ಶಿವಮೊಗ್ಗ: ಕೆಲಸಕ್ಕೆಂದು ಅಡಿಕೆ ತೋಟಕ್ಕೆ ಹೋದವನನ್ನ ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಹೊಸಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಲ್ಲೇಶ್(38) ಮೃತ ದುರ್ದೈವಿ.
ನಿನ್ನೆ ಮಧ್ಯಾಹ್ನ ಅಡಿಕೆ ತೋಟಕ್ಕೆ ಹೋಗಿದ್ದ ಮಲ್ಲೇಶನನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇಂದು ಬೆಳಗ್ಗೆ ಮೃತನ ಸಹೋದರ ತೋಟಕ್ಕೆ ಹೋದಾಗ ಮಲ್ಲೇಶ್ನ ಮೃತದೇಹ ಪತ್ತೆಯಾಗಿದೆ. ಆದರೆ, ಕೊಲೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ಇನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.