ಉಡುಪಿ: ಓವನ್ ಸ್ಫೋಟ, ಬೇಕರಿ ಮಾಲೀಕ ಸ್ಥಳದಲ್ಲೇ ಸಾವು
ಉಡುಪಿ: ತಾಲೂಕಿನ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಅವಘಡ ಸಂಭವಿಸಿದ್ದು, ಬೇಕರಿ ಮಾಲೀಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೇಕರಿಲ್ಲಿನ ದೊಡ್ಡ ಗಾತ್ರದ ಓವನ್ ಸ್ಫೋಟದಿಂದ ಈ ದುರ್ಘಟನೆ ನಡೆದಿದೆ. ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಓವನ್ ಬಾಗಿಲು ಬಡಿದು ದೇಹ ಛಿದ್ರ: ಓವನ್ ನಿರ್ವಹಣೆಗೆಂದು ಮಾಲೀಕ ರಾಬರ್ಟ್ ಅದರ ಸಮೀಪ ಹೋದಾಗ ದಿಢೀರನೆ ಸ್ಫೋಟ ಸಂಭವಿಸಿದೆ. ಓವನ್ ಬಾಗಿಲು ಬಡಿದು ಅವರ ದೇಹ ಸಂಪೂರ್ಣ ಛಿದ್ರವಾಗಿದೆ. ಸ್ಥಳಕ್ಕೆ ಕೋಟ ಪೊಲೀಸರು ದೌಡಾಯಿಸಿದ್ದಾರೆ.

ಉಡುಪಿ: ತಾಲೂಕಿನ ಮಾಬುಕಳದಲ್ಲಿ ಬೇಕರಿ ಉತ್ಪನ್ನಗಳ ತಯಾರಿಕಾ ಘಟಕದಲ್ಲಿ ಅವಘಡ ಸಂಭವಿಸಿದ್ದು, ಬೇಕರಿ ಮಾಲೀಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೇಕರಿಲ್ಲಿನ ದೊಡ್ಡ ಗಾತ್ರದ ಓವನ್ ಸ್ಫೋಟದಿಂದ ಈ ದುರ್ಘಟನೆ ನಡೆದಿದೆ. ಬೇಕರಿಯ ಮಾಲೀಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ.
ಓವನ್ ಬಾಗಿಲು ಬಡಿದು ದೇಹ ಛಿದ್ರ: ಓವನ್ ನಿರ್ವಹಣೆಗೆಂದು ಮಾಲೀಕ ರಾಬರ್ಟ್ ಅದರ ಸಮೀಪ ಹೋದಾಗ ದಿಢೀರನೆ ಸ್ಫೋಟ ಸಂಭವಿಸಿದೆ. ಓವನ್ ಬಾಗಿಲು ಬಡಿದು ಅವರ ದೇಹ ಸಂಪೂರ್ಣ ಛಿದ್ರವಾಗಿದೆ. ಸ್ಥಳಕ್ಕೆ ಕೋಟ ಪೊಲೀಸರು ದೌಡಾಯಿಸಿದ್ದಾರೆ.


Published On - 9:32 am, Mon, 10 August 20




