ರಾಯಚೂರಿನಲ್ಲಿ ಬಿಎಡ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು – ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಜ್ಯೂಸ್ ಮಾಡಿ ಕುಡಿದ ಮಂಗಳೂರು ಮಹಿಳೆ ಸಾವು

ಮೈರೋಲ್ ಹಣ್ಣು.. ಹೆಚ್ಚಾಗಿ ಕಾಡಿನಲ್ಲಿ ಕಂಡು ಬರುವ ಹಣ್ಣು. ಮೈರೋಲ್ ಹಣ್ಣಿನ ಬದಲು ಬೇರೆ ವಿಷಕಾರಿ ಅಂಶವಿರುವ ಕಾಯಿಯನ್ನು ಸೇವನೆ ಮಾಡಿರುವ ಸಾಧ್ಯತೆಯಿದೆ. ಅಂತಹ ವಿಷಕಾರಿ ಕಾಯಿಯ ಸೇವನೆಯಿಂದ ಲೀಲಾವತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ

ರಾಯಚೂರಿನಲ್ಲಿ ಬಿಎಡ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು - ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಜ್ಯೂಸ್ ಮಾಡಿ ಕುಡಿದ ಮಂಗಳೂರು ಮಹಿಳೆ ಸಾವು
ಮೃತರು - ರಾಯಚೂರಿನಲ್ಲಿ ಬಿಎಡ್ ವಿದ್ಯಾರ್ಥಿ, ಮಂಗಳೂರು ಮಹಿಳೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 03, 2023 | 4:26 PM

ರಾಯಚೂರು, ಅಕ್ಟೋಬರ್​ 3: ರಾಯಚೂರು ನಗರದ ರೈಲ್ವೆ ನಿಲ್ದಾಣದ ಬಳಿ ಬಿಎಡ್ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಹನುಮಂತ (23) ಎಂಬ ವಿದ್ಯಾರ್ಥಿ ರೈಲ್ವೆ ಟ್ರಾಕ್ ಮಧ್ಯೆ ಹೆಣವಾಗಿ ಪತ್ತೆಯಾಗಿದ್ದಾನೆ. ಮೃತ ಹನುಮಂತ, ಮಾನ್ವಿ ತಾಲೂಕಿನ ಬೈಲ್ ಮರ್ಚಡ್ ಗ್ರಾಮದ ನಿವಾಸಿ. ಈತ ನಗರದ ಖಾಸಗಿ ಕಾಲೇಜಿನಲ್ಲಿ ಬಿಎಡ್ ಓದುತ್ತಿದ್ದ ಯುವಕ. ಹಾಸ್ಟೆಲ್ ನಲ್ಲಿ ಉಳಿದುಕೊಂಡು ಬಿಎಡ್ ಎರಡನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡ್ತಿದ್ದ. ಹನುಮಂತ, ನಿನ್ನೆ ಸೋಮವಾರ ತಡ ರಾತ್ರಿ ಹಾಸ್ಟೆಲ್ ನಿಂದ ಬ್ಯಾಗ್ ಸಮೇತ ಹೊರನಡೆದಿದ್ದ. ಬಳಿಕ ಅನುಮಾನಸ್ಪದವಾಗಿ ರೈಲ್ವೆ ಟ್ರಾಕ್ ನಲ್ಲಿ ಈತನ ಮೃತದೇಹ ಪತ್ತೆಯಾಗಿದೆ.

ಹನುಮಂತ, ಇತ್ತಿಚೆಗೆ ಪೊಲೀಸ್‌ ಕಾನ್ಸ್ ಟೇಬಲ್ ಪರೀಕ್ಷೆ ಕೂಡ ಬರೆದಿದ್ದ. ಹನುಮಂತನನ್ನ ಕೊಂದು ಬಳಿಕ ರೈಲ್ವೆ ಟ್ರಾಕ್ ಬಳಿ ಹಾಕಿರುವ ಆರೋಪವೂ ಕೇಳಿಬಂದಿದೆ. ಪ್ರೀತಿಯ ವಿಚಾರವಾಗಿ ಘಟನೆ ನಡೆದಿದೆ ಅನ್ನೋ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಸದ್ಯ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ.

PSI ಪರೀಕ್ಷೆ ಬರೆದು ಬಂದಿದ್ದ ಯುವಕ ಆಕಳು ಮೈ ತೊಳೆಯುವಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವು

ಹಾವೇರಿ ವರದಿ: ಆಕಳು ಮೈ ತೊಳೆಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವಿಗೀಡಾಗಿದ್ದಾನೆ. ಬಸವರಾಜ್ ಭರ್ಮಪ್ಪ ಮೂಲಿ ಎಂಬಾತ ಮೃತ ದುರ್ದೈವಿ. ಬಾಳಂಬಿಡ ಗ್ರಾಮದ ಮನೋಹರ ನಗರ ಕಲಕಟ್ಟಿ ಕೆರೆಯಲ್ಲಿ ಘಟನೆ ನಡೆದಿದೆ. 25 ವರ್ಷದ ಬಸವರಾಜ್ ಭರ್ಮಪ್ಪ ಮೂಲಿ ಕೆಲ ದಿನಗಳ ಹಿಂದಷ್ಟೇ PSI ಪರೀಕ್ಷೆ ಬರೆದು ಬಂದಿದ್ದ. ಕುಟುಂಬದ ಹಿರಿಯ ಮಗನಾಗಿದ್ದ ಬಸವರಾಜ್ ಕೃಷಿ ಮತ್ತು ಹೈನುಗಾರಿಕೆ ಮಾಡಿಕೊಂಡಿದ್ದ. ಆಡೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಹಣ್ಣಿನ ಜ್ಯೂಸ್ ಮಾಡಿ ಕುಡಿದ ಮಹಿಳೆ ಸಾವು

ಮಂಗಳೂರು ವರದಿ: ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಹಣ್ಣಿನ ಜ್ಯೂಸ್ ಮಾಡಿ ಕುಡಿದ ಮಹಿಳೆ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ‌ ಎಂಬಲ್ಲಿ ಘಟನೆ ನಡೆದಿದೆ. ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ (35) ಮೃತ ಮಹಿಳೆ. ಒಂದು ವಾರದ ಹಿಂದೆ ಲೀಲಾವತಿಯ ತಂದೆ ಮೈರೋಲ್ ಹಣ್ಣಿನ ಜ್ಯೂಸ್ ಮಾಡಿ ಕುಡಿದಿದ್ದರು. ಲೀಲಾವತಿ ಅವರೂ ಕೂಡ ಮೈರೋಲ್ ಹಣ್ಣಿನ ಜ್ಯೂಸ್ ಸೇವನೆ ಮಾಡಿದ್ದರು. ಪರಿಣಾಮ ಲೀಲಾವತಿ ಅವರಿಗೆ ವಾಂತಿ, ಭೇದಿಯಾಗಿ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ದಾಖಲಿಸುವ ಸಂದರ್ಭ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನಾವು ಸಾಬ್ರು ಹೇಗೆ ಅಂತಾ ಗೊತ್ತಲ್ಲ ಎಂದು ಈದ್ ಮಿಲಾದ್​ ಗಲಾಟೆ ವೇಳೆ ಶಿವಮೊಗ್ಗ ಪೊಲೀಸ್​ ಗೆ ಆವಾಜ್ ಹಾಕಿದ್ದ ವ್ಯಕ್ತಿ ಅರೆಸ್ಟ್​

ಮೈರೋಲ್ ಹಣ್ಣು.. ಹೆಚ್ಚಾಗಿ ಕಾಡಿನಲ್ಲಿ ಕಂಡು ಬರುವ ಹಣ್ಣು. ಮೈರೋಲ್ ಹಣ್ಣಿನ ಬದಲು ಬೇರೆ ವಿಷಕಾರಿ ಅಂಶವಿರುವ ಕಾಯಿಯನ್ನು ಸೇವನೆ ಮಾಡಿರುವ ಸಾಧ್ಯತೆಯಿದೆ. ಅಂತಹ ವಿಷಕಾರಿ ಕಾಯಿಯ ಸೇವನೆಯಿಂದ ಲೀಲಾವತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:18 pm, Tue, 3 October 23