Sunny Leone: ಬಟ್ಟೆ ಅಂಗಡಿ ಉದ್ಘಾಟನೆಗೆ ಬರ್ತೀನೆಂದು ಹೇಳಿ.. 29 ಲಕ್ಷ ವಂಚಿಸಿದ್ರಾ ‘ಸೇಸಮ್ಮ’?

|

Updated on: Feb 06, 2021 | 8:04 PM

ಚಿತ್ರೀಕರಣಕ್ಕೆಂದು ನಟಿ ಸನ್ನಿ ಲಿಯೋನ್ ಕೇರಳಕ್ಕೆ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸನ್ನಿ ಲಿಯೋನ್ ರನ್ನ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Sunny Leone: ಬಟ್ಟೆ ಅಂಗಡಿ ಉದ್ಘಾಟನೆಗೆ ಬರ್ತೀನೆಂದು ಹೇಳಿ.. 29 ಲಕ್ಷ  ವಂಚಿಸಿದ್ರಾ ಸೇಸಮ್ಮ?
ಸನ್ನಿ ಲಿಯೋನ್
Follow us on

ಎರ್ನಾಕುಲಂ: ಸೆಲೆಬ್ರಿಟಿಗಳಾದಮೇಲೆ ಸಾಕಷ್ಟು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಲು ಅವಕಾಶ ಸಿಗುತ್ತದೆ. ಚಿನ್ನದ ಮಳಿಗೆ, ಬಟ್ಟೆ ಮಳಿಗೆಗಳ ಉದ್ಘಾಟನೆಗೆ ಆಮಂತ್ರಣ ನೀಡಿ, ಸಂಭಾವನೆ ದೊಡ್ಡ ಮೊತ್ತವನ್ನೇ ರೂಪದಲ್ಲಿ ನೀಡಲಾಗುತ್ತದೆ. ಅದೇ ರೀತಿ ನಟಿ ಸನ್ನಿ ಲಿಯೋನ್​ಗೂ ಬಟ್ಟೆ ಶಾಪ್​ ಉದ್ಘಾಟನೆಗೆ ಆಮಂತ್ರಣ ನೀಡಲಾಗಿತ್ತು. ಆದರೆ, ಹಣ ತೆಗೆದುಕೊಂಡು ಅವರು ಉದ್ಘಾಟನೆಗೆ ಬಂದೇ ಇಲ್ಲ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗ ಪ್ರಕರಣ ದಾಖಲಾಗಿದ್ದು, ಸನ್ನಿ ವಿಚಾರಣೆ ನಡೆದಿದೆ.

ಈ ಘಟನೆ ನಡೆದಿದ್ದು 2019ರ ಫೆ.14ರಂದು. ಬಟ್ಟೆ ಅಂಗಡಿ ಉದ್ಘಾಟನೆಗೆ‌ ಬರುವುದಾಗಿ ಹೇಳಿ ಸನ್ನಿ ಲಿಯೋನ್  29 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎನ್ನಲಾಗಿದೆ.  ಆದರೆ ಕೊನೆಯ ಕ್ಷಣದಲ್ಲಿ ಅವರು ಕೈಕೊಟ್ಟಿದ್ದಾರೆ. ಕೊನೆಗೆ ಹಣ ಕೂಡ ವಾಪಾಸು ನೀಡಿಲ್ಲ. ಎರ್ನಾಕುಲಂ ಅಪರಾಧ ವಿಭಾಗದ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ.

ಚಿತ್ರೀಕರಣಕ್ಕೆಂದು ನಟಿ ಸನ್ನಿ ಲಿಯೋನ್ ಕೇರಳಕ್ಕೆ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸನ್ನಿ ಲಿಯೋನ್ ರನ್ನ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ವೀರಮಾದೇವಿ ಸಿನಿಮಾದಲ್ಲಿ ಸನ್ನಿಲಿಯೋನ್​ ನಟಿಸುತ್ತಿದ್ದಾರೆ. 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ಪಾನ್​ ಇಂಡಿಯಾ ಚಿತ್ರವಾಗಿ ತೆರೆಗೆ ಬರುತ್ತಿದೆ.

ಬಿಹಾರದ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ!