ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಆಡುತ್ತಾ ಕುಳಿತಿದ್ದ 6 ವರ್ಷದ ಬಾಲಕ ಸಾವು

ಬಳ್ಳಾರಿ: ಕಾರು ಚಾಲಕನ ಅಜಾಗರೂಕತೆಯಿಂದ ಏನೂ ಅರಿಯದೆ ಮನೆಯ ಬಾಗಿಲಲ್ಲಿ ಆಡುತ್ತ ಕುಳಿತಿದ್ದ 6 ವರ್ಷದ ಬಾಲಕ ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ಇಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದ ಆರು ವರ್ಷದ ಬಾಲಕ ಶಿವು ಮೃತ ದುರ್ದೈವಿ ಯಾಗಿದ್ದಾನೆ. ಮೃತ ಬಾಲಕನ ಮನೆ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಗದಗದಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಮನೆ ಕಡೆಗೆ ನುಗ್ಗಿದೆ. ಇದರ ಅರಿವೇ […]

ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು, ಆಡುತ್ತಾ ಕುಳಿತಿದ್ದ 6 ವರ್ಷದ ಬಾಲಕ ಸಾವು
Edited By:

Updated on: Jul 28, 2020 | 2:05 PM

ಬಳ್ಳಾರಿ: ಕಾರು ಚಾಲಕನ ಅಜಾಗರೂಕತೆಯಿಂದ ಏನೂ ಅರಿಯದೆ ಮನೆಯ ಬಾಗಿಲಲ್ಲಿ ಆಡುತ್ತ ಕುಳಿತಿದ್ದ 6 ವರ್ಷದ ಬಾಲಕ ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ಇಂದು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೆಲಗಿ ಗ್ರಾಮದ ಆರು ವರ್ಷದ ಬಾಲಕ ಶಿವು ಮೃತ ದುರ್ದೈವಿ ಯಾಗಿದ್ದಾನೆ. ಮೃತ ಬಾಲಕನ ಮನೆ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದು, ಗದಗದಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿದ್ದ ಮನೆ ಕಡೆಗೆ ನುಗ್ಗಿದೆ.

ಇದರ ಅರಿವೇ ಇಲ್ಲದೆ ಮನೆ ಬಾಗಿಲಲ್ಲಿ ಕುಳಿತಿದ್ದ ಬಾಲಕನಿಗೆ ಕಾರು ಗುದ್ದಿದ ಪರಿಣಾಮದಿಂದಾಗಿ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಹಲವಾಗಲು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ತನಿಖೆ ಶುರುಮಾಡಿದ್ದಾರೆ.

Published On - 12:36 pm, Tue, 28 July 20