ಕೋವಿಡ್ ಸೆಂಟರ್ ಬಿಟ್ಟು ಸೋಂಕಿತರೆಲ್ಲಾ ರಸ್ತೆಗೆ ಬಂದ್ರು.. ಯಾಕೆ?

ಹುಬ್ಬಳ್ಳಿ: ಸರ್ಕಾರ ಕೊರೊನಾ ಪಾಸಿಟಿವ್ ರೋಗಿಗಳ ಆರೈಕೆಗಾಗಿ ಪ್ರತಿನಿತ್ಯ ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಆದ್ರೆ ಹುಬ್ಬಳ್ಳಿಯ ಕೋವಿಡ್ ವಾರ್ಡ್ ನಲ್ಲಿ ಕೊರೊನಾ ಸೋಂಕಿತರು ಪರದಾಡುತ್ತಿರುವಂತಹ ಸ್ಥಿತಿ ಬಂದೊದಿಗಿದೆ. ಸುಮಾರು 60 ಕ್ಕೂ ಹೆಚ್ಚು ಸೋಂಕಿತರಿರೋ ಹುಬ್ಬಳ್ಳಿ ಘಟಿಕೇರಿ ಕೊವಿಡ್ ಕೇರ್ ಸೆಂಟರ್​ನಲ್ಲಿ ಸರಿಯಾಗಿ ಊಟ, ನೀರು, ಟ್ಯಾಬ್ಲೆಟ್, ವೈದ್ಯಕೀಯ ಸಿಬ್ಬಂದಿ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಎಲ್ಲಾ ವಾರ್ಡ್​ಗಳು ಭರ್ತಿಯಾದ ಹಿನ್ನೆಲೆಯಲ್ಲಿ ನೂತನವಾಗಿ ಕೋವಿಡ್ ಸೆಂಟರ್ ತೆರೆಯಲಾಗಿತ್ತು. ಆದ್ರೆ ಈಗ ಇಲ್ಲಿ ಇರೋ ಕೊರೊನಾ […]

ಕೋವಿಡ್ ಸೆಂಟರ್ ಬಿಟ್ಟು ಸೋಂಕಿತರೆಲ್ಲಾ ರಸ್ತೆಗೆ ಬಂದ್ರು.. ಯಾಕೆ?
Edited By:

Updated on: Jul 17, 2020 | 1:18 PM

ಹುಬ್ಬಳ್ಳಿ: ಸರ್ಕಾರ ಕೊರೊನಾ ಪಾಸಿಟಿವ್ ರೋಗಿಗಳ ಆರೈಕೆಗಾಗಿ ಪ್ರತಿನಿತ್ಯ ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ. ಆದ್ರೆ ಹುಬ್ಬಳ್ಳಿಯ ಕೋವಿಡ್ ವಾರ್ಡ್ ನಲ್ಲಿ ಕೊರೊನಾ ಸೋಂಕಿತರು ಪರದಾಡುತ್ತಿರುವಂತಹ ಸ್ಥಿತಿ ಬಂದೊದಿಗಿದೆ. ಸುಮಾರು 60 ಕ್ಕೂ ಹೆಚ್ಚು ಸೋಂಕಿತರಿರೋ ಹುಬ್ಬಳ್ಳಿ ಘಟಿಕೇರಿ ಕೊವಿಡ್ ಕೇರ್ ಸೆಂಟರ್​ನಲ್ಲಿ ಸರಿಯಾಗಿ ಊಟ, ನೀರು, ಟ್ಯಾಬ್ಲೆಟ್, ವೈದ್ಯಕೀಯ ಸಿಬ್ಬಂದಿ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ.

ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಎಲ್ಲಾ ವಾರ್ಡ್​ಗಳು ಭರ್ತಿಯಾದ ಹಿನ್ನೆಲೆಯಲ್ಲಿ ನೂತನವಾಗಿ ಕೋವಿಡ್ ಸೆಂಟರ್ ತೆರೆಯಲಾಗಿತ್ತು. ಆದ್ರೆ ಈಗ ಇಲ್ಲಿ ಇರೋ ಕೊರೊನಾ ಸೋಂಕಿತರ ಕಷ್ಟವನ್ನ ಕೇಳುವವರಿಲ್ಲ ಎನ್ನುವಂತಾಗಿದೆ. ಸೋಂಕಿತರು ಸಾಕಷ್ಟು ಬಾರಿ ಮನವಿ ಮಾಡಿದರೂ ಜಿಲ್ಲಾಡಳಿತ ಕ್ಯಾರೆ ಎನ್ನುತ್ತಿಲ್ಲ. ಹಿಗಾಗೇ ಇಂದು ಸೋಂಕಿತರು ಕೋವಿಡ್ ಸೆಂಟರ್ ಬಿಟ್ಟು, ರಸ್ತೆಗೆ ಬಂದು ಸಿಬ್ಬಂದಿ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಸೊಂಕಿತರಿಗೆ ಚಿಕಿತ್ಸೆ ನೀಡ್ತಾ ಇಲ್ಲವೆಂದು ಪ್ರತಿಭಟನೆ ನಡೆಸಿದ್ರು. ನಂತರ ಕೂಡಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನ ತಿಳಿಗೊಳಿಸಿದ್ರು. ಸುಮಾರು ಅರ್ಧಗಂಟೆ ಕಾಲ ಕೊರೊನಾ ಸೋಂಕಿತರು ತಮ್ಮ ಬೆಡ್​ಗಳನ್ನ ಬಿಟ್ಟು ಕೇರ್ ಸೆಂಟರ್  ಹೊರಗಡೆ ಬಂದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಸ್ಥಳೀಯರು ಕೂಡಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸೋಂಕಿತರೆಲ್ಲಾ ರಸ್ತೆಗೆ ಬಂದ್ರೆ ಇಲ್ಲಿ ಕೊರೊನಾ ಬೇರೆಯವರಿಗೆ ಹಬ್ಬಿದ್ರೆ ಎನ್ ಗತಿ ಎನ್ನುವಂತಾಗಿದೆ.