ಬಳ್ಳಾರಿ: ಶಾಸಕ ಸೋಮಶೇಖರ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಂಬಂಧ ಹೊಸಪೇಟೆ ರಸ್ತೆಯ ಕಂಟ್ರಿ ಕ್ಲಬ್ ಬಳಿ ಮಾಜಿ ಸಚಿವ ಜಮೀರ್ ಅಹಮದ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಧರಣಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದ ಜಮೀರ್ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಗೋಲಿಬಾರ್ ಮಾಡಿ ಸಾಯಿಸಿ ಬಿಡಿ’:
ಬಳ್ಳಾರಿಯಲ್ಲಿ ಶಾಂತಿಭಂಗ ಮಾಡುವುದಕ್ಕೆ ನಾನು ಬಂದಿಲ್ಲ. ಪಾದಯಾತ್ರೆ ಮೂಲಕವೇ ನಾನು ಬಳ್ಳಾರಿಗೆ ತೆರಳುತ್ತೇನೆ. ಬೇಕಿದ್ದರೆ ಗೋಲಿಬಾರ್ ಮಾಡಿ ಸಾಯಿಸಲಿ ಬಿಡಿ ಎಂದು ಟಿವಿ9ಗೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲಿದ್ದೀಯಪ್ಪ ಸೋಮಶೇಖರ, ನಾನು ಬಂದಿದ್ದೇನೆ ಬಾರಪ್ಪ-ಜಮೀರ್ ವ್ಯಂಗ್ಯ
ಉಫ್ ಅಂದರೆ ಹಾರಿ ಹೋಗ್ತಾರೆ ಎಂದು ಹೇಳಿದ್ದಿರಲ್ಲ, ಸೋಮಶೇಖರ ರೆಡ್ಡಿ ನಿನ್ನ ಜಿಲ್ಲೆ ಬಳ್ಳಾರಿಗೆ ಬಂದಿದ್ದೇನೆ. ಎಲ್ಲಿದ್ದೀಯಪ್ಪ ಸೋಮಶೇಖರ, ನಾನು ಬಂದಿದ್ದೇನೆ ಬಾರಪ್ಪ ಎಂದು ಜಮೀರ್ ಅಹ್ಮದ್ ಖಾನ್ ಇದೇ ವೇಳೆ ವ್ಯಂಗ್ಯವಾಡಿದ್ದಾರೆ.
Published On - 11:36 am, Mon, 13 January 20