ಆಹಾರ ಸಾಮಗ್ರಿ, ದನಕರುಗಳಿಗೆ ಮೇವು ನೀಡಿ: ಕಂಟೈನ್ಮೆಂಟ್ ಜೋನ್ ನಿವಾಸಿಗಳ ಅಳಲು
ಹಾವೇರಿ: ಆಹಾರ ಸಾಮಗ್ರಿ ಮತ್ತು ದನಕರುಗಳಿಗೆ ಮೇವು ನೀಡಲು ಆಗ್ರಹಿಸಿ ಕಂಟೈನ್ಮೆಂಟ್ ಜೋನ್ ನಿವಾಸಿಗಳು ಧರಣಿ ನಡೆಸಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲದ ಬಳಿ ನಡೆದಿದೆ. ಜೂನ್ 5ರಂದು ಪಟ್ಟಣದ ಕಲಾಲ್ ಪ್ಲಾಟ್ನ ಇಪ್ಪತ್ತೇಳು ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿತ್ತು. ಸೀಲ್ಡೌನ್ ಮಾಡಿ ಒಂದು ವಾರ ಕಳೆದ್ರೂ ಅಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ. ಹೀಗಾಗಿ ಊಟ, ನೀರಿಗಾಗಿ ಜನ ಪರದಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು […]
ಹಾವೇರಿ: ಆಹಾರ ಸಾಮಗ್ರಿ ಮತ್ತು ದನಕರುಗಳಿಗೆ ಮೇವು ನೀಡಲು ಆಗ್ರಹಿಸಿ ಕಂಟೈನ್ಮೆಂಟ್ ಜೋನ್ ನಿವಾಸಿಗಳು ಧರಣಿ ನಡೆಸಿರುವ ಘಟನೆ ಹಾವೇರಿ ತಾಲೂಕಿನ ಗುತ್ತಲದ ಬಳಿ ನಡೆದಿದೆ.
ಜೂನ್ 5ರಂದು ಪಟ್ಟಣದ ಕಲಾಲ್ ಪ್ಲಾಟ್ನ ಇಪ್ಪತ್ತೇಳು ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ನಂತರ ಸೋಂಕಿತೆ ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿತ್ತು. ಸೀಲ್ಡೌನ್ ಮಾಡಿ ಒಂದು ವಾರ ಕಳೆದ್ರೂ ಅಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಸಿಕ್ಕಿಲ್ಲ.
ಹೀಗಾಗಿ ಊಟ, ನೀರಿಗಾಗಿ ಜನ ಪರದಾಡುತ್ತಿದ್ದಾರೆ. ದನ-ಕರುಗಳಿಗೆ ಮೇವು ಸಹ ಸಿಗದೆ ಒದ್ದಾಡುತ್ತಿದ್ದಾರೆ. ಜಿಲ್ಲಾಡಳಿತದ ಬೇಜವಾಬ್ದಾರಿತನಕ್ಕೆ ಸಾಮಾಜಿಕ ಅಂತರವಿಲ್ಲದೆ ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಸಿಗಬೇಕಾದ ಸೌಲಭ್ಯ ಕಲ್ಪಿಸೋವರೆಗೂ ಪ್ರತಿಭಟನೆ ಕೈಬಿಡದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
Published On - 12:54 pm, Thu, 11 June 20