TV9 Big Impact: ಪಾವತಿಸಬೇಕಿದ್ದ ಬಾಕಿ ಮೊತ್ತ ಕಡಿತಗೊಳಿಸಿದ ಸ್ಪರ್ಶ್ ಆಸ್ಪತ್ರೆ; ಕೊರೊನಾ ಸೋಂಕಿತೆಯ ಕುಟುಂಬದಿಂದ ಟಿವಿ9ಗೆ ಧನ್ಯವಾದ
ಕೊರೊನಾ ಹಿನ್ನೆಲೆ 30 ವರ್ಷದ ಮಹಿಳೆ ಭಾಗ್ಯಮ್ಮ ಎಂಬವರು ಮೇ 30ರಂದು ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 13 ಲಕ್ಷ ರೂಪಾಯಿ ಬಿಲ್ ಆಗಿತ್ತು. 13 ಲಕ್ಷದಲ್ಲಿ 7.5 ಲಕ್ಷ ರೂಪಾಯಿಯನ್ನು ಕುಟುಂಬಸ್ಥರು ಪಾವತಿಸಿದ್ದರು.
ಬೆಂಗಳೂರು: ಕೊರೊನಾ ಸೋಂಕಿತೆಯನ್ನು ಬಿಡುಗಡೆ ಮಾಡಲು ಬಾಕಿ ಮೊತ್ತ ನೀಡುವಂತೆ ಪಟ್ಟು ಹಿಡಿದಿದ್ದ ಖಾಸಗಿ ಆಸ್ಪತ್ರೆಯು ಟಿವಿ9 ವರದಿಯಿಂದ ಎಚ್ಚೆತ್ತುಕೊಂಡಿದೆ. ಬಾಕಿ ಉಳಿದಿರುವ 5.5 ಲಕ್ಷ ರೂಪಾಯಿ ಆಸ್ಪತ್ರೆಯ ಬಿಲ್ನಲ್ಲಿ 1 ಲಕ್ಷ ರೂಪಾಯಿ ಮಾತ್ರ ಪಡೆಯಲು ಸ್ಪರ್ಶ್ ಆಸ್ಪತ್ರೆ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಟಿವಿ9 ವರದಿಯಿಂದ ಯಶವಂತಪುರದ ಸ್ಪರ್ಶ್ ಆಸ್ಪತ್ರೆ ಆಡಳಿತ ಎಚ್ಚೆತ್ತುಕೊಂಡಿದ್ದು, ಇದೀಗ ಸೋಂಕಿತೆಗೆ ಸಹಕಾರ ನೀಡಿದೆ.
ಕೊರೊನಾ ಹಿನ್ನೆಲೆ 30 ವರ್ಷದ ಮಹಿಳೆ ಭಾಗ್ಯಮ್ಮ ಎಂಬವರು ಮೇ 30ರಂದು ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 13 ಲಕ್ಷ ರೂಪಾಯಿ ಬಿಲ್ ಆಗಿತ್ತು. 13 ಲಕ್ಷದಲ್ಲಿ 7.5 ಲಕ್ಷ ರೂಪಾಯಿಯನ್ನು ಕುಟುಂಬಸ್ಥರು ಪಾವತಿಸಿದ್ದರು.
ಆ ಬಳಿಕ ಸೋಂಕಿತೆ ಗುಣಮುಖರಾದ ಹಿನ್ನೆಲೆಯಲ್ಲಿ, ಉಳಿದ ಮೊತ್ತವನ್ನೂ ಕಟ್ಟುವಂತೆ ಆಸ್ಪತ್ರೆಯಿಂದ ಒತ್ತಡ ಹೇರಲಾಗಿತ್ತು. ಬಾಕಿ ಬಿಲ್ 5.5 ಲಕ್ಷ ರೂಪಾಯಿ ಕಟ್ಟುವುದಕ್ಕೆ ಹಣವಿಲ್ಲದೆ ಕುಟುಂಬಸ್ಥರು ಪರದಾಟ ನಡೆಸಿದ್ದರು. ಕುಟುಂಬಸ್ಥರು ರೋಗಿಯನ್ನ ಆಸ್ಪತ್ರೆಯಲ್ಲೇ ಬಿಟ್ಟು ಹೋಗುವುದಾಗಿ ಹೇಳಿದ್ದರು.
ಬಾಕಿ ಶುಲ್ಕ ಕಟ್ಟಿದರೆ ರೋಗಿಯನ್ನ ಡಿಸ್ಚಾರ್ಜ್ ಮಾಡುತ್ತೇವೆ. ಇಲ್ಲದಿದ್ರೆ ಡಿಸ್ಚಾರ್ಜ್ ಮಾಡಲ್ಲ ಎಂದ ಸ್ಪರ್ಶ್ ಆಸ್ಪತ್ರೆ ಸಿಬ್ಬಂದಿ ಬಳಿ ಕುಟುಂಬಸ್ಥರು, ನಮ್ಮ ಬಳಿ ಹಣ ಇಲ್ಲ, ಹೀಗಾಗಿ ಬಾಕಿ ಹಣ ಪಾವತಿಸಲು ಆಗುವುದಿಲ್ಲ. ರೋಗಿಯನ್ನು ನೀವೇ ಇಟ್ಟುಕೊಳ್ಳಿ ಎಂದಿದ್ದರು. ಆಸ್ಪತ್ರೆಯಲ್ಲೇ ರೋಗಿಯನ್ನು ಬಿಟ್ಟುಹೋಗಿದ್ದರು.
ಹೀಗೆ ಕೊರೊನಾ ಸೋಂಕಿತೆಯ ಕುಟುಂಬಸ್ಥರು ಪರದಾಟ ನಡೆಸಿದ್ದ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಟಿವಿ9 ವರದಿ ಬಳಿಕ 1 ಲಕ್ಷ ರೂಪಾಯಿ ಮಾತ್ರ ಪಡೆಯಲು ಆಸ್ಪತ್ರೆಯ ಸಿಬ್ಬಂದಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಟಿವಿ9ಗೆ ಭಾಗ್ಯಮ್ಮನ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ.
ಆಸ್ಪತ್ರೆ ಬಿಲ್ 5.5 ಲಕ್ಷ ರೂಪಾಯಿಯ ಬದಲು 1 ಲಕ್ಷ ರೂಪಾಯಿ ಮಾತ್ರ ಪಡೆಯಲು ಆಸ್ಪತ್ರೆ ಇದೀಗ ಒಪ್ಪಿಗೆ ಸೂಚಿಸಿದೆ. ಈ ಕಾರಣದಿಂದ, ಟಿವಿ9 ಸಂಸ್ಥೆಗೆ ಭಾಗ್ಯಮ್ಮನ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ಹೆಚ್ಚು ಹೆಚ್ಚು ಜನಕ್ಕೆ ನೀಡಿದಷ್ಟೂ ಕೊರೊನಾ ಮೂರನೆ ಅಲೆಯಿಂದ ಬಚಾವಾಗಬಹುದು ಅನ್ನುತ್ತಿದೆ ಅಧ್ಯಯನ ವರದಿ