ಅರ್ಧ ತಲೆನೋವು ಬರೋದೇಕೆ? ಇದಕ್ಕೆ ಮನೆ ಮದ್ದುಗಳೇನು?

| Updated By: ಆಯೇಷಾ ಬಾನು

Updated on: Mar 19, 2021 | 6:31 AM

ಸಾಮಾನ್ಯ ತೆಲನೋವಿಗಿಂತಲೂ ಅರ್ಧ ತಲೆನೋವು ಹೆಚ್ಚು ಕಿರಿಕಿರಿ ಉಂಟು ಮಾಡುತ್ತದೆ. ಇದು ಏಕೆ ಬರುತ್ತದೆ? ಇದಕ್ಕೆ ಪರಿಹಾರಗಳೇನು ಎಂಬುದಕ್ಕೆ ಇಲ್ಲಿದೆ ಉತ್ತರ.

ಅರ್ಧ ತಲೆನೋವು ಬರೋದೇಕೆ? ಇದಕ್ಕೆ ಮನೆ ಮದ್ದುಗಳೇನು?
ಸಾಂದರ್ಭಿಕ ಚಿತ್ರ
Follow us on

ಅನೇಕರಿಗೆ ಅರ್ಧ ತಲೆನೋವು ಕಾಣಿಸಿಕೊಳ್ಳುತ್ತದೆ. ಅಂದರೆ, ಒಂದು ಭಾಗದಲ್ಲಿ ಮಾತ್ರ ತಲೆನೋವು ಬರುತ್ತದೆ. ಸಾಮಾನ್ಯ ತೆಲನೋವಿಗಿಂತಲೂ ಇದು ಹೆಚ್ಚು ಕಿರಿಕಿರಿ ಉಂಟು ಮಾಡುತ್ತದೆ. ಇದು ಏಕೆ ಬರುತ್ತದೆ? ಇದಕ್ಕೆ ಪರಿಹಾರಗಳೇನು ಎಂದು ಅನೇಕರಿಗೆ ಗೊತ್ತಿರುವುದೇ ಇಲ್ಲ. ಹಾಗಾದರೆ, ಅರ್ಧ ತಲೆನೋವು ಬರೋದೇಕೆ? ಇದಕ್ಕೆ ಪರಿಹಾರಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಲಕ್ಷಣಗಳು..
ಅರ್ಧ ತಲೆನೋವು ಅತ್ಯಂತ ನೋವಿನಿಂದ ಕೂಡಿರುತ್ತದೆ ಮತ್ತು ತಲೆಯ ಒಂದು ಬದಿಯಲ್ಲಿ ಮಾತ್ರ ನೋವು ಬರುತ್ತದೆ. ಇದು ಸಾಕಷ್ಟು ಕಿರಿಕಿರಿ ಕೂಡ ಹೌದು. ನಿಮ್ಮ ಒಂದು ಕಣ್ಣಿನ ಹಿಂದೆ ನೋವು ಅಥವಾ ಹಣೆಯ ಒಂದು ಬದಿಗೆ ನೋವು ಕಾಣಿಸಿಕೊಳ್ಳುತ್ತದೆ. ತಲೆನೋವು ಕಾಣಿಸಿಕೊಂಡ 5-10 ನಿಮಿಷಗಳ ನಂತರ ನೋವು ತೀವ್ರವಾಗುತ್ತದೆ. ತೀವ್ರ ನೋವು 30-60 ನಿಮಿಷಗಳವರೆಗೂ ಇರುತ್ತದೆ. ಕೆಲವೊಮ್ಮೆ ತೀವ್ರವಾದ ನೋವು 3 ಗಂಟೆಗಳವರೆಗೆ ಮುಂದುವರಿಯಬಹುದು.

ಕಾರಣಗಳೇನು?
ಅರ್ಧ ತಲೆನೋವಿನ ಮೂಲ ಕಾರಣ ಹೊಟ್ಟೆ. ಅರ್ಧ ತಲೆನೋವು ಜಾಸ್ತಿ ಬರಲು ಹೊಟ್ಟೆಯಲ್ಲಿರುವ ಆಮ್ಲಗಳೇ ಮೂಲ ಕಾರಣ. ಆ್ಯಸಿಡಿಟಿ ಹೆಚ್ಚಿದ್ದಾಗ ತಲೆನೋವು ಜಾಸ್ತಿ ಆಗುತ್ತದೆ. ಕಡಿಮೆ ನಿದ್ದೆ ಮಾಡುವುದು ಅಥವಾ ಅತಿಯಾಗಿ ನಿದ್ದೆ ಮಾಡುವುದು ಕೂಡ ಅರ್ಧ ತಲೆನೋವಿಗೆ ಕಾರಣವಾಗಬಹುದು. ಅತಿಯಾಗಿ ಬಿಸಿಲಿನಲ್ಲಿ ಸುತ್ತಾಟ ಮಾಡಿದರೂ ಅರ್ಧ ತಲೆನೋವು ಕಾಣಿಸಿಕೊಳ್ಳುತ್ತದೆ. ಇದರ ಜತೆಗೆ ದೊಡ್ಡ ಪ್ರಮಾಣದ ಶಬ್ದ, ಘಾಟು ವಾಸನೆ ಅರ್ಧ ತಲೆನೋವನ್ನು ತರಬಹುದು.

ಪರಿಹಾರಗಳೇನು?
ಹೊಟ್ಟ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡರೆ ನಿಮ್ಮ ಬಹುತೇಕ ಸಮಸ್ಯೆ ಕಡಿಮೆ ಆದಂತೆ. ಅಂದರೆ, ಹೊಟ್ಟೆಯಲ್ಲಿ ಪಿತ್ತ ಕಡಿಮೆ ಆದರೆ, ತಲೆನೋವು ಕಡಿಮೆ ಆಗುತ್ತದೆ. ಹೊಟ್ಟೆಯಲ್ಲಿ ಪಿತ್ತ ಕಡಿಮೆ ಆಗಲು ಬೆಳಗ್ಗೆ ಎದ್ದು ನಿತ್ಯ ಬಿಸಿನೀರು ಕುಡಿಯಿರಿ. ಆಗಲೂ ಕಡಿಮೆ ಆಗಿಲ್ಲ ಎಂದರೆ, ಬಿಳಿ ಈರುಳ್ಳಿ ಮತ್ತು ಜೀರಿಗೆಯನ್ನು ತೆಗೆದುಕೊಳ್ಳಿ. ಮೊದಲು ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಈರುಳ್ಳಿಯನ್ನು ಕಟ್​ ಮಾಡಿ ಅದನ್ನು ಕುಟ್ಟಿ ರಸ ತೆಗೆದುಕೊಳ್ಳಿ. ಈ ರಸವನ್ನು ಮೂಗಿಗೆ ಬಿಟ್ಟುಕೊಳ್ಳಿ. ಇದರಿಂದ ಶೀಘ್ರ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಹಳದಿಗಟ್ಟಿದ ಹಲ್ಲನ್ನು ಬೆಳ್ಳಗೆ ಮಾಡಲು ಇಲ್ಲಿದೆ ಮನೆ ಮದ್ದು..