ಬಿಜೆಪಿ ನಾಯಕರಿಗೂ ಈ ಆರೋಪಿಗಳಿಗೂ ಏನು ಸಂಬಂಧ? ಟ್ವಿಟರ್ ಸಮರದಲ್ಲಿ ಕಾಂಗ್ರೆಸ್ ಪ್ರಶ್ನೆ
ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿ, ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ತೇಜಸ್ವಿ ಸೂರ್ಯ ಅವರಿಗೂ ಡ್ರಗ್ ಡೀಲರ್‌ಗೂ ಏನು ಸಂಬಂಧ? ಪ್ರತಾಪ್ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ ಲಕ್ಷ್ಮಣ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? - ಕಾಂಗ್ರೆಸ್ ಟ್ವೀಟ್
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಸಂಬಂಧ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಜಟಾಪಟಿ ಜೋರಾಗಿದ್ದು, ಇದೀಗ ಎರಡೂ ಪಕ್ಷಗಳು ಟ್ವಿಟರ್ ವಾರ್ ಶುರುಹಚ್ಚಿಕೊಂಡಿವೆ. ಅಶ್ಲೀಲ ಸಿಡಿ ಹಿಂದೆ ಇರುವುದು ಮಹಾನಾಯಕರೋ, ಮಹಾನಾಯಕಿಯೋ ಎಂದು ಡಿ.ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರತ್ತ ಬೊಟ್ಟು ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ಕೂಡ ತಿರುಗೇಟು ನೀಡುತ್ತಾ ಬಂದಿದೆ. ಇಂದು ಬೆಳಗ್ಗೆ ಸಿಡಿ ಮಾಸ್ಟರ್ ಮೈಂಡ್ ಎನ್ನಲಾದ ನರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಲ್ಲಿರುವ ಫೋಟೋ ಒಂದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದ ಬಿಜೆಪಿ, ಇವರಿಬ್ಬರಿಗೂ ಏನು ಸಂಬಂಧ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿತ್ತು. ಅದಕ್ಕೀಗ ತಿರುಗೇಟು ನೀಡಿರುವ ಕಾಂಗ್ರೆಸ್ ಬಿಜೆಪಿಯ ನಾಯಕರು ಕೆಲ ಆರೋಪಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟ್ ಮಾಡಿದೆ.
ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ ಬಿಜೆಪಿ, ದೇಶದ್ರೋಹಿ ಹಾಗೂ ಅತ್ಯಾಚಾರಿಯೊಂದಿಗೆ ನರೇಂದ್ರ ಮೋದಿ ಅವರಿಗೆ ಏನು ಸಂಬಂಧ? ತೇಜಸ್ವಿ ಸೂರ್ಯ ಅವರಿಗೂ ಡ್ರಗ್ ಡೀಲರ್‌ಗೂ ಏನು ಸಂಬಂಧ? ಪ್ರತಾಪ್ ಸಿಂಹ ಹಾಗೂ ಈ ಆರೋಪಿಗೂ ಏನು ಸಂಬಂಧ ಲಕ್ಷ್ಮಣ ಸವದಿ ಹಾಗೂ ಯುವರಾಜನಿಗೂ ಏನು ಸಂಬಂಧ? ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? ಎಂಬ ತಲೆಬರಹದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಲಕ್ಷ್ಮಣ ಸವದಿ ಅವರು ಕೆಲ ಆರೋಪಿಗಳೊಂದಿಗೆ ನಿಂತಿರುವ ಫೋಟೋಗಳನ್ನು ಹಂಚಿಕೊಂಡಿದೆ.
ಹೆಣ್ಣು ಮಕ್ಕಳ ದುರ್ಬಳಕೆಯನ್ನು ಸಮರ್ಥಿಸುತ್ತಿರುವ @BJP4Karnataka
ದೇಶದ್ರೋಹಿ & ಅತ್ಯಾಚಾರಿಯೊಂದಿಗೆ @narendramodi ಅವರಿಗೆ ಏನು ಸಂಬಂಧ?@Tejasvi_Surya ಡ್ರಗ್ ಡೀಲರ್‌ಗೂ ಏನು ಸಂಬಂಧ?@mepratap ಹಾಗೂ ಈ ಆರೋಪಿಗೂ ಏನು ಸಂಬಂಧ?@LaxmanSavadi & ಯುವರಾಜನಿಗೂ ಏನು ಸಂಬಂಧ?
ಹೆಗಲು ಮುಟ್ಟಿಕೊಂಡು ತಡೆಯಾಜ್ಞೆ ತಂದಿದ್ಯಾರು? https://t.co/OjOlKk4kHu pic.twitter.com/70voo4asIF
— Karnataka Congress (@INCKarnataka) March 17, 2021
ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕಿತ್ತಾಟ ತಾರಕಕ್ಕೇರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಚಾರಗಳನ್ನೆಲ್ಲಾ ಮುನ್ನೆಲೆಗೆ ತಂದು ಎರಡೂ ಪಕ್ಷದವರು ಕಿತ್ತಾಡುತ್ತಿದ್ದಾರೆ. ಸದ್ಯ ಈ ಜಗಳ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆ ಎನ್ನುವುದು ಗೊತ್ತಿಲ್ಲವಾದರೂ, ಎರಡೂ ಪಕ್ಷದ ಒಂದಷ್ಟು ನಾಯಕರುಗಳ ಮೇಲೆ ಆರೋಪಗಳ ಸುರಿಮಳೆ ಆಗುವುದಂತೂ ಬಹುತೇಕ ನಿಶ್ಚಿತ ಎನ್ನುವಂತೆ ತೋರುತ್ತಿದೆ.
ಇದನ್ನೂ ಓದಿ: ಸಿಡಿ ಷಡ್ಯಂತ್ರದ ‘ಮಹಾನಾಯಕ’ ಡಿ.ಕೆ.ಶಿವಕುಮಾರ್ ಎಂಬ ಅನುಮಾನದಲ್ಲಿ ಬಿಜೆಪಿ
ಟ್ವೀಟ್ ಮಾಡಿ.. ಸಿಡಿ ವಿಚಾರದಲ್ಲಿ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ! ಯಾರದು?