ಆರೋಗ್ಯ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್: IAS ಅಧಿಕಾರಿ ವಿರುದ್ಧ ಆರೋಪ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆರೋಗ್ಯ ಇಲಾಖೆಯ ಆಯುಕ್ತರ ಕಚೇರಿಗೆ ಡಾ.ಪ್ರಿಯಲತಾ ಹಾಗೂ ಡಾ.ಲತಾ ಪ್ರಮೀಳಾರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಇದಕ್ಕೆ ಕಿಮ್ಮಕ್ಕು ಕೊಡದ ಮಹಿಳಾ ಅಧಿಕಾರಿಗಳು ಸ್ಥಳ ಬಿಟ್ಟು ಕದಲುತ್ತಿಲ್ಲ.

ಆರೋಗ್ಯ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್: IAS ಅಧಿಕಾರಿ ವಿರುದ್ಧ ಆರೋಪ
ಡಾ.ಲತಾ ಪ್ರಮೀಳಾ ಮತ್ತು ಡಾ.ಪ್ರಿಯಲತಾ
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Dec 19, 2020 | 12:52 PM

ಬೆಂಗಳೂರು: ಅಂತರ ಇಲಾಖೆಗಳ ನಡುವೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿ 12 ದಿನ ಕಳೆದರೂ ಜಾಗ ಬಿಟ್ಟು ಕದಲದ ಲೇಡಿ ಆಫೀಸಸ್​ರ್ಗೆ ಐಎಎಸ್ ಅಧಿಕಾರಿಯ ರಕ್ಷೆಯಿದೆ ಎಂಬ ಆರೋಪ ಕೇಳಿಬಂದಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆರೋಗ್ಯ ಇಲಾಖೆಯ ಆಯುಕ್ತರ ಕಚೇರಿಗೆ ಡಾ.ಪ್ರಿಯಲತಾ ಹಾಗೂ ಡಾ.ಲತಾ ಪ್ರಮೀಳಾರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಇದಕ್ಕೆ ಕಿವಿಗೊಡದ ಮಹಿಳಾ ಅಧಿಕಾರಿಗಳು ಸ್ಥಳ ಬಿಟ್ಟು ಕದಲುತ್ತಿಲ್ಲ.

ಇವರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆ ಸರ್ಕಾರ ಎತ್ತಂಗಡಿ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇವರಿಬ್ಬರಿಗೂ ಐಎಎಸ್ ಅಧಿಕಾರಿಯಾದ ಮಂಜುಶ್ರೀ ಸಹಾಯ ನೀಡುತ್ತಿದ್ದು, ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳದೇ ಹಳೇ ಜಾಗದಲ್ಲಿ ಇದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಭ್ರಷ್ಟಾಚಾರದ ಆರೋಪ: ಡ್ರಗ್ಸ್ ಆ್ಯಂಡ್ ಲಾಜಿಸ್ಟಿಕ್ಸ್ ಇಲಾಖೆಯಲ್ಲೂ ಹೆಚ್ಚುವರಿಯಾಗಿ ಕೆಲಸ ಮಾಡಿದ ಇವರಿಬ್ಬರ ಮೇಲೆ, ಕೋವಿಡ್ ಕೇರ್ ಸೆಂಟರ್​ಗಾಗಿ ಸಾಮಾಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರದ ಆರೋಪವಿದ್ದು, ಎಸಿಬಿಯಲ್ಲಿ ದೂರು ದಾಖಲಾಗಿತ್ತು.

ವರ್ಗಾವಣೆ ಆದೇಶ

ಲಂಚ ಪಡೆದ BBMP ಹಿರಿಯ ಅರೋಗ್ಯಾಧಿಕಾರಿ ವಿ.ಆರ್. ಪ್ರವೀಣ್ ಕುಮಾರ್ ಅರೆಸ್ಟ್