ಮನೆಗೆ ಕಾರು ಡಿಕ್ಕಿ: ಪ್ರಶ್ನಿಸಿದ ಸ್ಥಳೀಯರ ಮೇಲೆ ಶಾಸಕರ ಮೊಮ್ಮಗನ ದರ್ಪ!

ಮನೆಗೆ ಕಾರು ಡಿಕ್ಕಿ: ಪ್ರಶ್ನಿಸಿದ ಸ್ಥಳೀಯರ ಮೇಲೆ ಶಾಸಕರ ಮೊಮ್ಮಗನ ದರ್ಪ!

ದಾವಣಗೆರೆ: ಬಿಜೆಪಿ ಶಾಸಕ ಎಸ್​.ಎ.ರವೀಂದ್ರನಾಥ್ ಅವರ ಮೊಮ್ಮಗನ ಕಾರು ಅಪಘಾತವಾಗಿರುವ ಘಟನೆ ತಡರಾತ್ರಿ ಹೊರವಲಯದ ಶಾಮನೂರಿನಲ್ಲಿ ನಡೆದಿದೆ. ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಬಳಿಕ ಮನೆಗೆ ಕಾರು ಗುದ್ದಿದೆ. ಇದನ್ನು ಪ್ರಶ್ನಿಸಿದವರ ಮೇಲೆ ಶಾಸಕರ ಮೊಮ್ಮಗ ಅರುಣಕುಮಾರ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರು ಮೊದಲು ವಿದ್ಯುತ್‌ ಕಂಬಕ್ಕೆ ಡಿಕ್ಕಿಯೊಡೆದಿದೆ. ಕಾರು ಡಿಕ್ಕಿಯ ರಭಸಕ್ಕೆ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಇದನ್ನು ಪ್ರಶ್ನಿಸಿದವರ ಮೇಲೆ ಅರುಣಕುಮಾರ ಹಲ್ಲೆಗೆ ಮುಂದಾಗಿದ್ದು, ಬಳಿಕ ಸ್ಥಳೀಯರ […]

sadhu srinath

|

Feb 24, 2020 | 10:14 AM

ದಾವಣಗೆರೆ: ಬಿಜೆಪಿ ಶಾಸಕ ಎಸ್​.ಎ.ರವೀಂದ್ರನಾಥ್ ಅವರ ಮೊಮ್ಮಗನ ಕಾರು ಅಪಘಾತವಾಗಿರುವ ಘಟನೆ ತಡರಾತ್ರಿ ಹೊರವಲಯದ ಶಾಮನೂರಿನಲ್ಲಿ ನಡೆದಿದೆ. ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಬಳಿಕ ಮನೆಗೆ ಕಾರು ಗುದ್ದಿದೆ. ಇದನ್ನು ಪ್ರಶ್ನಿಸಿದವರ ಮೇಲೆ ಶಾಸಕರ ಮೊಮ್ಮಗ ಅರುಣಕುಮಾರ ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಗವಾಗಿ ಬರುತ್ತಿದ್ದ ಕಾರು ಮೊದಲು ವಿದ್ಯುತ್‌ ಕಂಬಕ್ಕೆ ಡಿಕ್ಕಿಯೊಡೆದಿದೆ. ಕಾರು ಡಿಕ್ಕಿಯ ರಭಸಕ್ಕೆ ವಿದ್ಯುತ್‌ ಕಂಬ ಮುರಿದು ಬಿದ್ದಿದೆ. ಇದನ್ನು ಪ್ರಶ್ನಿಸಿದವರ ಮೇಲೆ ಅರುಣಕುಮಾರ ಹಲ್ಲೆಗೆ ಮುಂದಾಗಿದ್ದು, ಬಳಿಕ ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕಾರು ಬಿಟ್ಟು ಸ್ಥಳದಿಂದ ಅರುಣಕುಮಾರ ಪರಾರಿಯಾಗಿದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಪ್ಪ ಪುತ್ರ ಅರುಣಕುಮಾರ ಆಗಿದ್ದಾರೆ. ವೀಣಾ ನಂಜಪ್ಪ ಅವರು ದಾವಣಗೆರೆ ಪಾಲಿಕೆ ಸದಸ್ಯೆಯೂ ಆಗಿದ್ದಾರೆ. ಶಾಸಕರ ಮೊಮ್ಮಗನ ಕಾರು ಅಪಘಾತಕ್ಕೆ ಸಂಬಂಧಿಸಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಅರುಣಕುಮಾರ ಅವರನ್ನ ಕರೆಸುವಂತೆ ಆಗ್ರಹಿಸುತ್ತಿದ್ದಾರೆ.

https://www.facebook.com/Tv9Kannada/videos/1354991814704628/

Follow us on

Related Stories

Most Read Stories

Click on your DTH Provider to Add TV9 Kannada