
ಹಾವೇರಿ: ಬಾಂದಾರ ನೀರಿನಲ್ಲಿ ಮುಳುಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನೆಗಳೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಆಕಾಶ (15) ಎಂದು ಗುರುತಿಸಲಾಗಿದೆ.
ಎತ್ತಿಗೆ ನೀರು ಕುಡಿಸಲು ಬಾಂದಾರಗೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಇನ್ನು ಆಕಾಶ ನೀರನಲ್ಲಿ ಮುಳುಗುತ್ತಿದ್ದಂತೆ ಸ್ಥಳೀಯರಿಂದ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯಿತು. ಈ ನಡುವೆ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
