AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರಕ್ಕೆ ಶನಿವಾರ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ, ಈಶಾ ಫೌಂಡೇಷನ್ ನಾಗವಿಗ್ರಹ ಪ್ರತಿಷ್ಠಾಪನೆ

ನಾಗವಿಗ್ರಹ ಉದ್ಘಾಟನೆಗೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ, ಕೆಲ ಸಚಿವರುಗಳು, ದೇಶ ವಿದೇಶದಲ್ಲಿರುವ ಜಗ್ಗಿ ವಾಸುದೇವನ್ ರವರ ಅನುಯಾಯಿಗಳು ಆಗಮಿಸುತ್ತಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಲರ್ಟ್ ಆಗಿದೆ.

ಚಿಕ್ಕಬಳ್ಳಾಪುರಕ್ಕೆ ಶನಿವಾರ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ, ಈಶಾ ಫೌಂಡೇಷನ್ ನಾಗವಿಗ್ರಹ ಪ್ರತಿಷ್ಠಾಪನೆ
ಚಿಕ್ಕಬಳ್ಳಾಪುರಕ್ಕೆ ಶನಿವಾರ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ, ಈಶಾ ಫೌಂಡೇಷನ್ ನಾಗವಿಗ್ರಹ ಪ್ರತಿಷ್ಠಾಪನೆ
TV9 Web
| Updated By: ಸಾಧು ಶ್ರೀನಾಥ್​|

Updated on: Oct 07, 2022 | 7:23 PM

Share

ತಮಿಳುನಾಡಿನ ಕೊಯಮತ್ತೂರು ಬಳಿ ಈಶಾ ಫೌಂಡೇಷನ್ ನ ಬೃಹತ್ ಆಶ್ರಮ ನಿರ್ಮಾಣ ಮಾಡಿ, ಆಶ್ರಮದಲ್ಲಿ ಆದಿಯೋಗಿ ಪರಶಿವನ ಮೂರ್ತಿ ಪ್ರತಿಮೆ ನಿರ್ಮಾಣ ಮಾಡಿದಂತೆ.. ಚಿಕ್ಕಬಳ್ಳಾಪುರದ ಬಳಿಯೂ ಆಶ್ರಮ ನಿರ್ಮಾಣ ಮಾಡಿ 112 ಅಡಿಗಳ ಶಿವನಮೂರ್ತಿ ವಿಗ್ರಹ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿರುವ ಈಶಾ ಫೌಂಡೇಷನ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಯೋಗ ಗುರು ಜಗ್ಗಿ ವಾಸುದೇವನ್ (Sadhguru Jaggi Vasudev), ನಾಗ ವಿಗ್ರಹ ಪ್ರತಿಷ್ಠಾಪನೆ ಮಾಡಲಿದ್ದು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ನಿರ್ಮಾಣ ಹಂತದ ಆಶ್ರಮಕ್ಕೆ ಭೇಟಿ ನೀಡಿ ನಾಳೆ ಅಕ್ಟೋಬರ್ 8ರಂದು ಸಂಜೆ 6 ಗಂಟೆಗೆ ನಾಗವಿಗ್ರಹ (Isha Foundation Naga Pratishtapana) ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಒಂದು ವರದಿ.

ಈಶಾ ಫೌಂಡೇಷನ್ ಸಂಸ್ಥಾಪಕ, ಆಧ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವನ್, ತಮಿಳುನಾಡಿನಂತೆ ತವರು ರಾಜ್ಯ ಕರ್ನಾಟಕದಲ್ಲೂ… ಬೃಹತ್ ಯೋಗ ಕೇಂದ್ರ ತೆರೆದು ಅದರಲ್ಲಿ 112 ಅಡಿಗಳ ಶಿವನ ವಿಗ್ರಹ ಪ್ರತಿಷ್ಠಾಪನೆಗೆ ಯೋಜನೆ ರೂಪಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಜಾಲಾರಿ ನರಸಿಂಹಸ್ವಾಮಿ ಕ್ಷೇತ್ರದ ಬಳಿ ಅಲವಗುರ್ಕಿ ಗ್ರಾಮದ ಸರ್ವೆ ನಂಬರ್ ನಲ್ಲಿ ಇನ್ನೂರು ಎಕರೆ ಖಾಸಗಿ ಭೂಮಿ ಖರೀದಿ ಮಾಡಿದ್ದು, ಆಶ್ರಮ ನಿರ್ಮಾಣ ಕಾಮಗಾರಿ ಜೋರಾಗಿ ಸಾಗಿದೆ.

ಮೊದಲ ಹೆಜ್ಜೆಯಾಗಿ ಅಕ್ಟೋಬರ್ 8 ಸಂಜೆ ಆರು ಗಂಟೆಗೆ ಸ್ವತಃ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಖಾತೆ ಸಚಿವ ಡಾ. ಕೆ. ಸುಧಾಕರ್ (Dr K Sudhakar) ಆಶ್ರಮಕ್ಕೆ ಆಗಮಿಸಿ, ಬೃಹತ್ ನಾಗವಿಗ್ರಹ ಉದ್ಘಾಟನೆ ಮಾಡಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ತಿಳಿಸಿದ್ದಾರೆ.

ನಾಗವಿಗ್ರಹ ಉದ್ಘಾಟನೆಗೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ, ಕೆಲ ಸಚಿವರುಗಳು, ದೇಶ ವಿದೇಶದಲ್ಲಿರುವ ಜಗ್ಗಿ ವಾಸುದೇವನ್ ರವರ ಅನುಯಾಯಿಗಳು ಆಗಮಿಸುತ್ತಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಲರ್ಟ್ ಆಗಿದೆ. ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಎಸ್​ ಪಿ ಡಿ.ಎಲ್. ನಾಗೇಶ, ಎ.ಸಿ. ಡಾ. ಸಂತೋಷ ಕುಮಾರ್ ಸೇರಿದಂತೆ ಇತರೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರ್ಮಾಣ ಹಂತದ ಆಶ್ರಮ ಕಾಮಗಾರಿ ಸ್ಥಳದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ದೇಶ ವಿದೇಶಗಳಿಂದ ಜಗ್ಗಿ ವಾಸುದೇವನ್ ರವರ ಅನುಯಾಯಿಗಳು ಆಗಮಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ನಿರ್ಮಾಣ ಹಂತದ ಆಶ್ರಮದಲ್ಲಿ 112 ಅಡಿಗಳ ಶಿವನ ವಿಗ್ರಹ ಕಾಮಗಾರಿ ನಡೆಯುತ್ತಿರುವ ಕಾರಣ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ -ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?