಗಪಟ್ಟಣದ 24 ವರ್ಷದ ಆರೋಪಿಯನ್ನ ನಿನ್ನೆ ಕುವೆಂಪುನಗರದ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಈಗ ಆತನನ್ನ ಬಂಧಿಸಿದ ಪೊಲೀಸರಿಗೆ ಕೊರೊನಾ ಹಬ್ಬುವ ಭೀತಿ ಎದುರಾಗಿದೆ.

ಸಧ್ಯಕ್ಕೆ ಆರೋಪಿಗಳಿಂದ 8 ಲಕ್ಷ 35 ಸಾವಿರ ಮೌಲ್ಯದ 185 ಗ್ರಾಂ ಚಿನ್ನದ ಆಭರಣವನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಗಳು ಕೃತ್ಯಕ್ಕೆ ಬಳಸಿದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Published On - 11:17 am, Wed, 15 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us