ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?

ಇನ್ಮುಂದೆ ನಮ್ಮ ಮೆಟ್ರೋ ಅವಧಿ ಹೆಚ್ಚಳ, ಕೊನೆಯ ಟ್ರೈನ್​ ಎಷ್ಟೊತ್ತಿಗೆ?

ಬೆಂಗಳೂರು: ಹೊಸ ವರ್ಷ ಆರಂಭಕ್ಕೆ ನಮ್ಮ ಮೆಟ್ರೋ ಮತ್ತು ಬಿಎಂಟಿಸಿ ಗಿಫ್ಟ್ ನೀಡಿದೆ. ಇಂದಿನಿಂದ ಮೆಟ್ರೋ ಸೇವೆ ಮಧ್ಯರಾತ್ರಿ 12ರವರೆಗೆ ವಿಸ್ತರಣೆಯಾಗಿದೆ. ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸಂಪರ್ಕ ಸಾರಿಗೆ ವ್ಯವಸ್ಥೆ ಕೂಡ ವಿಸ್ತರಣೆಯಾಗಿದೆ. ಈ ಹಿಂದೆ ಮೆಟ್ರೋ ರಾತ್ರಿ 11.30ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಆದ್ರೆ ಈಗ ತನ್ನ ಸೇವೆಯನ್ನು 12ರವರೆಗೆ ವಿಸ್ತರಣೆ ಮಾಡಿದೆ.

ಕೊನೆಯ ಟ್ರೈನ್ ಯಾವಾಗ:
-ಮೈಸೂರು ರಸ್ತೆಯಿಂದ ರಾತ್ರಿ 11.40ಕ್ಕೆ ಕೊನೆಯ ಟ್ರೈನ್
-ಬೈಯ್ಯಪ್ಪನಹಳ್ಳಿಯಿಂದ 11.35ಕ್ಕೆ ಕೊನೆಯ ಮೆಟ್ರೋ ಟ್ರೈನ್
-ನಾಗಸಂದ್ರದಿಂದ ರಾತ್ರಿ 11.25ಕ್ಕೆ ಕೊನೇ ಮೆಟ್ರೋ ಟ್ರೈನ್
-ಯಲಚೇನಹಳ್ಳಿಯಿಂದ 11.35ಕ್ಕೆ ಕೊನೇ ಟ್ರೈನ್ ಹೊರಡಲಿದೆ
ಎಲ್ಲಾ ಟ್ರೈನ್‌ಗಳು 12 ಗಂಟೆಗೆ ಮೆಜೆಸ್ಟಿಕ್‌ಗೆ ತಲುಪುತ್ತವೆ.
ಮೆಟ್ರೋ ಸೇವೆ ವಿಸ್ತರಣೆಯಾಗಿರುವ ಹಿನ್ನೆಲೆ BMTCಯಿಂದ ಫೀಡರ್ ಸೇವೆಗೆ ವ್ಯವಸ್ಥೆ ಮಾಡಲಾಗಿದೆ.

ಮೆಟ್ರೋಗೆ ಪೂರಕವಾಗಿ ಬಿಎಂಟಿಸಿ ಸೇವೆ ವಿಸ್ತರಣೆ:
ಕೆಲ ಮುಖ್ಯ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಸರ್ವೀಸ್ ನೀಡೋಕೆ ಬಿಎಂಟಿಸಿ ಮುಂದಾಗಿದೆ.
-ವಿಜಯ ನಗರ ಮೆಟ್ರೋ ನಿಲ್ದಾಣ ದಿಂದ ಬನಶಂಕರಿ ಮೆಟ್ರೋ ನಿಲ್ದಾಣ
-ವಿಜಯನಗರ ದಿಂದ ಉಲ್ಲಾಲ
-ಮೈಸೂರು ರಸ್ತೆಯಿಂದ ಕೆಂಗೇರಿ
-ಮೈಸೂರು ರಸ್ತೆಯಿಂದ ಬಿಇಎಂಎಲ್ 5 ನೇ ಹಂತ
-ಬನಶಂಕರಿಯಿಂದ ಕಗ್ಗಲೀಪುರ.
-ಜಯನಗರದಿಂದ ವಡ್ರಹಳ್ಳಿ
-ಜಯನಗರ ಮೆಟ್ರೋ ನಿಲ್ದಾಣದಿಂದ ಜಂಬೂಸವಾರಿ ದಿಣ್ಣೆ
-ಗೋರಗುಂಟೆ ಪಾಳ್ಯದಿಂದ ವಿದ್ಯಾರಣ್ಯಪುರ
-ಜಾಲಹಳ್ಳಿಯಿಂದ ವಿದ್ಯಾರಣ್ಯಪುರ
-ಎಸ್ ವಿ ರೋಡ್​ನಿಂದ ವೈಟ್ ಫೀಲ್ಡ್
-ಎಸ್ ವಿ ರೋಡ್ ಮೆಟ್ರೋದಿಂದ ಕೆಆರ್ ಪುರಂ ಟಿಟಿಎಂಸಿ
-ಎಸ್ ವಿ ರೋಡ್ ಮೆಟ್ರೋಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್
ಈ ಎಲ್ಲಾ ಮಾರ್ಗಗಳಿಗೆ ತಡರಾತ್ರಿ 12.20 ರವರೆಗೂ ಬಸ್ ಸೇವೆ ವಿಸ್ತರಿಸಲಾಗಿದೆ.

Click on your DTH Provider to Add TV9 Kannada