ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಕ್ರಿಮಿ ಅಟ್ಟಹಾಸ ಮೆರೆಯುತ್ತಿದೆ. ಎಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡ್ರೂ ಕೊರೊನಾ ಅಬ್ಬರ ಕಡಿಮೆಯಾಗುತ್ತಿಲ್ಲ. ಇಂತಹ ಸಮಯದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದ್ರೆ ರಾಜ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಮಹಾ ಎಡವಟ್ಟು ಮಾಡಿಕೊಂಡಿದೆ.
ಮೇ 17ರಂದು 32 ವರ್ಷದ ವ್ಯಕ್ತಿ ತಾನಾಗಿಯೇ ಬಂದು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದನು. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಗಂಟಲು ದ್ರವ ಸಂಗ್ರಹಿಸಿ, ಮಾಹಿತಿ ಪಡೆದು ಆತನನ್ನು ಮನೆಗೆ ಕಳುಹಿಸಿದ್ದರು.
ನಿನ್ನೆ ಸಂಜೆ ಆತನ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಎಂದು ದೃಢಪಟ್ಟಿದೆ. ಹಾಗಾಗಿ ನಿನ್ನೆ ರಾತ್ರಿ ಆತನ ವಿಳಾಸಕ್ಕೆ ಹೋಗಿ ಆಶಾ ಕಾರ್ಯಕರ್ತೆಯರು ಹುಡುಕಾಡಿದ್ರೆ ಆ ವಿಳಾಸದಲ್ಲಿ ವ್ಯಕ್ತಿಯೇ ಇಲ್ಲ. ಅಂದು ಕೊರೊನಾ ಟೆಸ್ಟ್ ವೇಳೆ ಆತ ಕೆಜಿ ಹಳ್ಳಿ ವಿಳಾಸ ನೀಡಿದ್ದ. ಇದೀಗ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದ್ದ ನಿನ್ನೆ ಸಂಜೆಯಿಂದ ವ್ಯಕ್ತಿಗಾಗಿ ಅಧಿಕಾರಿಗಳ ಶೋಧ ನಡೆಸುತ್ತಿದ್ದಾರೆ.
Published On - 12:50 pm, Tue, 19 May 20