ಮಹಾಮಾರಿ ಕೊರೊನಾಗೆ ಅರ್ಚಕ ಸಾವು, ನವ ಜೋಡಿಗೆ ಶುರುವಾಯ್ತು ಆತಂಕ!

| Updated By: ಆಯೇಷಾ ಬಾನು

Updated on: Jun 04, 2020 | 3:44 PM

ಗದಗ: ಕಿಲ್ಲರ್ ಕೊರೊನಾ ವೈರಸ್​ಗೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 44 ವರ್ಷದ ಅರ್ಚಕ ಬಲಿಯಾಗಿದ್ದಾರೆ. ಇದೀಗ ಅರ್ಚಕನ ಟ್ರಾವೆಲ್ ಹಿಸ್ಟರಿ ಆತಂಕ ಸೃಷ್ಟಿಸಿದೆ. ಏಕೆಂದರೆ ಆ ಅರ್ಚಕ ಸಾವಿಗೂ ಮುನ್ನ ಹಲವಾರು ಜೋಡಿಗೆ ಮದುವೆ ಮಾಡಿಸಿದ್ದಾನೆ. ಲಾಕ್​ಡೌನ್ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲೂ ‌ಹಲವರಿಗೆ ಸೋಂಕಿತ ಮದುವೆ ಮಾಡಿಸಿದ್ದಾನೆ. ಸದ್ಯ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗಾಗಿ ಮದುವೆ ಮಾಡಿಸಿಕೊಂಡವರಿಗೆಲ್ಲ ಇದೀಗ ಕೊರೊನಾ ಭಯ ಕಾಡುತ್ತಿದೆ. […]

ಮಹಾಮಾರಿ ಕೊರೊನಾಗೆ ಅರ್ಚಕ ಸಾವು, ನವ ಜೋಡಿಗೆ ಶುರುವಾಯ್ತು ಆತಂಕ!
Follow us on

ಗದಗ: ಕಿಲ್ಲರ್ ಕೊರೊನಾ ವೈರಸ್​ಗೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ 44 ವರ್ಷದ ಅರ್ಚಕ ಬಲಿಯಾಗಿದ್ದಾರೆ. ಇದೀಗ ಅರ್ಚಕನ ಟ್ರಾವೆಲ್ ಹಿಸ್ಟರಿ ಆತಂಕ ಸೃಷ್ಟಿಸಿದೆ. ಏಕೆಂದರೆ ಆ ಅರ್ಚಕ ಸಾವಿಗೂ ಮುನ್ನ ಹಲವಾರು ಜೋಡಿಗೆ ಮದುವೆ ಮಾಡಿಸಿದ್ದಾನೆ.

ಲಾಕ್​ಡೌನ್ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಲ್ಲೂ ‌ಹಲವರಿಗೆ ಸೋಂಕಿತ ಮದುವೆ ಮಾಡಿಸಿದ್ದಾನೆ. ಸದ್ಯ ವ್ಯಕ್ತಿಯ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಾಗಾಗಿ ಮದುವೆ ಮಾಡಿಸಿಕೊಂಡವರಿಗೆಲ್ಲ ಇದೀಗ ಕೊರೊನಾ ಭಯ ಕಾಡುತ್ತಿದೆ.

ಮೃತ ಸೋಂಕಿತ ವ್ಯಕ್ತಿಗೆ ಗಂಜಿ ಬಸವೇಶ್ವರ ಓಣಿಯಿಂದ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಕೊರೊನಾದಿಂದ ಕಂಟೈನ್​ಮೆಂಟ್​ ಜೋನ್ ಎಂದು ಗಂಜಿ ಬಸವೇಶ್ವರ ಓಣಿಯನ್ನು ಗುರುತಿಸಲಾಗಿದೆ. ಕೊರೊನಾ ಭಯದಿಂದ ಸ್ವಯಂ ಪ್ರೇರಿತವಾಗಿ ಗ್ರಾಮಸ್ಥರು ಲಕ್ಕುಂಡಿ ಗ್ರಾಮವನ್ನು ಸಂಪೂರ್ಣ ಸೀಲ್​ಡೌನ್ ಮಾಡಿದ್ದಾರೆ.

Published On - 2:27 pm, Thu, 4 June 20