ಕಾಲೇಜ್ಗೆ ಬರೋ ಬದಲು.. ಬಾರ್‌ನಲ್ಲಿ ಪಾರ್ಟಿ ಮಾಡ್ತಿದ್ದ ವಿದ್ಯಾರ್ಥಿಗಳಿಗೆ ಸಿಕ್ತು ಪ್ರಾಂಶುಪಾಲರಿಂದ ಸ್ಪೆಷಲ್ ಕ್ಲಾಸ್!
ವಿದ್ಯಾರ್ಥಿಗಳು ಬೆಳಗ್ಗೆ 10 ಗಂಟೆಗೆ ಬಾರ್‌ನಲ್ಲಿ ಕೂತು ಜಾಲಿ ಮಾಡ್ತಿದ್ದರು. ಈ ವೇಳೆ, ಪ್ರಾಂಶುಪಾಲರಾದ ಫಾದರ್ ದಾಳಿ ನಡೆಸಿ ನಾಲ್ವರು ಪದವಿ ವಿದ್ಯಾರ್ಥಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.
ಕೊಡಗು: ಕಾಲೇಜಿಗೆ ಹಾಜರಾಗುವ ಬದಲು ಬಾರ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದ ವಿದ್ಯಾರ್ಥಿಗಳು ಸಿಕ್ಕಿಬಿದ್ದ ಘಟನೆ ಜಿಲ್ಲೆಯ ವಿರಾಜಪೇಟೆಯಲ್ಲಿ ವರದಿಯಾಗಿದೆ. ಗುಂಡು ತುಂಡು ಅಂತಾ ಮೋಜು ಮಸ್ತಿ ಮಾಡ್ತಿದ್ದ ಪಟ್ಟಣದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕೈಗೆ ಸಿಕ್ಕಿಬಿದ್ದರು.
ಹುಡುಗರು ಮದ್ಯಪಾನ ಮಾಡುತ್ತಿದ್ದನ್ನ ನೋಡಿ ಸಿಟ್ಟಿಗೆದ್ದ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡರು. ಜೊತೆಗೆ, ಅವರ ಪೋಷಕರನ್ನು ಕರೆಸಿ ವಾರ್ನಿಂಗ್ ಸಹ ನೀಡಿದರು.
ಅಂದ ಹಾಗೆ, ವಿದ್ಯಾರ್ಥಿಗಳು ಬೆಳಗ್ಗೆ 10 ಗಂಟೆಗೆ ಬಾರ್‌ನಲ್ಲಿ ಕೂತು ಜಾಲಿ ಮಾಡ್ತಿದ್ದರು. ಈ ವೇಳೆ, ಪ್ರಾಂಶುಪಾಲರಾದ ಫಾದರ್ ದಾಳಿ ನಡೆಸಿ ನಾಲ್ವರು ಪದವಿ ವಿದ್ಯಾರ್ಥಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದರು.