ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ: ಜಾಕೀರ್‌ಗೆ ಮತ್ತೆ CCB ನೋಟಿಸ್
ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್‌ಗೆ ಸಿಸಿಬಿ ಮತ್ತೆ ನೋಟಿಸ್ ನೀಡಿದೆ. ಹೀಗಾಗಿ ಫ್ರೇಜರ್ ಟೌನ್ನ ಮಾಜಿ ಬಿಬಿಎಂಪಿ ಸದಸ್ಯ ಜಾಕೀರ್ ಸಿಸಿಬಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಈಗಾಗಲೇ ಒಂದು ಬಾರಿ ವಿಚಾರಣೆ ನಡೆಸಿರೂ ಅಧಿಕಾರಿಗಳು ಜಾಕೀರ್ ಹೇಳಿಕೆ ಪರಿಶೀಲಿಸಿ ಮತ್ತೆ 2ನೇ ಬಾರಿಗೆ ಹಾಜರಾಗಲು ಸೂಚಿಸಿದ್ದಾರೆ. ಜಾಕಿರ್ ಗಲಭೆ ದಿನ ಉದ್ರಿಕ್ತರಿಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ ಹಾಗೂ ಗಲಭೆ ಆರೋಪಿ […]

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್‌ಗೆ ಸಿಸಿಬಿ ಮತ್ತೆ ನೋಟಿಸ್ ನೀಡಿದೆ. ಹೀಗಾಗಿ ಫ್ರೇಜರ್ ಟೌನ್ನ ಮಾಜಿ ಬಿಬಿಎಂಪಿ ಸದಸ್ಯ ಜಾಕೀರ್ ಸಿಸಿಬಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಈಗಾಗಲೇ ಒಂದು ಬಾರಿ ವಿಚಾರಣೆ ನಡೆಸಿರೂ ಅಧಿಕಾರಿಗಳು ಜಾಕೀರ್ ಹೇಳಿಕೆ ಪರಿಶೀಲಿಸಿ ಮತ್ತೆ 2ನೇ ಬಾರಿಗೆ ಹಾಜರಾಗಲು ಸೂಚಿಸಿದ್ದಾರೆ. ಜಾಕಿರ್ ಗಲಭೆ ದಿನ ಉದ್ರಿಕ್ತರಿಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ ಹಾಗೂ ಗಲಭೆ ಆರೋಪಿ ಮುಜಾಮಿಲ್ ಜೊತೆ ಸಂಪರ್ಕದಲ್ಲಿದ್ದಾರೆ.
Published On - 8:05 am, Mon, 12 October 20
Follow Us



