5 ರೂ. ಚಿಲ್ಲರೆಗಾಗಿ ನಡುರಸ್ತೆಯಲ್ಲಿ ಬಡಿದಾಡಿಕೊಂಡ ಪ್ರಯಾಣಿಕ-ಕಂಡಕ್ಟರ್; ವಿಡಿಯೋ ವೈರಲ್ ಮಾಡಿದ ಸ್ಥಳೀಯರು
ಚಿಲ್ಲರೆಗಾಗಿ ನಡುರಸ್ತೆಯಲ್ಲಿ ಇವರಿಬ್ಬರೂ ಹೊಡೆದಾಟ ಮಾಡಿಕೊಂಡಿದ್ದನ್ನು ಸ್ಥಳೀಯ ಮಂದಿ ನಿಂತು ನೋಡಿದ್ದಾರೆ. ಅಷ್ಟೇ ಏನು ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ನಂತರ ಅಲ್ಲಿದ್ದ ಬಸ್ ಡ್ರೈವರ್ ಮತ್ತಿತರರು ಬಂದು ಗಲಾಟೆಯನ್ನು ಬಿಡಿಸಿದ್ದಾರೆ.

ಕೋಲಾರ: ಚಿಲ್ಲರೆ ಹಣಕ್ಕಾಗಿ ಬಸ್ನಲ್ಲಿ ಕಂಡಕ್ಟರ್ ಜತೆ ಜಗಳ ಆಗುವುದು ತೀರ ಸಾಮಾನ್ಯ. ಆದರೆ ಇಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕನ ನಡುವೆ ಮಾರಾಮಾರಿಯೇ ನಡೆದು ಹೋಗಿದೆ.. ಚಿಲ್ಲರೆಗಾಗಿ ಇವರಿಬ್ಬರೂ ಹೊಡೆದಾಟ ಮಾಡಿಕೊಂಡಿದ್ದನ್ನು ಸ್ಥಳೀಯ ಮಂದಿ ನಿಂತು ನೋಡಿದ್ದಾರೆ.. ಅಷ್ಟೇ ಏನು ಮೊಬೈಲ್ನಲ್ಲೂ ದೃಶ್ಯ ಸೆರೆಯಾಗಿ, ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಮುಳಬಾಗಿಲು ಪಟ್ಟಣದ ಹಳೇ ಕೋರ್ಟ್ ಸರ್ಕಲ್ ಬಳಿ ಘಟನೆ ನಡೆದಿದೆ. ಈ ಪ್ರಯಾಣಿಕನ ಟಿಕೆಟ್ ಹಿಂದೆ 5 ರೂ. ಚಿಲ್ಲರೆ ಎಂದು ಕಂಡಕ್ಟರ್ ಬರೆದುಕೊಟ್ಟಿದ್ದ. ಆದರೆ ನಂತರ ಕೇಳಿದಾಗ ಚಿಲ್ಲರೆ ಇಲ್ಲ ಎಂದು ಹೇಳಿದ್ದ. ಇದರಿಂದ ಸಿಟ್ಟಾದ ಪ್ರಯಾಣಿಕ ಸಹಜವಾಗಿಯೇ ಜಗಳ ತೆಗೆದ. ಆದರೆ ಇವರಿಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದೆ.
ಬಸ್ನಿಂದ ಇಳಿದು, ನಡುರಸ್ತೆಯಲ್ಲಿ ಪರಸ್ಪರ ಬಡಿದಾಡಿದ್ದಾರೆ. ಸ್ಥಳದಲ್ಲಿದ್ದವರು ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಅಲ್ಲಿದ್ದ ಬಸ್ ಡ್ರೈವರ್ ಮತ್ತಿತರರು ಬಂದು ಗಲಾಟೆಯನ್ನು ಬಿಡಿಸಿದ್ದಾರೆ. ಆದರೂ ಕೆಲವು ಹೊತ್ತು ಇವರಿಬ್ಬರೂ ಪರಸ್ಪರ ಬೈದಾಡಿಕೊಂಡು ಅಲ್ಲಿಯೇ ನಿಂತಿದ್ದರು.
Published On - 2:04 pm, Sat, 28 November 20