Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್​, ಆಟೊಮೊಬೈಲ್​ ವಲಯ ಜಿಗಿತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 01, 2021 | 1:46 PM

01:15ಕ್ಕೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ BSE 1,511 ಅಂಶಗಳಷ್ಟು ಏರಿಕೆ ಕಂಡಿದ್ದು 47,796.96 ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ NIFTY 394.35 ಅಂಶಗಳಷ್ಟು ಏರಿಕೆ ದಾಖಲಿಸಿದೆ.

Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್​, ಆಟೊಮೊಬೈಲ್​ ವಲಯ ಜಿಗಿತ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸುಮಾರು ಎರಡು ಗಂಟೆ ಕಾಲ ಬಜೆಟ್​ ಮಂಡನೆ ಮಾಡಿದ್ದಾರೆ. ಈ​ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಕೆಲ ಷೇರುಗಳ ಮೌಲ್ಯ ಭಾರೀ ಏರಿಕೆ ಕಂಡಿದೆ.

ಮಧ್ಯಾಹ್ನ 01:15ಕ್ಕೆ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ BSE 1,511 ಅಂಶಗಳಷ್ಟು ಏರಿಕೆ ಕಂಡಿದ್ದು 47,796.96 ತಲುಪಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ NIFTY 394.35 ಅಂಶಗಳಷ್ಟು ಏರಿಕೆ ದಾಖಲಿಸಿದೆ. 14,042.95 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಇನ್ನು ನಿಫ್ಟಿ ಬ್ಯಾಂಕ್​ 1725 ಅಂಕ ಏರಿಕೆ ಕಂಡು 32,241 ಆಗಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ₹ 20 ಸಾವಿರ ಕೋಟಿ ಬಂಡವಾಳ ಮರುಪೂರಣ ಮಾಡುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಬ್ಯಾಂಕ್​ ಷೇರುಗಳು ಭಾರೀ ಏರಿಕೆ ಕಂಡಿವೆ.

ಹಳೆಯದಾದ ಮತ್ತು ಮಾಲಿನ್ಯಕಾರಕ ವಾಹನಗಳ ಬಳಕೆ ತಡೆಯುವ ನಿಟ್ಟಿನಲ್ಲಿ ಇಂದು ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಹೊಸ ನೀತಿ ಘೋಷಿಸಿದ್ದಾರೆ. ಈ ಘೋಷಣೆ ಬೆನ್ನಲ್ಲೇ ಆಟೋ ಮೊಬೈಲ್​ ಷೇರುಗಳ ಬೆಲೆ ಹೆಚ್ಚಿದೆ.

Budget 2021 | ಹಳೆಯ, ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಲು ಹೊಸ ನೀತಿ ಘೋಷಿಸಿದ ನಿರ್ಮಲಾ ಸೀತಾರಾಮನ್​

Budget 2021 LIVE: ಆದಾಯ ತೆರಿಗೆ ನಿಯಮದಲ್ಲಿ ಬದಲಾವಣೆ ಇಲ್ಲ.. ಹಿರಿಯ ನಾಗರಿಕರಿಗೆ ಐಟಿ ರಿಟರ್ನ್​ ಸಲ್ಲಿಕೆ ವಿನಾಯ್ತಿ

Budget 2021: ಬಜೆಟ್​ ಮಂಡನೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಆರಂಭ