ದೇವಸ್ಥಾನಕ್ಕೆ ತೆರಳುವಾಗ ರಸ್ತೆ ವಿಭಜಕಕ್ಕೆ ಬೈಕ್​ ಡಿಕ್ಕಿ: ಬರ್ತ್‌ಡೇ ದಿನದಂದೇ ಮಸಣ ಸೇರಿದ ಯುವಕ

ಬರ್ತ್‌ಡೇ ದಿನದಂದೇ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮಸಣ ಸೇರಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 18ವರ್ಷದ ತಿಲಕ್ ಮೃತ ಯುವಕ.

  • TV9 Web Team
  • Published On - 19:37 PM, 5 Feb 2021
ದೇವಸ್ಥಾನಕ್ಕೆ ತೆರಳುವಾಗ ರಸ್ತೆ ವಿಭಜಕಕ್ಕೆ ಬೈಕ್​ ಡಿಕ್ಕಿ: ಬರ್ತ್‌ಡೇ ದಿನದಂದೇ ಮಸಣ ಸೇರಿದ ಯುವಕ
ಅಪಘಾತದ ಭೀಕರ ದೃಶ್ಯ

ಬೆಂಗಳೂರು: ಬರ್ತ್‌ಡೇ ದಿನದಂದೇ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮಸಣ ಸೇರಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 18ವರ್ಷದ ತಿಲಕ್ ಮೃತ ಯುವಕ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಿಲಕ್‌ ತನ್ನ ಗೆಳೆಯನೊಂದಿಗೆ ದೇಗುಲಕ್ಕೆ ತೆರಳುತ್ತಿದ್ದ. ಈ ವೇಳೆ, ಬೈಕ್​ನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ತಿಲಕ್​ ಹೆಲ್ಮೆಟ್ ಧರಿಸದಿದ್ದಕ್ಕೆ ತಲೆಗೆ ಗಂಭೀರ ಗಾಯಗಳಾಗಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಹೊಸ ರಸ್ತೆ ತಿರುವಿನಲ್ಲಿ ಘಟನೆ ನಡೆದಿದೆ. ಇನ್ನು ಘಟನೆಯಲ್ಲಿ ಹಿಂಬದಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣ: ಆದಿತ್ಯ ಆಳ್ವಾ, ವಿರೇನ್ ಖನ್ನಾಗೆ ಜಾಮೀನು ಮಂಜೂರು