ಕೊರೊನಾ ಬೇಗೆಗೆ ಬೆಂದು ಹೋಗಿದೆ ಬೆಂದಕಾಳೂರು
ಸಿಲಿಕಾನ್ ಸಿಟಿ ಸಾವಿನ ಸಿಟಿಯಾಗಿದೆ. ಬೆಂದಕಾಳೂರು ಕೊರೊನಾ ಸೋಂಕಿನ ಏಟಿಗೆ ಬೆಂದು ಹೋಗಿದೆ. ರಾಜಧಾನಿಯಲ್ಲಿ ಕೊಲ್ಲೋದನ್ನೇ ಕಾಯಕ ಮಾಡೊಕೊಂಡಿರೋ ಕೊರೊನಾ ರಸ್ತೆಗೊಬ್ಬರನ್ನ ಎಂಬಂತೆ ಕೊಂದು ಮುಗಿಸ್ತಿದೆ. ಲಾಕ್‌ಡೌನ್‌ಗೂ ಬಗ್ಗದೇ ಬೆಂಗಳೂರನ್ನೇ ಬೆದರಿಸ್ತಿದೆ.. ಲಾಕ್ಡೌನ್ ನಡುವೆ ಬೆಂಗಳೂರಲ್ಲಿ ಕೊರೊನಾ ಆರ್ಭಟ ಕೊರೊನಾ ವಿಚಾರದಲ್ಲಿ ರಾಜ್ಯದ್ದೇ ಒಂದು ಲೆಕ್ಕವಾದ್ರೆ ರಾಜಧಾನಿಯದ್ದೇ ಒಂದು ಲೆಕ್ಕವಾಗಿ ಬಿಟ್ಟಿದೆ. ಕರುನಾಡಿನಲ್ಲಿ ನಿನ್ನೆ ಸೋಂಕಿತರ ಸಂಖ್ಯೆ 55 ಸಾವಿರದ ಗಡಿ ದಾಟಿದ್ದು ಅದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ಈ ಪೈಕಿ ಅರ್ಧಕ್ಕೆ ಅರ್ಧದಷ್ಟು ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ. […]

ಸಿಲಿಕಾನ್ ಸಿಟಿ ಸಾವಿನ ಸಿಟಿಯಾಗಿದೆ. ಬೆಂದಕಾಳೂರು ಕೊರೊನಾ ಸೋಂಕಿನ ಏಟಿಗೆ ಬೆಂದು ಹೋಗಿದೆ. ರಾಜಧಾನಿಯಲ್ಲಿ ಕೊಲ್ಲೋದನ್ನೇ ಕಾಯಕ ಮಾಡೊಕೊಂಡಿರೋ ಕೊರೊನಾ ರಸ್ತೆಗೊಬ್ಬರನ್ನ ಎಂಬಂತೆ ಕೊಂದು ಮುಗಿಸ್ತಿದೆ. ಲಾಕ್‌ಡೌನ್‌ಗೂ ಬಗ್ಗದೇ ಬೆಂಗಳೂರನ್ನೇ ಬೆದರಿಸ್ತಿದೆ..
ಲಾಕ್ಡೌನ್ ನಡುವೆ ಬೆಂಗಳೂರಲ್ಲಿ ಕೊರೊನಾ ಆರ್ಭಟ ಕೊರೊನಾ ವಿಚಾರದಲ್ಲಿ ರಾಜ್ಯದ್ದೇ ಒಂದು ಲೆಕ್ಕವಾದ್ರೆ ರಾಜಧಾನಿಯದ್ದೇ ಒಂದು ಲೆಕ್ಕವಾಗಿ ಬಿಟ್ಟಿದೆ. ಕರುನಾಡಿನಲ್ಲಿ ನಿನ್ನೆ ಸೋಂಕಿತರ ಸಂಖ್ಯೆ 55 ಸಾವಿರದ ಗಡಿ ದಾಟಿದ್ದು ಅದರಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ಈ ಪೈಕಿ ಅರ್ಧಕ್ಕೆ ಅರ್ಧದಷ್ಟು ಸೋಂಕಿತರು ಬೆಂಗಳೂರಿನಲ್ಲೇ ಇದ್ದಾರೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲೇ 2,208 ಜನರ ಮೇಲೆ ಕೊರೊನಾ ದಾಳಿ ಮಾಡಿದೆ. ಈ ಮೂಲಕ ರಾಜಧಾನಿಯಲ್ಲೇ 27,496 ಜನರು ಕೊರೊನಾ ಕೂಪಕ್ಕೆ ಬಿದ್ದಿದ್ದಾರೆ.
ಕಳೆದ 5 ದಿನದಿಂದ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಏರುತ್ತಿದೆ. ಜುಲೈ 13ರಂದು 1,315 ಜನರಿಗೆ ವೈರಸ್ ವಕ್ಕರಿಸಿದ್ರೆ, ಜುಲೈ 14 ರಂದು 1,267 ಜನರ ಮೇಲೆ ಕೊರೊನಾ ದಾಳಿ ಮಾಡಿದೆ. ಜುಲೈ 15ರಂದು 1,975 ಮಂದಿ ಮೇಲೆ ಕೊರೊನಾ ಅಟ್ಯಾಕ್ ಮಾಡಿತ್ತು. ಜುಲೈ 16 ರಂದು 2,344 ಜನರು ಕೊರೊನಾ ಕೂಪಕ್ಕೆ ಬಿದ್ದಿದ್ದಾರೆ. ಇದ್ರ ಜೊತೆಗೆ ಜುಲೈ 17ರಂದು 2,208 ಮಂದಿಯ ದೇಹ ಹೊಕ್ಕಿದೆ. ಅದ್ರಲ್ಲೂ ಜಸ್ಟ್ ಐದೇ ದಿನದಲ್ಲಿ ಕಿಲ್ಲರ್ ವೈರಸ್ 9,109 ಜನರ ಮೇಲೆ ದಾಳಿ ಮಾಡಿ ಅಟ್ಟಹಾಸ ಮೆರೆದಿದೆ.
ದಿನ ದಿನಕ್ಕೂ ಸಾವಿನ ಮನೆಯಾಗ್ತಿದೆ ಸಿಲಿಕಾನ್ ಸಿಟಿ..! ಸೋಂಕಿನ ಆರ್ಭಟ ಹೀಗಿದ್ರೆ ಸಾವಿನ ಸಂಖ್ಯೆ ಕೇಳಿದರೆ ಎದೆ ಝಲ್ ಎನ್ನಿಸುತ್ತೆ. ಒಂದು ದಿನದ ಹಿಂದೆಯಷ್ಟೇ 70 ಮಂದಿಯನ್ನ ಬಲಿ ಪಡೆದು ಮೃತ್ಯುಕೇಕೆ ಹಾಕಿದ್ದ ಸೋಂಕು ನಿನ್ನೆ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 75 ಸೋಂಕಿತರ ಪ್ರಾಣ ತೆಗೆದಿದೆ. ಅದರಲ್ಲೂ ಕಳೆದ 5 ದಿನದಲ್ಲಿ ಸಿಡಿಲೇ ಅಪ್ಪಳಿಸಿದೆ.
ಇನ್ನು ಬೆಂಗಳೂರನ್ನ ತನ್ನ ತೆಕ್ಕೆಗೆ ಬಾಚಿಕೊಂಡಿರೋ ಡೆಡ್ಲಿ ವೈರಸ್ ಮರಣಮೃದಂಗ ಬಾರಿಸ್ತಿದೆ. ಜುಲೈ 13 ರಂದು 47 ಸೋಂಕಿತರು ಪ್ರಾಣ ಬಿಟ್ಟದ್ರೆ, ಜುಲೈ 14 ಅಂದ್ರೆ 56 ಮಂದಿ ಸಾವನ್ನಪ್ಪಿದ್ರು. ಜುಲೈ 15ರಂದು 60 ಜನ ಸಾವಿನ ಮನೆ ಸೇರಿದ್ದಾರೆ. ಅಲ್ದೇ, ಜುಲೈ 16ರಂದು 70 ಮಂದಿ ಕೊರನಾ ಕೂಪಕ್ಕೆ ಬಿದ್ದು ಕೊನೆಯುಸಿರೆಳೆದಿದ್ದಾರೆ. ಅದ್ರಲ್ಲೂ ಜುಲೈ 17ರಂದು 75 ಮಂದಿ ಬಲಿಯಾಗಿರೋದು ಬೆಂಗಳೂರಿನವರ ಎದೆ ನಡುಗಿಸಿದೆ. ಕಳೆದ 5 ದಿನದಲ್ಲಿ ಒಟ್ಟು 308 ಬೆಂಗಳೂರಿಗರು ಕೊರೊನಾಗೆ ಬಲಿಯಾಗಿದ್ದಾರೆ.. ಆ ಮೂಲಕ ನಗರದಲ್ಲೇ ಸತ್ತವರ ಸಂಖ್ಯೆ 582 ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಯಲ್ಲೇ ಇದ್ದಾರೆ 20 ಸಾವಿರ ಸೋಂಕಿತರು ರಾಜ್ಯದಲ್ಲಿ ಬರೋಬ್ಬರಿ 33 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಯಲ್ಲೇ ಟ್ರೀಟ್‌ಮೆಂಟ್ ಪಡೆಯುತ್ತಿದ್ರೆ, ಈ ಪೈಕಿ ಬೆಂಗಳೂರಿನಲ್ಲೇ ಬರೋಬ್ಬರಿ 20 ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಯಲ್ಲೇ ಇದ್ದಾರೆ.
ಒಟ್ನಲ್ಲಿ, ಬೆಂಗಳೂರಿನಲ್ಲಿ ಲಾಕ್ಡೌನ್ ನಡುವೆಯೂ ಕೊರೊನಾ ಡೆಡ್ಲಿ ಅಟ್ಯಾಕ್ ಮುಂದುವರೆಸಿದೆ. ದಿನ ದಿನಕ್ಕೂ ಸೋಂಕಿತರ ನಂಬರ್ ಏರ್ತಿದ್ರೆ ಸಾವಿನ ಸಂಖ್ಯೆ ಕೂಡ ಅಂಕೆ ಮೀರಿ ಹೆಚ್ಚಾಗ್ತಿದೆ. ರಾಜ್ಯದ 29 ಜಿಲ್ಲೆಗಳಲ್ಲಿ ಇರೋ ಸೋಂಕಿತರು, ಬರೀ ಬೆಂಗಳೂರಿನಲ್ಲೇ ಇದ್ದಾರೆ. 29 ಜಿಲ್ಲೆಗಳಲ್ಲಿ ಇರೋ ಸಾವಿನ ಸಂಖ್ಯೆ, ಬೆಂಗಳೂರು ಒಂದರಲ್ಲೇ ಆಗ್ತಿದೆ. ಸೋಂಕಿನ ಈ ಡೆಡ್ಲಿ ಸವಾರಿಯೇ ಸಿಲಿಕಾನ್ ಸಿಟಿಯನ್ನ ಬೆಚ್ಚಿ ಬೀಳುವಂತೆ ಮಾಡಿದೆ.