ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ. ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ […]

ಅಮೃತ ನೀಡುವ ಹಸು ಒದ್ದಾಡುತ್ತಿದ್ದರೂ ಬರಲಿಲ್ಲ ಜನ ಸಹಾಯಕ್ಕೆ.. ವಿಡಿಯೋ ಮಾಡ್ತಿದ್ರು!
Ayesha Banu

|

Aug 21, 2020 | 2:27 PM

ಯಾದಗಿರಿ: ವಿಶ್ವ ಮಾತೆ ಗೋವಿಗೆ ಆಗುತ್ತಿರುವ ನೋವುಗಳನ್ನು ನಾವು ಆಗಾಗ ನೋಡುತ್ತಿದ್ದೇವೆ. ಆಹಾರ ಸೇವಿಸಲು ಹೋದ ಹಸು ಸಿಡಿಮದ್ದು ಸ್ಪೋಟಗೊಂಡು ಮೃತಪಟ್ಟಿದ್ದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಈ ರೀತಿ ಪ್ರಾಣಿಗಳಿಗೆ ಮನುಷ್ಯರಿಂದ ಆಗುತ್ತಿರುವ ಹಿಂಸೆ ಅನೇಕ.

ಈಗ ತೆರೆದ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದ ಘಟನೆ ಯಾದಗಿರಿ ನಗರದ ಚಿರಂಜೀವಿ ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಆದರೆ ವಿಪರ್ಯಾಸ ಎಂದರೆ ಮ್ಯಾನ್ ಹೋಲ್​ನಲ್ಲಿ ಹಸು ಬಿದ್ದಿರಿವುದನ್ನ ಕಂಡರೂ  ಜನ ಸಹಾಯಕ್ಕೆ ಬಂದಿಲ್ಲ. ಹಸುವನ್ನ ಹೊರ ತೆಗೆಯದೆ ಫೋಟೋ ವಿಡಿಯೋ ಮಾಡುವುದರಲ್ಲಿ ಬ್ಯೂಸಿಯಾಗಿದ್ರು.

ಮೂಕ ಪ್ರಾಣಿಯ ರೋದನೆ ಕಂಡರೂ ಹಸುವನ್ನು ಹೊರತೆಗೆಯದೆ ಮಾನವೀಯತೆ ಮರೆತಿದ್ದಾರೆ. ಮೂರು ಗಂಟೆಗಳ ಕಾಲ ಮ್ಯಾನ್ ಹೋಲ್​ನಲ್ಲಿ ಬಿದ್ದು ಹಸು ಒದ್ದಾಡಿದೆ. ಮೂರು ಗಂಟೆ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಮಾಂಸ ತಿನ್ನಲು ಗರ್ಭಿಣಿ ಕಾಡೆಮ್ಮೆಯನ್ನೂ ಬಿಡದೆ ಕೊಂದ ಕಿರಾತಕರು, ಎಲ್ಲಿ?

ಈ ಮಾದರಿ ನೆರವಾಗೋ ಜನರಿರುತ್ತಾರೆ ಓದಿ… :ಗಾಯಗೊಂಡ ಹಸುವನ್ನು ಸ್ಥಳಾಂತರಿಸಲು ಈ ರೈತ ಮಾಡಿದ ಸಾಹಸ ನಿಜಕ್ಕೂ ರೋಚಕ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada