ಹಾವೇರಿ: ರಾಜ್ಯಾದ್ಯಂತ ಸಂಡೇ ಲಾಕ್ಡೌನ್ ಇದ್ರೂ ಕೆಲವರು ಮಾತ್ರ ಅನಗತ್ಯವಾಗಿ ಬೀದಿಗೆ ಇಳಿಯೋದು ಮಾತ್ರ ಬಿಟ್ಟಿಲ್ಲ. ಅಂಥದ್ದೇ ಒಂದು ಘಟನೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.
ಮಾಸ್ಕ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ಸವಾರನೊಬ್ಬ ತನ್ನನ್ನ ಯಾರೂ ಹಿಡಿಯಲ್ಲ ಅಂತಾ ಬಿಂದಾಸ್ ಆಗಿ ರಸ್ತೆಗಳಲ್ಲಿ ಓಡಾಡ್ತಿದ್ದ. ಆದರೆ, ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಬರುತ್ತಿದ್ದಂಗೆ ಪೊಲೀಸರು ಅಡ್ಡ ಬಂದು ಬಿಡೋದೇ. ಪಾಪ, ಖಾಕಿ ಕಂಡು ಕೊಂಚ ಗಲಿಬಿಲಿಗೊಂಡ ಸವಾರ ಒಂದು ಕ್ಷಣ ಏನು ಮಾಡೋದು ಅಂತಾ ತೋಚದೆ ಕೊನೆಗೆ ತನ್ನ ಬೈಕ್ ಕ್ಲೀನ್ ಮಾಡೋ ಬಟ್ಟೆಯನ್ನೇ ಮಾಸ್ಕ್ ಥರ ಮುಖ ಮುಚ್ಚಿಕೊಂಡ.
ಆದರೆ, ಪೊಲೀಸರು ಇದನ್ನು ಒಪ್ಪಬೇಕಲ್ಲ. ಕೊನೆಗೆ, ಮಾಸ್ಕ್ ಧರಿಸದೆ ಅನಗತ್ಯ ಓಡಾಡ್ತಿರುವ ಕಾರಣಕ್ಕೆ ಐನೂರು ರೂಪಾಯಿ ಫೈನ್ ಹಾಕಿ ಮನೆಗೆ ಕಳಿಸಿದರು.