ಬಾನಂಗಳದಲ್ಲಿ ಬಾನಾಡಿಗಳ ಕಲರವ, ಕಬಿನಿ ಜಲಾಶಯದಲ್ಲಿ ವಿದೇಶಿ ಪಕ್ಷಿಗಳ ಹಾರಾಟ

ಸಾಂಸ್ಕೃತಿಕ ನಗರಿ ಮೈಸೂರಿಗೆ ವಿದೇಶಿಗರು ಬರೋದು ಹೋಗೋದು ಕಾಮನ್‌. ಆದ್ರೆ ನವೆಂಬರ್ ಡಿಸೆಂಬರ್​ನಲ್ಲಿ ಬರುವ ಕೆಲ ವಿದೇಶಿ ಅತಿಥಿಗಳು ಬರೋಬ್ಬರಿ ಮೂರ್ನಾಲ್ಕು ತಿಂಗಳು ಇಲ್ಲೆ ಇದ್ದು ವಾಪಸ್‌ ಹೋಗ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಬರೋ ಅತಿಥಿಗಳು ಇಲ್ಲಿಗೆ ಬಂದು ಎಂಜಾಯ್ ಮಾಡಿ ಹೋಗ್ತಾರೆ.

ಬಾನಂಗಳದಲ್ಲಿ ಬಾನಾಡಿಗಳ ಕಲರವ, ಕಬಿನಿ ಜಲಾಶಯದಲ್ಲಿ ವಿದೇಶಿ ಪಕ್ಷಿಗಳ ಹಾರಾಟ
ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಬಾರ್ ಹೆಡ್ ಗೂಸ್ ಪಕ್ಷಿಗಳ ವಿಹಾರ
Ayesha Banu

| Edited By: sadhu srinath

Dec 07, 2020 | 12:55 PM

ಮೈಸೂರು: ಬಾನಂಗಳದಲ್ಲಿ ಚಿಲಿಪಿಲಿಗಳ ರಂಗೂಲಿ.. ತಮ್ಮದೇ ಲೋಕದಲ್ಲಿ ತೇಲಾಡೋ ಬಾನಾಡಿಗಳು.. ಒಮ್ಮೆ ದಡದಲ್ಲಿ, ಮತ್ತೊಮ್ಮೆ ನೀರಲ್ಲಿ, ಮಗದೊಮ್ಮೆ ಬಾನಲ್ಲಿ.. ಎಲ್ಲೆಲ್ಲೂ ಈ ಚಿಲಿಪಿಗಳದ್ದೇ ಆಟ.. ಪಕ್ಷಿಲೋಕದ್ದೇ ತುಂಟಾಟ.. ಆಕಾಶದಿಂದ ಒಮ್ಮೆ ಕಣ್ಣು ಹಾಯಿಸಿದ್ರೆ ಜಲಾಶಯದ ತುಂಬ ಕಾಣೋ ಪಕ್ಷಿಗಳ ಲೋಕ..

ಮೈಸೂರಿನ ಕಬಿನಿ ಜಲಾಶಯದ ಹಿನ್ನೀರಿನಲ್ಲೀಗ ಬಾನಾಡಿಗಳ ಕಲರವ ಜೋರಾಗಿದೆ. ಮೈಸೂರಿಗೆ ದೂರದ ಊರಿನಿಂದ ಬಂದಿರೋ ವಿದೇಶಿ ಪಕ್ಷಿಗಳು ತುಂಟಾಟ ಆಡ್ತಿವೆ. ವರ್ಷದ ಕೊನೆಯಲ್ಲಿ ಬರೋ ಈ ಬಾರ್‌ಹೆಡ್‌ ಗೊಸ್‌ ಪಕ್ಷಿಗಳು ಮೂರು ತಿಂಗಳ ಕಾಲ ಮೈಸೂರಿನಲ್ಲೇ ಬೀಡು ಬಿಟ್ಟಿರ್ತಾವೆ. ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಹೆಚ್.ಡಿ. ಕೋಟೆಯ ಬೀಚನಹಳ್ಳಿಯ ಕಬಿನಿ ಡ್ಯಾಂಗೆ ಲಗ್ಗೆ ಇಡುತ್ವೆ. ಅವುಗಳ ಎಂಟ್ರಿಯಿಂದ ಜಲಾಶಯದ ಅಂದ ದುಪ್ಪಟ್ಟಾಗುತ್ತದೆ.

ಸಾಂಸ್ಕೃತಿಕ ನಗರಿಯಲೊಂದು ವಲಸೆ ಹಕ್ಕಿಗಳ ಲೋಕ: ಇನ್ನು ಈ ಬಾರ್ ಹೆಡ್ ಗೂಸ್ ಪಕ್ಷಿಗಳು ವಲಸೆ ಹಕ್ಕಿಗಳಾಗಿದ್ದು ನೇಪಾಳ, ಮಂಗೋಲಿಯಾ, ಸೈಬಿರಿಯಾ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇವುಗಳು ಸಂತಾನೋತ್ಪತ್ತಿಗಾಗಿ ನದಿಗಳು ಹಾಗೂ ಜಲಾಶಯದ ಹಿನ್ನೀರನ್ನ ಆಯ್ಕೆ ಮಾಡಿಕೊಳ್ಳುತ್ತವೆ. ಮೂರ್ನಾಲ್ಕು ತಿಂಗಳಗಳ ಕಾಲ ವಲಸೆ ಬಂದು ಕಬಿನಿ ಡ್ಯಾಂ ಬಳಿಯೇ ಬೀಡು ಬಿಟ್ಟಿರುತ್ತವೆ. ಹೊಲ ಗದ್ದೆಗಳಲ್ಲಿ ಆಹಾರ ಸೇವಿಸಿ ಸಂತಾನೋತ್ಪತ್ತಿ ಮುಗಿಸಿ ವಾಪಸ್ಸಾಗುತ್ತವೆ.

ಪಕ್ಷಿಲೋಕದ ನೋಟವೇ ಬಲುಚೆಂದ.. ಅದ್ರಲ್ಲೂ ಅರಮನೆ ನಗರಿಗೆ ದೂರದೂರಿಂದ ಹಿಂಡು ಹಿಂಡಾಗಿ ಬರೋ ಈ ಪಕ್ಷಿಗಳನ್ನ ಆಟ ತುಂಟಾಟ ನೋಡೋಕೆ ಎರಡು ಕಣ್ಣು ಸಾಲೋದಿಲ್ಲ. -ದಿಲೀಪ್

ವಿದ್ಯಾಕಾಶಿಯಲ್ಲಿ ಹಕ್ಕಿಗಳ ಮಾರಣಹೋಮ: ಔಷಧಕ್ಕೆಂದು ಸದ್ದಿಲ್ಲದೆ ಮಾಯವಾಗ್ತಿದೆ ಪಕ್ಷಿ ಸಂಕುಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada