ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು. ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ […]

ಜನಸಾಗರ ಸೀಳಿ ಹೋರಿಗಳ ಮಿಂಚಿನ ಓಟ: ಕೊಬ್ಬಿದ ಗೂಳಿ ಹಿಡಿಯಲು ಪೈಲ್ವಾನರ ಸಾಹಸ
ಸಾಧು ಶ್ರೀನಾಥ್​

Updated on: Feb 23, 2020 | 8:21 PM

ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ಅಂದ್ರೆನೇ ಶಕ್ತಿಯ ಪ್ರಶ್ನೆ. ಇಲ್ಲಿ ಕಟ್ ಮಸ್ತಾಗಿರೋ ಹೋರಿಗಳು ಶರವೇಗದಲ್ಲಿ ಓಡ್ತಿದ್ರೆ, ಅವುಗಳನ್ನ ಹಿಡಿಯೋಕೆ ಪೈಲ್ವಾನ್​ಗಳು ಸಿಕ್ಕಾಪಟ್ಟೆ ಹರಸಾಹಸ ಮಾಡ್ತಾರೆ. ಅದ್ರಲ್ಲೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸೋ ಸ್ಪರ್ಧೆ ಅಂತೂ ಎಲ್ರಿಗೂ ಖುಷಿ ಕೊಡ್ತು.

ಅಲಂಕೃತಗೊಂಡಿದ್ದ ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸ್ತಿದ್ರೆ ಶಿಳ್ಳೆ, ಚಪ್ಪಾಳೆಗಳಿಂದ ಜನ ಹುರಿದುಂಬಿಸ್ತಿದ್ರು. ಪೈಲ್ವಾನ್​ಗಳು ಕೂಡ ತಮ್ಮ ಸಾಹಸಕ್ಕೆ ಜನ ಸೈ ಅಂದಿರೋದು ಕಂಡು ಸಂತಸ ವ್ಯಕ್ತಪಡಿಸಿದ್ರು. ಇನ್ನು ಹೋರಿ ಬೆದರಿಸೋ ಸ್ಪರ್ಧೆಯಲ್ಲಿ ಚಿನ್ನ, ನಗದು, ಟಿವಿ, ಫ್ರಿಡ್ಜ್ ಸೇರಿದಂತೆ ಹಲವು ಬಹುಮಾನಗಳನ್ನ ಇಡಲಾಗಿತ್ತು. ಚೆನ್ನಾಗಿ ಓಡಿದ ಹೋರಿ, ಸುಂದರವಾಗಿ ಅಲಂಕೃತಗೊಂಡ ಹೋರಿ ಹಾಗೂ ಪೈಲ್ವಾನರ ಕೈಗೆ ಸಿಗದ ಹೋರಿ.. ಹೀಗೆ ವಿವಿಧ ಹಂತಗಳಲ್ಲಿ ಬಹುಮಾನ ನೀಡಲಾಯ್ತು.

ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ವು. ತಮ್ಮ ಹೋರಿಗಳ ತಾಕತ್ತು ನೋಡಿ ಮಾಲೀಕರು ಕೂಡ ಖುಷಿಪಟ್ರು. ಒಟ್ನಲ್ಲಿ, ಹೋರಿ ಬೆದರಿಸೋ ಸ್ಪರ್ಧೆಗೆ ಜನಸಾಗರವೇ ನೆರೆದಿತ್ತು. ಹಳ್ಳಿ ಜನರ ಪಾಲಿಗೆ ಖುಷಿಯ ರಸದೌತಣವನ್ನೇ ಬಡಿಸಿತ್ತು.










ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us