ನನ್ನ ವಿರುದ್ಧ ಅನಾಮಧೇಯರು ಸುಳ್ಳಿನ ಕಂತೆ ಪುಸ್ತಕ ಬರೆಯುತ್ತಾರೆ, ಬಿಬಿಸಿಯ ಸಾಕ್ಷ್ಯಚಿತ್ರ ವಿರೋಧಿಸುವ ಯಾವ ನೈತಿಕತೆ ಇದೆ? ಬಿಜೆಪಿಗೆ ಸಿದ್ದು ಗುದ್ದು
ನನ್ನ ವಿರುದ್ಧ ಅನಾಮಧೇಯರು ಸುಳ್ಳಿನ ಕಂತೆ ಪುಸ್ತಕ ಬರೆಯುತ್ತಾರೆ. ಆದ್ರೆ, ಬಿಬಿಸಿಯ ಸಾಕ್ಷ್ಯಚಿತ್ರ ವಿರೋಧಿಸುವ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿಯ ಸಾಕ್ಷ್ಯಚಿತ್ರ (bbc documentary) ಪ್ರಸಾರ ಮಾಡದಂತೆ ನಿರ್ಬಂಧ ಹೇರಲಾಗಿದೆ. ಆದರೂ ವಿಪಕ್ಷಗಳು ಕೆಲವೆಡೆ ಬಿಬಿಸಿಯ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ. ಅಲ್ಲದೇ ಈ ಬಗ್ಗೆ ಪರ-ವಿರೋಧಗಳು ಸಹ ನಡೆಯುತ್ತಿವೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ನನ್ನ ವಿರುದ್ಧ ಅನಾಮಧೇಯರು ಸುಳ್ಳಿನ ಕಂತೆ ಪುಸ್ತಕ ಬರೆಯುತ್ತಾರೆ. ವಿಶ್ವಾಸಾರ್ಹ ಬಿಬಿಸಿ ಸಂಸ್ಥೆಯನ್ನ ವಿರೋಧಿಸುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನನ್ನ ವಿರುದ್ಧ ಅನಾಮಧೇಯರು ಸುಳ್ಳಿನ ಕಂತೆ ಪುಸ್ತಕ ಬರೆಯುತ್ತಾರೆ. ಪುಸ್ತಕ ಬಿಡುಗಡೆಗೊಳಿಸಲು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಸಮಾರಂಭ. ಇಂತಹ ಕುಚೇಷ್ಟೆ-ಕುಚೋದ್ಯಗಳನ್ನು ಬೆಂಬಲಿಸುವ ಬಿಜೆಪಿ ನಾಯಕರಿಗೆ ವಿಶ್ವಾಸಾರ್ಹ ಬಿಬಿಸಿ ಸಂಸ್ಥೆಯನ್ನ ವಿರೋಧಿಸುವ ಯಾವ ನೈತಿಕತೆ ಇದೆ? 8 ವರ್ಷಗಳಿಂದ ನನ್ನ ವಿರುದ್ಧ ಸುಳ್ಳಿನ ಕಂತೆಗಳ ಅಪಪ್ರಚಾರ ಮಾಡಿದ್ದಾರೆ. ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡಿದ್ದಾರೆ. ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮಾಡುವ ಅಪಮಾನವಲ್ಲವೇ? ಎಂದು ಕಿಡಿಕಾರಿದ್ದಾರೆ.
ಪ್ರಧಾನಿ @narendramodi ಯವರ ಕುರಿತು ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದೇ ರೀತಿ ಪ್ರತಿಪಕ್ಷದ ನಾಯಕರ ಚಾರಿತ್ರ್ಯಹನನ ಮಾಡದಂತೆಯೂ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕಲ್ಲವೇ? 2/4#BBC
— Siddaramaiah (@siddaramaiah) January 27, 2023
ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಸಾಕ್ಷ್ಯಚಿತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕರು ಹೇಳುತ್ತಿದ್ದಾರೆ. ಇದೇ ಬಿಜೆಪಿ ನಾಯಕರು ದೇಶಾದ್ಯಂತ ವಿಪಕ್ಷನಾಯಕರನ್ನು ಟೀಕಿಸಿದ್ದರು. ಪ್ರತಿಪಕ್ಷ ನಾಯಕರನ್ನು ಟೀಕಿಸಿದಾಗ ದೇಶದ ಗೌರವಕ್ಕೆ ಧಕ್ಕೆ ಆಗಲ್ಲವೇ? ಎಂದು ಟ್ವೀಟ್ ಮಾಡಿ ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ @BJP4India ನಾಯಕರು ನನ್ನ ವಿರುದ್ಧ ಸುಳ್ಳಿನ ಕಂತೆಗಳ ಅಪಪ್ರಚಾರ ಮಾಡಿದ್ದಾರೆ, ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ, ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ? 3/4#BBC
— Siddaramaiah (@siddaramaiah) January 27, 2023
ಇದನ್ನೂ ಓದಿ: ಸಿದ್ದರಾಮಯ್ಯ ಪುಸ್ತಕ ಬರೀ ಸುಳ್ಳಿನ ಕಂತೆ ಎಂದು ಅಂಕಿಅಂಶ ಮುಂದಿಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ನನ್ನ ವಿರುದ್ಧ ಯಾರೋ ಅನಾಮಧೇಯರು ಸುಳ್ಳಿನ ಕಂತೆಗಳ ಪುಸ್ತಕ ಬರೆಯುತ್ತಾರೆ, ಆ ಪುಸ್ತಕವನ್ನು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲು ಸಮಾರಂಭ ಆಯೋಜಿಸುತ್ತಾರೆ. ಇಂತಹ ಕುಚೇಷ್ಠೆ-ಕುಚೋದ್ಯಗಳನ್ನು ಬೆಂಬಲಿಸುವವರಿಗೆ ವಿಶ್ವಾಸಾರ್ಹ ಹಿನ್ನೆಲೆಯ ಬಿಬಿಸಿ ಮಾಧ್ಯಮ ಸಂಸ್ಥೆಯನ್ನು ವಿರೋಧಿಸುವ ಯಾವ ನೈತಿಕತೆ ಇದೆ @BJP4India? 4/4#BBC
— Siddaramaiah (@siddaramaiah) January 27, 2023
ಕೆಲ ದಿನಗಳ ಹಿಂದೆಯಷ್ಟೇ ಟಿಪ್ಪು ನಿಜ ಕನಸು ಎಂಬ ಪುಸ್ತಕ (Tipu Nija kanasugalu book) ಹಾಗೂ ನಾಟಕ ಬಿಡುಗಡೆಯಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದರ ಮಧ್ಯೆ ಇದೀಗ ಸಿದ್ದರಾಮಯ್ಯರನ್ನೇ ಗುರಿಯಾಗಿಸಿ ‘ಸಿದ್ದು ನಿಜ ಕನಸು’ ಎನ್ನುವ ಪುಸ್ತಕ (Siddu Nija Kanasugalu Book) ಬಿಡುಗಡೆಗೆ ಬಿಜೆಪಿ ಮುಂದಾಗಿತ್ತು. ಆದ್ರೆ, ಇದಕ್ಕೆ ಕೋರ್ಟ್ ತಡೆ ನೀಡಿದೆ.