ಕನ್ನಡ ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಭಾನುವಾರ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಬಿಗ್ ಬಾಸ್ಗೆ ಚಾಲನೆ ಸಿಗಲಿದೆ. ಬಿಗ್ ಬಾಸ್ ಮನೆಗೆ ತೆರಳುವವರು ಈಗಾಗಲೇ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದಾರೆ. ಭಾನುವಾರ ಈ ಸ್ಪರ್ಧಿಗಳು ನೇರವಾಗಿ ಬಿಗ್ ಬಾಸ್ ವೇದಿಕೆ ಏರಲಿದ್ದಾರೆ. ಹಾಗಾದರೆ, ಬಿಗ್ ಬಾಸ್ ಶೋ ನಡೆಸೋಕೆ ಎಷ್ಟು ತಂತ್ರಜ್ಞರ ಅವಶ್ಯಕತೆ ಇದೆ ಎನ್ನುವ ಪ್ರಶ್ನೆಗೆ ಅಚ್ಚರಿಯ ಉತ್ತರ ಸಿಕ್ಕಿದೆ.
100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಇರುತ್ತಾರೆ. 17 ಜನ ಮನೆ ಸೇರಿದರೂ ಹಂತ ಹಂತವಾಗಿ ಸ್ಪರ್ಧಿಗಳು ಮನೆಯಿಂದ ಹೊರ ಬರುತ್ತಾ ಹೋಗುತ್ತಾರೆ. ಕೊನೆಗೆ ಗೆಲ್ಲೋದು ಒಬ್ಬರು ಮಾತ್ರ. 100 ದಿನಗಳ ಕಾಲ ಸಾಕಷ್ಟು ಜನ ತಂತ್ರಜ್ಞರು ಕೆಲಸ ಮಾಡುತ್ತಾರೆ. ಹಾಗಾದರೆ, ಬಿಗ್ ಬಾಸ್ ಉತ್ತಮ ರೀತಿಯಲ್ಲಿ ಮೂಡಿ ಬರಲು ಎಷ್ಟು ಜನರು ಶ್ರಮಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಬಿಗ್ ಬಾಸ್8ಗೆ ಸಂಬಂಧಿಸಿದಂತೆ ನಡೆದ ಸುದ್ದಿಗೋಷ್ಠಿಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ 300 ಜನರು ಕೆಲಸ ಮಾಡುತ್ತಿದ್ದರು. ಆದರೆ, ಈ ವರ್ಷ ಸೋಮವಾರದಿಂದ ಶುಕ್ರವಾರದವರೆಗೆ ಮನೆಯಲ್ಲಿ ಏನೆಲ್ಲ ಆಗುತ್ತಿದೆ ಎನ್ನುವುದುನ್ನು ವೂಟ್ನಲ್ಲಿ 24 ಗಂಟೆ ಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ, ಎರಡು ಪಿಸಿಆರ್ ರೂಂಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಕಾರಣಕ್ಕೆ 100 ಜನರನ್ನು ಹೆಚ್ಚುವರಿಯಾಗಿ ಕೆಲಸ ಮಾಡಲಿದ್ದಾರೆ. ಈ ಬಾರಿ ಒಟ್ಟು 400 ಸಿಬ್ಬಂದಿ ಕೆಲಸ ಮಾಡಲಿದ್ದಾರೆ. 80ಕ್ಕೂ ಅಧಿಕ ಕ್ಯಾಮೆರಾಗಳು ಇರಲಿವೆ ಎಂದರು ಪರಮೇಶ್ವರ್.
17 ಸ್ಪರ್ಧಿಗಳು
ಈ ಬಾರಿ ಎಷ್ಟು ಸ್ಪರ್ಧಿಗಳು ಇರುತ್ತಾರೆ ಎನ್ನುವ ಪ್ರಶ್ನೆಗೆ ಪರಮೇಶ್ವರ್ ಗುಂಡ್ಕಲ್ ಉತ್ತರಿಸಿದ್ದಾರೆ. ಈ ಬಾರಿ 17 ಸ್ಪರ್ಧಿಗಳನ್ನು ಮನೆಗೆ ಕಳುಹಿಸಬೇಕು ಎನ್ನುವ ಉದ್ದೇಶ ಇದೆ. ಇವರನ್ನು ಈಗಾಗಲೇ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಯಾರಾದರೂ ಒಬ್ಬರಿಗೆ ಪಾಸಿಟಿವ್ ಬಂದರೂ ಅವರನ್ನು ಮನೆ ಒಳಗೆ ಕಳುಹಿಸೋಕೆ ಆಗಲ್ಲ. ಹೀಗಾಗಿ ಈಗಲೇ ಸ್ಪರ್ಧಿಗಳ ಲೆಕ್ಕ ನೀಡೋಕೆ ಆಗಲ್ಲ ಎಂದಿದ್ದಾರೆ ಅವರು.
ಇದನ್ನೂ ಓದಿ: Bigg Boss Kannada 8: ಬಿಗ್ ಬಾಸ್ ಸೀಸನ್ 8 ಸೆಲೆಬ್ರಿಟಿಗಳಿಗೆ ಮೀಸಲು; ಪ್ರತಿದಿನ ರಾತ್ರಿ 9:30ಕ್ಕೆ ಶೋ
Published On - 4:31 pm, Fri, 26 February 21