ಸೋಂಕಿಗೆ ತಾಯಿ ಕಳೆದುಕೊಂಡ ಗರ್ಭಿಣಿ, ಮತ್ತೊಮ್ಮೆ ಮಗಳಾಗಿ ಪಡೆದಳು!

| Updated By: ಸಾಧು ಶ್ರೀನಾಥ್​

Updated on: Jul 16, 2020 | 7:49 PM

ಚಿಕ್ಕಮಗಳೂರು: ಮಾತೃ ವಿಯೋಗದ ಮಧ್ಯೆಯೂ ಸೋಂಕಿತ ಗರ್ಭಿಣಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಕೊವಿಡ್ ಅಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ನಿವಾಸಿಯಾದ ಗರ್ಭಿಣಿಗೆ ಮತ್ತು ಆಕೆಯ ತಾಯಿಗೆ ನಿನ್ನೆ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಆಕೆಯನ್ನು ಜಿಲ್ಲೆಯ ಕೊವಿಡ್ ಅಸ್ಪತ್ರೆಗೆ ದಾಖಲಿಸಲಾಗಿದ್ದು ಗರ್ಭಿಣಿಯ ತಾಯಿಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಗರ್ಭಿಣಿಯ ತಾಯಿ ಚಿಕಿತ್ಸೆಗೆ ಸ್ಪಂದಿಸದೆ ಇಂದುಯ ಸಾವನ್ನಪ್ಪಿದ್ದಾರೆ. ಹೆತ್ತ ತಾಯಿಯನ್ನ ಕಳೆದುಕೊಂಡ ನೋವಿನಲ್ಲಿದ್ದ ಗರ್ಭಿಣಿ ಬೇನೆ ಕಾಣಿಸಿಕೊಂಡಿದ್ದು ಇಂದು ಹೆಣ್ಣುಮಗುವಿಗೆ ಜನ್ಮ […]

ಸೋಂಕಿಗೆ ತಾಯಿ ಕಳೆದುಕೊಂಡ ಗರ್ಭಿಣಿ, ಮತ್ತೊಮ್ಮೆ ಮಗಳಾಗಿ ಪಡೆದಳು!
Follow us on

ಚಿಕ್ಕಮಗಳೂರು: ಮಾತೃ ವಿಯೋಗದ ಮಧ್ಯೆಯೂ ಸೋಂಕಿತ ಗರ್ಭಿಣಿ ಹೆಣ್ಣುಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಕೊವಿಡ್ ಅಸ್ಪತ್ರೆಯಲ್ಲಿ ನಡೆದಿದೆ.

ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ನಿವಾಸಿಯಾದ ಗರ್ಭಿಣಿಗೆ ಮತ್ತು ಆಕೆಯ ತಾಯಿಗೆ ನಿನ್ನೆ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಆಕೆಯನ್ನು ಜಿಲ್ಲೆಯ ಕೊವಿಡ್ ಅಸ್ಪತ್ರೆಗೆ ದಾಖಲಿಸಲಾಗಿದ್ದು ಗರ್ಭಿಣಿಯ ತಾಯಿಯನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಗರ್ಭಿಣಿಯ ತಾಯಿ ಚಿಕಿತ್ಸೆಗೆ ಸ್ಪಂದಿಸದೆ ಇಂದುಯ ಸಾವನ್ನಪ್ಪಿದ್ದಾರೆ.

ಹೆತ್ತ ತಾಯಿಯನ್ನ ಕಳೆದುಕೊಂಡ ನೋವಿನಲ್ಲಿದ್ದ ಗರ್ಭಿಣಿ ಬೇನೆ ಕಾಣಿಸಿಕೊಂಡಿದ್ದು ಇಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಈ ಮೂಲಕ ಅಮ್ಮನನ್ನ ಕಳೆದುಕೊಂಡ ಮಹಿಳೆ ಹೆಣ್ಣು ಕೂಸಿಗೆ ಜನ್ಮ ನೀಡಿ ಮತ್ತೊಮ್ಮೆ ಆಕೆಯನ್ನ ಪಡೆದು ಕೊಂಡಿದ್ದಾಳೆ. ಸದ್ಯಕ್ಕೆ ಮಗು ಆರೋಗ್ಯವಾಗಿದ್ದು ಅದರ ಮೇಲೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ.

Published On - 7:39 pm, Thu, 16 July 20