ಗೋಕರ್ಣ: ಬಲೆಗೆ ಬಿದ್ದ ಅಪರೂಪದ ಬೃಹತ್ ವ್ಹೇಲ್ ಶಾರ್ಕ್ ಅನ್ನು ಮೀನುಗಾರರು ಏನು ಮಾಡಿದರು ಗೊತ್ತಾ?

ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದಾಗಿದೆ. ಶಾಲಾ ಬಸ್‌ ಗಾತ್ರದವರೆಗೆ ಬೆಳೆಯುವ ಇವು ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುತ್ತವೆ.

ಗೋಕರ್ಣ: ಬಲೆಗೆ ಬಿದ್ದ ಅಪರೂಪದ ಬೃಹತ್ ವ್ಹೇಲ್ ಶಾರ್ಕ್ ಅನ್ನು ಮೀನುಗಾರರು ಏನು ಮಾಡಿದರು ಗೊತ್ತಾ?
ಬಲೆಗೆ ಬಿದ್ದ ಬೃಹತ್​ ವ್ಹೇಲ್​ ಶಾರ್ಕ್​
Skanda

| Edited By: sadhu srinath

Jan 23, 2021 | 2:23 PM

ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತಡದಿ ಬಂದರಿನಲ್ಲಿ ಬೃಹತ್ ತಿಮಿಂಗಿಲ ಸೊರ (Whale Shark) ಮೀನುಗಾರರ ಬಲೆಗೆ ಬಿದ್ದಿದೆ. ಅತ್ಯಂತ ಅಪರೂಪವಾಗಿ ಕಂಡುಬರುವ ಈ ಪ್ರಭೇದದ ಮೀನು ಬೆಲೆಗೆ ಬಿದ್ದಿರುವುದು ಮೀನುಗಾರರಿಗೂ ಅಚ್ಚರಿ ಮೂಡಿಸಿದೆ. ಆದರೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಈ ಮೀನನ್ನು ಬೇಟೆಯಾಡುವುದು ಅಪರಾಧವಾಗಿರುವ ಕಾರಣ ಹಾಗೂ ಇದನ್ನು ಆಹಾರಕ್ಕಾಗಿ ಬಳಸುವುದೂ ಇಲ್ಲವಾದ್ದರಿಂದ ಅದನ್ನು ಬಲೆಯಿಂದ ಬಿಡಿಸಿದ ಮೀನುಗಾರರು ವಾಪಾಸು ಸಮುದ್ರಕ್ಕೆ ಬಿಟ್ಟಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ತದಡಿ ಭಾಗದ ಮೀನುಗಾರರಿಗೆ ಸಿಕ್ಕಿದ್ದ ತಿಮಿಂಗಿಲ ಸೊರ 300 ಕೆಜಿಗೂ ಹೆಚ್ಚು ತೂಕ ಹಾಗೂ 9 ಅಡಿಗೂ ಹೆಚ್ಚು ಉದ್ದವಿತ್ತು. ಸಾಧಾರಣವಾಗಿ ಗುಜರಾತ್​ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುವ ಇವು ಅರಬ್ಬೀ ಸಮುದ್ರದುದ್ದಕ್ಕೂ ಅಲ್ಲಲ್ಲಿ ಸಿಗುತ್ತವೆ. ಆದರೆ, ಈ ಮೀನುಗಳು ಇತ್ತೀಚೆಗೆ ಬಹಳ ಅಪರೂಪವಾಗಿರುವ ಕಾರಣ ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಕಡಲಜೀವ ವಿಜ್ಞಾನ ಕೇಂದ್ರದ ಡಾ. ಶಿವಕುಮಾರ್ ಹರಗಿ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಮೀನುಗಳ ಪೈಕಿ ಇದು ಕೂಡ ಒಂದಾಗಿದೆ. ಶಾಲಾ ಬಸ್‌ ಗಾತ್ರದವರೆಗೆ ಬೆಳೆಯುವ ಇವು ಸಣ್ಣ ಸಮುದ್ರ ಜೀವಿಗಳನ್ನು ಮತ್ತು ಮೀನಿನ ಮೊಟ್ಟೆಗಳನ್ನು ತಿಂದು ಬದುಕುತ್ತವೆ. ನೋಡಲು ದೈತ್ಯವೆನಿಸುವ ಇವು ನಿಧಾನವಾಗಿ ಈಜುತ್ತವೆ ಎಂದು ಶಿವಕುಮಾರ್​ ಮೀನಿನ ಕುರಿತಾಗಿ ಮಾಹಿತಿ ನೀಡಿದ್ದಾರೆ.

ಈ ಮೀನುಗಳನ್ನು ಬೇಟೆಯಾಡುವುದು ಹಾಗೂ ಆಹಾರಕ್ಕಾಗಿ ಬಳಸುವುದು ಅಪರಾಧವಾದ ಕಾರಣ ಮೀನುಗಾರರು ಫೋಟೋ ತೆಗೆಸಿಕೊಂಡ ಬಳಿಕ ವಾಪಾಸು ಕಡಲಿಗೆ ಬಿಟ್ಟಿದ್ದಾರೆ.

ಸಾಗರದಲ್ಲಿ ಸಲ್ಲದು ಸಾವಿನೊಂದಿಗೆ ಸರಸ; ಸತ್ತವರನ್ನು ನೋಡಿಯಾದರೂ ಬುದ್ಧಿ ಕಲೀತಾರಾ ಜನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada