ಕುಂದಾನಗರಿಯಲ್ಲಿ CBI ದಿಢೀರ್ ದಾಳಿ: ಲಂಚ ಪಡೆಯುತ್ತಿದ್ದ GST ಅಧಿಕಾರಿಗಳು ಅರೆಸ್ಟ್
ಬೆಳಗಾವಿ: ನಗರದಲ್ಲಿ CBI ತಂಡ ದಿಢೀರ್ ದಾಳಿ ನಡೆಸಿದ್ದು ಮೂವರು GST ಅಧಿಕಾರಿಗಳನ್ನು ಬಂಧಿಸಿದೆ. ಅಧಿಕಾರಿಗಳು ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ CBI ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 21ರಂದು CBI ತನಿಖಾ ಸಂಸ್ಥೆಯ ಬೆಂಗಳೂರು ವಿಭಾಗದ ACBಗೆ ಉದ್ಯಮಿಯೊಬ್ಬರು ದೂರು ನೀಡಿದ್ದರು. ಬೆಳಗಾವಿ ಮೂಲದ ಪಾನ್ ಮಸಾಲಾ ಉದ್ಯಮಿ ರಾಜಾಲಕ್ಷ್ಮಣ ಪಾಚಾಪುರೆಯಿಂದ ದೂರು ನೀಡಲಾಗಿತ್ತು. ಏನಿದು ಪ್ರಕರಣ? ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ RP ಪ್ರೊಡಕ್ಷನ್ಸ್ ಹೆಸರಲ್ಲಿ […]

ಬೆಳಗಾವಿ: ನಗರದಲ್ಲಿ CBI ತಂಡ ದಿಢೀರ್ ದಾಳಿ ನಡೆಸಿದ್ದು ಮೂವರು GST ಅಧಿಕಾರಿಗಳನ್ನು ಬಂಧಿಸಿದೆ. ಅಧಿಕಾರಿಗಳು ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ CBI ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 21ರಂದು CBI ತನಿಖಾ ಸಂಸ್ಥೆಯ ಬೆಂಗಳೂರು ವಿಭಾಗದ ACBಗೆ ಉದ್ಯಮಿಯೊಬ್ಬರು ದೂರು ನೀಡಿದ್ದರು. ಬೆಳಗಾವಿ ಮೂಲದ ಪಾನ್ ಮಸಾಲಾ ಉದ್ಯಮಿ ರಾಜಾಲಕ್ಷ್ಮಣ ಪಾಚಾಪುರೆಯಿಂದ ದೂರು ನೀಡಲಾಗಿತ್ತು.
ಏನಿದು ಪ್ರಕರಣ? ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೋರಗಾಂವ ಗ್ರಾಮದಲ್ಲಿ RP ಪ್ರೊಡಕ್ಷನ್ಸ್ ಹೆಸರಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದ ಉದ್ಯಮಿ ರಾಜಾಲಕ್ಷ್ಮಣಗೆ ಮೂವರು GST ಅಧಿಕಾರಿಗಳು ಸೆಪ್ಟೆಂಬರ್ 12ರಂದು ತಮ್ಮ ಫ್ಯಾಕ್ಟರಿಗೆ ಭೇಟಿ ನೀಡಿ 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಾಗಾಗಿ, ಇಂದು CBIನ ACB ಇನ್ಸ್ಪೆಕ್ಟರ್ ಎನ್. ಹರೀಶ್‌ಬಾಬು ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಹಣಕ್ಕೆ ಬೇಡಿಕೆಯಿಟ್ಟ GST ಅಧೀಕ್ಷಕ ಸುರೇಶ್ ಜಡಗಿ, GST ಇನ್ಸ್ಪೆಕ್ಟರ್ಗಳಾದ ವೈಭವ್ ಗೋಯಲ್ ಹಾಗೂ ಮೋಹನಕುಮಾರ್ರ ಬಂಧನವಾಗಿದೆ.
ಬಂಧಿತ ಆರೋಪಿಗಳನ್ನ ಧಾರವಾಡದ ವಿಶೇಷ CBI ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೀಗ, ಮೂವರು ಆರೋಪಿಗಳಿಗೆ ಸೆ. 30ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.




