Budget 2021: ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿಲ್ಲ ಬದಲಾವಣೆ: 75 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ

ಹೆಚ್ಚು ತೆರಿಗೆ ಪಾವತಿ ಮಾಡುವವರಿಗೆ ಕೊವಿಡ್​ ಸೆಸ್​ ಹೇರಿಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಬಜೆಟ್​ನಲ್ಲಿ ಕೇಂದ್ರ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

Budget 2021: ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿಲ್ಲ ಬದಲಾವಣೆ: 75 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ
ಪ್ರಾತಿನಿಧಿಕ ಚಿತ್ರ

Updated on: Feb 01, 2021 | 2:40 PM

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಣೆ ಮಾಡಿದ ಇಂದಿನ ಬಜೆಟ್​ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್​ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರ ಜೊತೆಗೆ ನೇರ ತೆರಿಗೆಯಲ್ಲೂ ಹೆಚ್ಚಿನ ವ್ಯತ್ಯಾಸ ಆಗಿಲ್ಲ.

ಕೊರೊನಾ ಲಸಿಕೆ ನೀಡಲು ಅಂದಾಜು 60-65 ಸಾವಿರ ಕೋಟಿ ಅಗತ್ಯವಿದ್ದು, ಈ ಮೊತ್ತದ ಹಣ ಸಂಗ್ರಹಿಸಲು ಗರಿಷ್ಠ ಶೇ 2ರಷ್ಟು ಕೊರೊನಾ ಸೆಸ್ ವಿಧಿಸುವ ಕುರಿತು ಹಣಕಾಸು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿತ್ತು. ಆದರೆ, ಬಜೆಟ್​ನಲ್ಲಿ ಕೇಂದ್ರ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಇದು ತೆರಿಗೆ ಪಾವತಿದಾರರಿಗೆ ದೊಡ್ಡ ರಿಲೀಫ್​ ನೀಡಿದಂತಾಗಿದೆ.

75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್​ ನೀಡಿದೆ. 75 ವರ್ಷ ಮೇಲ್ಪಟ್ಟಟ್ಟಿದ್ದು ಅವರಿಗೆ ಪಿಂಚಣಿ ಹಾಗೂ ಬಡ್ಡಿ ಮಾತ್ರ ಆದಾಯವಾಗಿದ್ದರೆ ತೆರಿಗೆಯಲ್ಲಿ ವಿನಾಯಿತಿ ನಿಡುತ್ತಿದ್ದೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಕಳೆದ ವರ್ಷ ಸರ್ಕಾರ ಆದಾಯ ತೆರಿಗೆ ವಿನಾಯಿತಿ ನೀಡಿತ್ತು. 2.5- 5 ಲಕ್ಷ ರೂಪಾಯಿವರೆಗೆ ಗಳಿಕೆ ಮಾಡುವವರು ಶೇ. 5 ತೆರಿಗೆ ಪಾವತಿಸಬೇಕು. 5-7.5 ಲಕ್ಷದವರೆಗೆ ಶೇ.10, 7.5-10 ಲಕ್ಷ ಆದಾಯದವರಿಗೆ ಶೇ.15, 10-12.5 ಲಕ್ಷ ಆದಾಯ ಹೊಂದುವರಿಗೆ ಶೇ.20 ಹಾಗೂ 12.5-15 ಲಕ್ಷ ಆದಾಯ ಇರುವವರಿಗೆ ಶೇ. 25 ಹಾಗೂ 15 ಲಕ್ಷ ರೂಪಾಯಿಗಿಂತ ಮೇಲ್ಪಟ್ಟವರಿಗೆ ಶೇ.20 ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿತ್ತು.

Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್​, ಆಟೊಮೊಬೈಲ್​ ವಲಯ ಜಿಗಿತ

 

Published On - 2:15 pm, Mon, 1 February 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us