
ಸೋಂಕಿತರ ಪೈಕಿ 3,00,770 ಜನ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ ಹಾಗೂ ಉಳಿದ 97,001 ಸೋಂಕಿತರಿಗೆ ವಿವಿಧ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಇಂದು 48 ಜನ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ವ್ಯಾಧಿಗೆ ತುತ್ತಾದವರ ಸಂಖ್ಯೆ 2,211 ತಲುಪಿದೆ. ನಗರದಲ್ಲಿಂದು 2,942 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದು ಪೀಡಿತರ ಸಂಖ್ಯೆ 1,50,523ಕ್ಕೇರಿದೆ. ಅವರ ಪೈಕಿ 1,08,642 ಜನರು ಗುಣಮುಖರಾಗಿದ್ದಾರೆ ಮತ್ತು ಉಳಿದ 39,669 ಸೋಂಕಿತರು ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.