ಬನವಾಸಿ ನೆಲದಲ್ಲಿ ಕದಂಬೋತ್ಸವ: ವೀಕೆಂಡ್ ಮೂಡ್​​ನಲ್ಲಿದ್ದೋರಿಗೆ ರಸದೌತಣ

ಉತ್ತರ ಕನ್ನಡ: ಹಾಕ್ರೋ ಸ್ಟೆಪ್ಪು.. ಮಾಡ್ರೋ ಡ್ಯಾನ್ಸ್.. ಫುಲ್ ಎಂಜಾಯ್​​ಮೆಂಟ್​​​.. ಸ್ಟೇಜ್ ಮೇಲೆ ಸಂಗೀತ ರಸದೌಣ.. ಡಿಜೆ ಸದ್ದಿನ ಅಬ್ಬರ.. ಸಾಂಪ್ರದಾಯಿಕ ಶೈಲಿ ನೃತ್ಯಗಳ ಖದರ್.. ಎಲ್ಲೆಲ್ಲೂ ಕನ್ನಡದ ಕಂಪು.. ವಾದ್ಯಗೋಷ್ಟಿಗಳ ಇಂಪು.. ಅಂದ್ಹಾಗೆ ಈ ಸಂಭ್ರಮ.. ಸಡಗರ ಧರೆಗಿಳಿದಿದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ. ಶಿರಸಿ ನೆಲದಲ್ಲಿ ಕದಂಬೋತ್ಸವ ಕಾರ್ಯಕ್ರಮ ಕನ್ನಡದ ಕಂಪನ್ನ ಎಲ್ಲೆಲ್ಲೂ ಹರಡಿತ್ತು. ಎರಡು ದಿನಗಳ ಕಾಲ ನಡೆದ ಕದಂಬೋತ್ಸವದಲ್ಲಿ ಜನರು ಮಿಂದೆದ್ರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನ ರಂಜಿಸ್ತು. ಅದ್ರಲ್ಲೂ, […]

ಬನವಾಸಿ ನೆಲದಲ್ಲಿ ಕದಂಬೋತ್ಸವ: ವೀಕೆಂಡ್ ಮೂಡ್​​ನಲ್ಲಿದ್ದೋರಿಗೆ ರಸದೌತಣ
Follow us
ಸಾಧು ಶ್ರೀನಾಥ್​
|

Updated on: Feb 10, 2020 | 9:06 AM

ಉತ್ತರ ಕನ್ನಡ: ಹಾಕ್ರೋ ಸ್ಟೆಪ್ಪು.. ಮಾಡ್ರೋ ಡ್ಯಾನ್ಸ್.. ಫುಲ್ ಎಂಜಾಯ್​​ಮೆಂಟ್​​​.. ಸ್ಟೇಜ್ ಮೇಲೆ ಸಂಗೀತ ರಸದೌಣ.. ಡಿಜೆ ಸದ್ದಿನ ಅಬ್ಬರ.. ಸಾಂಪ್ರದಾಯಿಕ ಶೈಲಿ ನೃತ್ಯಗಳ ಖದರ್.. ಎಲ್ಲೆಲ್ಲೂ ಕನ್ನಡದ ಕಂಪು.. ವಾದ್ಯಗೋಷ್ಟಿಗಳ ಇಂಪು..

ಅಂದ್ಹಾಗೆ ಈ ಸಂಭ್ರಮ.. ಸಡಗರ ಧರೆಗಿಳಿದಿದ್ದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ. ಶಿರಸಿ ನೆಲದಲ್ಲಿ ಕದಂಬೋತ್ಸವ ಕಾರ್ಯಕ್ರಮ ಕನ್ನಡದ ಕಂಪನ್ನ ಎಲ್ಲೆಲ್ಲೂ ಹರಡಿತ್ತು. ಎರಡು ದಿನಗಳ ಕಾಲ ನಡೆದ ಕದಂಬೋತ್ಸವದಲ್ಲಿ ಜನರು ಮಿಂದೆದ್ರು. ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನ ರಂಜಿಸ್ತು. ಅದ್ರಲ್ಲೂ, ಮುಂಬೈನ ಪ್ರಸಿದ್ಧ ಎಂಜೆ 5 ನೃತ್ಯ ತಂಡ ಪ್ರದರ್ಶಿಸಿದ ಡ್ಯಾನ್ಸ್ ವೇದಿಕೆ ಮೇಲೆ ಮೋಡಿ ಮಾಡ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಣಿದು ಕುಪ್ಪಳಿಸಿದ ಜನ: ಇನ್ನು, ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ತಂಡವರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಕಂಡು ಎಲ್ರೂ ಕುಣಿದು ಕುಪ್ಪಳಿಸಿದ್ರು. ಮನೋರಂಜನೆಯ ರಸಗವಳ ಸವಿದ್ರು.

ಇನ್ನು, ಕದಂಬೋತ್ಸವ ಅಂಗವಾಗಿ ವಿವಿಧ ಗೋಷ್ಠಿಗಳನ್ನ ಆಯೊಜಿಸಿದ್ರು. ಪ್ರತಿ ಗೋಷ್ಠಿಯಲ್ಲಿ ಹವಲು ವಿಚಾರಧಾರೆಗಳ ಹೂರಣ ಹಂಚಿಕೊಂಡ್ರು. ಇನ್ನೊಂದೆಡೆ ಶ್ವಾನಪ್ರದರ್ಶನ ಕೂಡ ಕದಂಬೋತ್ಸಕ್ಕೆ ಆಗಮಿಸಿದ್ದವರನ್ನ ಸಾಕಷ್ಟು ಆಕರ್ಷಿಸ್ತು. ವಿವಿಧ ತಳಿಯ ಶ್ವಾನಗಳನ್ನ ಕಂಡು ಸಾರ್ವಜನಿಕರು ಸಖತ್ ಖುಷಿ ಪಟ್ರು. ಜಿಲ್ಲಾಡಳಿತದ ಕಾರ್ಯಕ್ಕೆ ಸಚಿವ ಶಿವರಾಜ್ ಹೆಬ್ಬಾರ್ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಒಟ್ನಲ್ಲಿ, ಕಳೆದ ಬಾರಿ ಕದಂಬೋತ್ಸವಕ್ಕೆ ಮಂಗನ ಕಾಯಿಲೆ ಕರಿನೆರಳು ಆವರಿಸಿದ್ರಿಂದ ರದ್ದು ಮಾಡಲಾಗಿತ್ತು. ಆದ್ರೆ, ಈ ವರ್ಷ ಬನವಾಸಿ ನೆಲದಲ್ಲಿ ನಡೆದ ಕದಂಬೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ವೀಕೆಂಡ್ ಮೂಡ್​​ನಲ್ಲಿದ್ದೋರು ಫುಲ್ ಎಂಜಾಯ್ ಮಾಡಿದ್ರು.

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್