ವಿಶ್ವದಲ್ಲೇ ಅತಿವೇಗದ ಕಂಪ್ಯೂಟರ್ಗಿಂತ 100 ಲಕ್ಷ ಕೋಟಿ ಪಟ್ಟು ಫಾಸ್ಟ್: ಇದು ಚೀನಾದ ಕ್ವಾಂಟಂ ಕಂಪ್ಯೂಟರ್
ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಅಮೆರಿಕ ಮತ್ತು ಚೀನಾ ಸ್ಪರ್ಧಿಸುತ್ತಿವೆ. ಈ ನಿಟ್ಟಿನಲ್ಲಿ, ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರ್ ಒಂದನ್ನು ನಿರ್ಮಿಸಿದ್ದಾರೆ. ಇದು ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ಗಿಂತ ವೇಗವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಚೀನಾ ಮಾಹಿತಿ ನೀಡಿದೆ.

ಏನಿದು ಕ್ವಾಂಟಂ ಕಂಪ್ಯೂಟರ್? ಅಂದ ಹಾಗೆ, ಚೀನಾದ ಈ ಕ್ವಾಂಟಂ ಕಂಪ್ಯೂಟರ್ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ಗಿಂತ ಸುಮಾರು 100 ಟ್ರಿಲಿಯನ್ (100 ಲಕ್ಷ ಕೋಟಿ) ಪಟ್ಟು ಅಧಿಕ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ . ವಿಶ್ವದ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಆಗಿರುವ ಜಪಾನ್ನ ಫುಗಾಕುಗಿಂತ 100 ಟ್ರಿಲಿಯನ್ ಪಟ್ಟು ವೇಗದಲ್ಲಿದೆ.
ಚೀನಾದ ವಿಜ್ಞಾನಿಗಳು ಕ್ವಾಂಟಂ ಕಂಪ್ಯೂಟರನ್ನು ನಾವೇ ನಿರ್ಮಿಸಿದ್ದೇವೆಂದು ಬೀಗುತ್ತಿದ್ದಾರೆ. ಈ ಮೂಲಕ ಚೀನಾ, ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಸ್ಪರ್ಧಿಸುತ್ತಿದೆ.
ಕ್ವಾಂಟಂ ಪ್ರಚಾರದಲ್ಲಿದೆಯೆ? ಕ್ವಾಂಟಂ ಕಂಪ್ಯೂಟರ್ ತಂತ್ರಜ್ಞಾನ ಇತ್ತೀಚೆಗೆ ಸುದ್ದಿಯಲ್ಲಿದೆ. ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಯ ಭಾಗವಾಗಿ ಬೇಕಾಗುವ ಗಣಿತ ಮತ್ತು ಇತರ ಕಾರ್ಯಗಳಿಗೆ ಕ್ವಾಂಟಂ ಕಂಪ್ಯೂಟರ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸದ್ಯ, ಅಮೆರಿಕದ ಡಿಜಿಟಲ್ ದಿಗ್ಗಜ ಗೂಗಲ್ನ ಸೈಕಮೋರ್ ಡಿವೈಸ್ ಮಾತ್ರ ಇಲ್ಲಿಯವರೆಗೆ ಕ್ವಾಂಟಾಂ ತಂತ್ರಜ್ಞಾನವನ್ನು ಹೊಂದಿದೆ.
ಅಂದ ಹಾಗೆ, ಈ ಸೈಕಮೋರ್ ಡಿವೈಸ್ ಸೂಪರ್ ಕಂಡಕ್ಟಿಂಗ್ (ಅತಿವಾಹಕ) ವಸ್ತುಗಳಿಂದ ತಯಾರಿಸಲಾಗಿದೆ. ಆದರೆ, ಇತ್ತ ಚೀನಾ, ಫೋಟಾನ್ ಆಧಾರಿತ ಕ್ವಾಂಟಂ ಕಂಪ್ಯೂಟರ್ಗಳನ್ನು ಅಳವಡಿಸಿಕೊಂಡಿದೆ. ಬೋಸಾನ್ ಸ್ಯಾಂಪಲಿಂಗ್ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಗಿದೆ.