ಡಿಜೆ ಹಳ್ಳಿ ಗಲಭೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಸಿಸಿಬಿ ಟೆಕ್ನಿಕಲ್​ ತಂಡ

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಈಗ ಪ್ರಮುಖ ಅರೋಪಿಗಳ ಮೊಬೈಲ್​ಗಳನ್ನು ಸಿಸಿಬಿಯ ಟೆಕ್ನಿಕಲ್ ತಂಡಕ್ಕೆ ಹಸ್ತಾಂತರಿಸಲಾಗಿದೆ. ತನಿಖೆಯ ದಿಕ್ಕನೇ ಬದಾಯಿಸುವಂಥ ಸಾಕ್ಷಿಗಳು ದೊರೆಯುವ ಸಾಧ್ಯತೆಗಳಿದ್ದು, ವಶಕ್ಕೆ ಪಡೆದಿರುವ ಮೊಬೈಲ್​ನಲ್ಲಿರುವ ಡಾಟಾ ಹೊರತೆಗೆದು ಸಿಸಿಬಿಯ ತಾಂತ್ರಿಕ ತಂಡ ಪರಿಶೀಲನೆ ನಡೆಸಲಿದೆ. ಆದರೆ ಫೇಸ್​ಬುಕ್​ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಲು ನವೀನ್ ಬಳಸಿದ್ದ ವಿವೋ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ. ಹೀಗಾಗಿ, ಸಿಸಿಬಿ ತಂಡವು ನವೀನ್ ಬಳಸುತಿದ್ದ ಮೊಬೈಲ್​ನಿಂದ ಎಷ್ಟು ಗಂಟೆಗೆ ನಿರ್ದಿಷ್ಟವಾಗಿ ಪೋಸ್ಟ್ […]

ಡಿಜೆ ಹಳ್ಳಿ ಗಲಭೆ ಪ್ರಕರಣ: ತನಿಖೆ ಚುರುಕುಗೊಳಿಸಿದ ಸಿಸಿಬಿ ಟೆಕ್ನಿಕಲ್​ ತಂಡ
ಸಾಧು ಶ್ರೀನಾಥ್​ Edited By:

Updated on: Aug 12, 2020 | 7:32 PM

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಾಗಿದ್ದು, ಈಗ ಪ್ರಮುಖ ಅರೋಪಿಗಳ ಮೊಬೈಲ್​ಗಳನ್ನು ಸಿಸಿಬಿಯ ಟೆಕ್ನಿಕಲ್ ತಂಡಕ್ಕೆ ಹಸ್ತಾಂತರಿಸಲಾಗಿದೆ.

ತನಿಖೆಯ ದಿಕ್ಕನೇ ಬದಾಯಿಸುವಂಥ ಸಾಕ್ಷಿಗಳು ದೊರೆಯುವ ಸಾಧ್ಯತೆಗಳಿದ್ದು, ವಶಕ್ಕೆ ಪಡೆದಿರುವ ಮೊಬೈಲ್​ನಲ್ಲಿರುವ ಡಾಟಾ ಹೊರತೆಗೆದು ಸಿಸಿಬಿಯ ತಾಂತ್ರಿಕ ತಂಡ ಪರಿಶೀಲನೆ ನಡೆಸಲಿದೆ. ಆದರೆ ಫೇಸ್​ಬುಕ್​ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಲು ನವೀನ್ ಬಳಸಿದ್ದ ವಿವೋ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ.

ಹೀಗಾಗಿ, ಸಿಸಿಬಿ ತಂಡವು ನವೀನ್ ಬಳಸುತಿದ್ದ ಮೊಬೈಲ್​ನಿಂದ ಎಷ್ಟು ಗಂಟೆಗೆ ನಿರ್ದಿಷ್ಟವಾಗಿ ಪೋಸ್ಟ್ ಹಾಕಲಾಗಿತ್ತು ಎಂಬುದರ ಬಗ್ಗೆ ಪರಿಶೀಲನೆ ನೆಡೆಸುತ್ತಿದ್ದಾರೆ. ಸದ್ಯ ವಿವಾದಾತ್ಮಕ ಪೋಸ್ಟ್​ನ ಫೇಸ್​ಬುಕ್​ನಿಂದ ಡಿಲೀಟ್ ಮಾಡಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us