
ಹಾವೇರಿ: ಜಿಲ್ಲೆಯ ಬಸಾಪುರ ಗ್ರಾಮದ ನೆಗಳೂರು ಕ್ರಾಸ್ ಬಳಿ ಬೈಕ್ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಕಾಶ ಮನ್ನಂಗಿ(27) ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ.
ಆಕಾಶ ಜಮೀನಿಗೆ ಹೋಗಿ ಮನೆಯವರಿಗೆ ಬುತ್ತಿ ಕೊಟ್ಟು ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.