ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಪುಣ್ಯತಿಥಿ ಹಿನ್ನೆಲೆ: ಸಮಾಧಿ ಸ್ಥಳಕ್ಕೆ ಗಣ್ಯರ ಭೇಟಿ
ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮಕ್ಕೆ ಗಣ್ಯರು ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಅವರ ಪುಣ್ಯತಿಥಿ
ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮಕ್ಕೆ ಗಣ್ಯರು ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ಯುದ್ಧಕಾಲದಲ್ಲಿ ಚನ್ನಗಿರಿಗೆ ಬಂದಿದ್ದಾಗ ಕುದುರೆ ಮೇಲಿಂದ ಬಿದ್ದು ಗಾಯಗೊಂಡು ಷಹಾಜಿ ಮೃತಪಟ್ಟಿದ್ದರು. ಹೊದಿಗೆರೆ ಗ್ರಾಮದ ಬಳಿ ಷಹಾಜಿ ಶವವನ್ನು ಮಣ್ಣುಮಾಡಲಾಗಿತ್ತು. ಅವರ ಸ್ಮರಣಾರ್ಥವಾಗಿ ಮರಾಠಾ ಸಮಾಜದ ಮುಖಂಡ ಹಾಗೂ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಸೇರಿದಂತೆ ಗಣ್ಯವ್ಯಕ್ತಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ರಚನೆ: ಇತ್ತ ಕನ್ನಡಿಗರ ಪ್ರತಿಭಟನೆ..ಅತ್ತ ಮರಾಠರಿಂದ ಸಿಎಂ ಯಡಿಯೂರಪ್ಪನವರಿಗೆ ಸನ್ಮಾನ